• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others ABPS

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

Vishwa Samvada Kendra by Vishwa Samvada Kendra
March 14, 2022
in ABPS, RSS ABPS 2022
293
0
576
SHARES
1.6k
VIEWS
Share on FacebookShare on Twitter

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಗುಜರಾತಿನ ಕರ್ಣಾವತಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಪ್ರತಿನಿಧಿ ಸಭಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಭಾರತದ ವಿಚಾರವನ್ನು ಬಲಗೊಳಿಸುವ ನಿಟ್ಟಿನಲ್ಲಿ ,ಅದನ್ನು ಪ್ರಭಾವಿಯಾಗಿಸುವ ಕಾರ್ಯದಲ್ಲಿ ಮುಂದಿನ ವರ್ಷಗಳಲ್ಲಿ ವಿಶೇಷವಾದ ಪ್ರಯತ್ನ ಮಾಡುವ ನಿರ್ಣಯ ಮಾಡಲಾಗಿದೆ ಎಂದರು‌.

ಅವರು ಮಾತನಾಡುತ್ತಾ ಭಾರತದ ಹಿಂದೂ ಸಮಾಜ,ಸಂಸ್ಕೃತಿ,ಇತಿಹಾಸ ,ಇಲ್ಲಿನ ಜೀವನ ಪದ್ಧತಿಯ ಕುರಿತಾದ ಸರಿಯಾದ ಚಿತ್ರಣವನ್ನು ಸಮಾಜದೆದುರು ಇಡಬೇಕಾಗಿದೆ‌.ಭಾರತದಲ್ಲಿ ಮತ್ತು ವಿದೇಶಗಳಲ್ಲೂ ಕೂಡ ಭಾರತದ ಕುರಿತಾಗಿ ಅಜ್ಞಾನದ ಕಾರಣದಿಂದಲೊ ಅಥವಾ  ಗೊತ್ತಿದ್ದೂ ಕೂಡ ಸುಳ್ಳುಗಳನ್ನು ಹಬ್ಬಿಸುವ ಷಡ್ಯಂತ್ರ ಬಹಳ ದೀರ್ಘ ಸಮಯದಿಂದ ನಡೆಯುತ್ತಿದೆ. ಈ ರೀತಿಯ ವೈಚಾರಿಕ ವಿಮರ್ಶೆಯನ್ನು ಬದಲಿಸಿ,ಸತ್ಯದ ಆಧಾರದ ಮೇಲೆ ಭಾರತದ ಬೋಧೆಯನ್ನು ಸರಿಯಾಗಿ ವಿಮರ್ಶಿಸುತ್ತಾ ಮುಂದೆ ಹೋಗುವ ಅಗತ್ಯವಿದೆ‌.ಸಮಾಜದ ಅನೇಕ ಮಂದಿ ಈ ವಿಷಯದ ಕುರಿತಾಗಿ ಕಾರ್ಯ ನೆರವೇರಿಸುತ್ತಿದ್ದಾರೆ,ಸಂಶೋಧನೆ ನಡೆಸುತ್ತಿದ್ದಾರೆ‌,ಪುಸ್ತಕಗಳನ್ನು ಬರೆಯುತ್ತಿದ್ದಾರೆ.ಈ ವಿಮರ್ಶೆಯನ್ನು ಮುಂದುವರೆಸಲು ಅವರೊಂದಿಗೂ ಸಮನ್ವಯದಿಂದ ಕೆಲಸ ಮಾಡಬೇಕಿದೆ.
ಸಂಘದ ಶತಾಬ್ದಿ ವರ್ಷ ಸಮೀಪದಲ್ಲಿದೆ.ಪ್ರತಿ ಮೂರು ವರ್ಷಗಳಿಗೆ ಸಂಘ ಕಾರ್ಯದ ವಿಸ್ತಾರ(ಭೌಗೋಳಿಕ ಮತ್ತು ಸಂಘ ಕಾರ್ಯದ ಆಯಾಮ)ದ ಕುರಿತಾಗಿ ಯೋಜನೆಯನ್ನು ಮಾಡಲಾಗುತ್ತದೆ. ಆ ಯೋಜನೆಯ ಪ್ರಕಾರ ಕಾರ್ಯನಡೆಸಲಾಗುತ್ತದೆ.ಮತ್ತು ಪ್ರತಿ ವರ್ಷ ಎರಡು ಬಾರಿ (ಕಾರ್ಯಕಾರಿ ಮಂಡಲ ಮತ್ತು ಪ್ರತಿನಿಧಿ ಸಭಾ) ಅದರ ಅವಲೋಕನ ನಡೆಸಲಾಗುತ್ತದೆ. ಈಗ ದೇಶಾದ್ಯಂತ ಶೇ50 ರಷ್ಟು ಮಂಡಲಗಳಲ್ಲಿ ಸಂಘಕಾರ್ಯ ತಲುಪಿದೆ. ಮುಂದಿನ ಎರಡು ವರ್ಷಗಳಲ್ಲಿ ಎಲ್ಲ ಮಂಡಲಗಳಲ್ಲಿಯೂ ಸಂಘ ಕಾರ್ಯವನ್ನು ತಲುಪಿಸುವ ಗುರಿ ಮತ್ತು ಯೋಜನೆಯೂ ಇದೆ.ನಗರ ಪ್ರದೇಶಗಳಲ್ಲಿ ಶೇ45 ರಷ್ಟು ಸಂಘ ಕಾರ್ಯವ್ಯಾಪ್ತಿ ಇದೆ.ಇನ್ನು ಎರಡು ವರ್ಷಗಳಲ್ಲಿ ಎಲ್ಲ ಬಸ್ತಿಗಳಲ್ಲಿಯೂ ಸಂಘ ಕಾರ್ಯವನ್ನು ತಲುಪಿಸುವ ಗುರಿ ಮತ್ತು ಯೋಜನೆಯಿದೆ.

READ ALSO

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

ABPS Resolution – Need to promote work opportunities to make Bharat Self Reliant

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರು ಮಾತನಾಡುತ್ತಾ, ಸಂಘ ಕಾರ್ಯದ ವಿಸ್ತಾರ ಮತ್ತು ಅದನ್ನು ಮುಂದೆ ತೆಗೆದುಕೊಂಡು ಹೋಗುವ ಉದ್ದೇಶ ಕೇವಲ ಸಂಖ್ಯಾತ್ಮಕವಾದ ಅಥವಾ ಗರ್ವದ ಪ್ರತೀಕವಲ್ಲ.ಸಂಘದ ಸ್ವಯಂಸೇವಕ ಪ್ರತಿ ಬಸ್ತಿ ಮಂಡಲಗಳಲ್ಲಿದ್ದಾನೆ ಅಥವಾ ಪ್ರತಿ ಮಂಡಲದಲ್ಲೂ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಾವವನ್ನು ಜಾಗೃತಗೊಳಿಸುವ ಒಬ್ಬ ವ್ಯಕ್ತಿ ಇದ್ದಾನೆ ಎಂದರ್ಥ.ಅವನು ಸಮಾಜದ ಸಂಕಟದ ಸಮಯದಲ್ಲಿ ಸಂವೇದನೆಯಿಂದ ಸಮಾಜದ ಎಲ್ಲ ಜನರನ್ನು ಜೋಡಿಸುವ ವ್ಯಕ್ತಿಯಾಗಿರುತ್ತಾನೆ.ಹೀಗಾಗಿಯೇ ಸಂಘ ತನ್ನ ಸಂಘಟನೆಯ ಬಲವನ್ನು ಹೆಚ್ಚುಗೊಳಿಸಿಕೊಳ್ಳುವ ಉದ್ದೇಶ ಹೊಂದಿದೆ. ಈ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಾಗಬೇಕಿದೆ.ಸಾಮಾಜಿಕ ಏಕತೆ, ಸಮರಸತೆ,ಸಂಘಟನೆಯ ಭಾವ ಹೆಚ್ಚಾಗಬೇಕಿದೆ.ಇದಕ್ಕಾಗಿಯೇ ಸಂಘದ ಶಾಖೆಯಿದೆ.ಇದೇ ಭಾವವನ್ನೇ ಅರ್ಥ ಮಾಡಿಸುತ್ತಾ ಸಮಾಜವೂ ನಮಗೆ ಸಹಯೋಗ ನೀಡಿದೆ.ಅದನ್ನು ಸ್ವೀಕರಿಸಿದೆ.

ಸ್ವಯಂಸೇವಕ ಸಮಾಜದ ವಿಭಿನ್ನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ.ಸ್ವಯಂಸೇವಕನ ಹೆಜ್ಜೆಯ ಜೊತೆಗೆ ಸಮಾಜದ ಸಜ್ಜನ ಶಕ್ತಿಯ ಸಹಯೋಗದೊಂದಿಗೆ ಸಮಾಜದ ಪರಿವರ್ತನೆಯ ಕಾರ್ಯವನ್ನು ಪರಿಣಾಮಕಾರಿಯಾಗಿ ಸರಿಯಾದ ರೀತಿಯಲ್ಲಿ ಮುಂದುವರೆಸಬೇಕಾಗಿದೆ.ನಾವು ರೇಸಿನಲ್ಲಿ ಮುಂದಿರಬೇಕಾಗಿಲ್ಲ.ಬದಲಾಗಿ ಎಲ್ಲರೂ ಒಟ್ಟುಗೂಡಿ ತಾಳಮೇಳದಿಂದ ಕಾರ್ಯ ನಡೆಸಬೇಕಿದೆ.ಹಾಗಾಗಿಯೇ ಕೇವಲ ಸಂಘಟನೆಯ ಸಂರಚನೆಯಲ್ಲಿ ಮಾತ್ರವೇ ಕೆಲಸ ಮಾಡುತ್ತಿಲ್ಲ.ಸಮಾಜ ಪರಿವರ್ತನೆಯ ಕಾರ್ಯವನ್ನು ಒಂದು ಆಂದೋಲನವನ್ನಾಗಿಸಬೇಕಿದೆ‌.ನಾವು ದೇಶದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಒಂದು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಬೇಕೆಂದಿದ್ದೇವೆ.ಈಗ ದೇಶದಲ್ಲಿ 400 ಪ್ರಭಾತ ಗ್ರಾಮಗಳಿವೆ‌.ಅಲ್ಲಿ ಕೆಲವು ಪರಿವರ್ತನೆಗಳು ಕಾಣುತ್ತದೆ.ಇದೇ ರೀತಿಯಲ್ಲಿ ಕುಟುಂಬ ಪ್ರಬೋಧನ,ಸಾಮಾಜಿಕ ಸಮರಸತೆ,ಪರಿಸರ ಸಂರಕ್ಷಣೆ,ಗೋಸೇವಾ ಸಂವರ್ಧನ ಕ್ಷೇತ್ರದಲ್ಲೂ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಮಾತನಾಡುತ್ತಾ,ಭಾರತ ತನ್ನ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ‌.ಸ್ವಾತಂತ್ರ್ಯ ಆಂದೋಲನ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿಯಾಗಿತ್ತು.ಆದರೆ ಕೆಲವು ಸತ್ಯಗಳು ಮುನ್ನೆಲೆಗೆ ಬರಲಿಲ್ಲ ಅದನ್ನು ದಬಾವಣೆ ಮಾಡಲಾಯಿತು. ಸ್ವಾತಂತ್ರ್ಯ ಸೇನಾನಿಗಳು ಸಂಘಟಿತ ಸಂಪನ್ನ ಭಾರತದ ಕನಸು ಕಂಡಿದ್ದರು.ಅದನ್ನು ಸಾಕಾರಗೊಳಿಸುವ ಕಾರ್ಯ ವರ್ತಮಾನದ ಪೀಳಿಗೆ ಮಾಡಬೇಕಾಗಿದೆ‌.ಈ ದೃಷ್ಟಿಯಿಂದ ವಿಭಿನ್ನ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ‌.

ಎರಡು ಕ್ಷೇತ್ರದಲ್ಲಿ ವಿಶೇಷ ಕಾರ್ಯವನ್ನು ನಡೆಸುವ ಅವಶ್ಯಕತೆ ಬಹಳವಿದೆ.ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಲಯಗಳು ಬಂದ್‌ಆದ ಕಾರಣದಿಂದ ವಿದ್ಯಾರ್ಥಿಗಳ ವಿಕಾಸದ ಮೇಲೆ ಪರಿಣಾಮ ಬೀರುತ್ತಿದೆ.ಈ ನಿಟ್ಟಿನಲ್ಲಿ ಸಂಘದ ಸ್ವಯಂಸೇವಕರು ಕೆಲಸ ಮಾಡುತ್ತಿದ್ದಾರೆ‌.ಆನ್‌ಲೈನ್ ಮಾಧ್ಯಮದಿಂದ ಓದು ಮುಂದುವರೆಯುತ್ತಿದೆ.ಆದರೆ ಸುಮಾರೆಲ್ಲ ವಿಚಾರಗಳು ಅರ್ಧಕ್ಕೇ ನಿಂತು ಹೋದವು.ಹೀಗಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಅವಶ್ಯಕತೆ ಬಹಳವಿದೆ. ಎರಡನೆಯದು ಕೊರೋನಾದ ಕಾರಣದಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ.ಸ್ವಾವಲಂಬನೆಯ ಕುರಿತಾಗಿಯೂ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಒಂದು ಪ್ರಸ್ತಾಪವನ್ನು ಮುಂದಿಡಲಾಯಿತು.ಪ್ರಾಕೃತಿಕ ಸಂಸಾಧನೆಗಳ ಪ್ರಚುರತೆ, ಮಾನವ ಸಂಪನ್ಮೂಲದ ವಿಪುಲತೆ ಮತ್ತು ಅಂತರ್ಗತವಾಗಿರುವ ಉದ್ಯಮಕೌಶಲವನ್ನು ಉಪಯೋಗಿಸಿಕೊಂಡು ತನ್ನ ಕೃಷಿ,ಉತ್ಪಾದನೆ ಮತ್ತು ಸೇವಾ ಕ್ಷೇತ್ರದಲ್ಲಿ ಪರಿವರ್ತನೆ ಮಾಡುವ ಕೆಲಸದ ಅವಕಾಶದಿಂದ ಆತ್ಮನಿರ್ಭರರಾಗುವ ಕ್ಷಮತೆ ಲಭಿಸಲಿದೆ.ಈ ಕ್ಷಮತೆಯ ಸದುಪಯೋಗ ಪಡಿಸಿಕೊಳ್ಳಲು ಒಂದೆಡೆ ಸರಕಾರದ ಯೋಜನೆಗಳು ಬೇಕಾಗುತ್ತದೆ‌,ಇನ್ನೊಂದೆಡೆ  ಸಮಾಜದ ಕೆಲಸ ಮಾಡುವ ಉತ್ಸಾಹವೂ ಹೆಚ್ಚಾಗಬೇಕಿದೆ.

ಗುಜರಾತಿನ ಸ್ವಯಂಸೇವಕರು ಮತ್ತು ಸಮಾಜದ ಬಂಧುಗಳು ದಶಕಗಳಿಂದ ಸಂಘ ಕಾರ್ಯದ ಸಹಯೋಗ ಮತ್ತು ಸಹಭಾಗಿಗಳಾಗಿ ಕಾರ್ಯ ನಿರ್ವಹಿಸುತ್ತಾ ಸಧೃಢರಾಗಿದ್ದಾರೆ‌.ಸಂಘ ಕಾರ್ಯವನ್ನು ತಮ್ಮದೇ ಕಾರ್ಯವೆಂದು ಸಹಯೋಗ ನೀಡಿದ ಅವರಿಗೆ ನಮ್ಮ ಕೃತಜ್ಞತೆಗಳು.

  • email
  • facebook
  • twitter
  • google+
  • WhatsApp
Tags: 3 day ABPSABPSABPS 2022Abps rss

Related Posts

ABPS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022
ABPS

ABPS Resolution – Need to promote work opportunities to make Bharat Self Reliant

March 13, 2022
ABPS

ಸ್ವ’ ಆಧಾರಿತ ಜೀವನ ದೃಷ್ಟಿಯನ್ನು ಮರು ಸ್ಥಾಪಿಸಲು ಬದ್ಧರಾಗಿ – ಶ್ರೀ ದತ್ತಾತ್ರೇಯ ಹೊಸಬಾಳೆ

March 12, 2022
RSS ABPS 2022

RSS-ABPS 2022 pays homage to departed souls

March 12, 2022
ABPS

ಅಖಿಲ ಭಾರತ ಪ್ರತಿನಿಧಿ ಸಭಾ ಕುರಿತಾಗಿ ಅಖಿಲ ಭಾರತ ಪ್ರಚಾರ ಪ್ರಮುಖರ ಪತ್ರಿಕಾಗೋಷ್ಠಿಯ ಪ್ರಮುಖ ಅಂಶಗಳು.

March 9, 2022
Changes in Responsibilities and the new RSS team #RSSABPS #RSSABPS2021
ABPS

Changes in Responsibilities and the new RSS team #RSSABPS #RSSABPS2021

March 20, 2021
Next Post

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ - ಇಂದಿನ ಅಗತ್ಯ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರದಿಂದ ಉನ್ನತಾಧಿಕಾರದ ಸಮಿತಿ ರಚನೆ

ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರದಿಂದ ಉನ್ನತಾಧಿಕಾರದ ಸಮಿತಿ ರಚನೆ

November 16, 2021

ABVP National Meet: Resolution-1

June 8, 2012

3 SDPI activists arrested on charges of attacking RSS workers

August 25, 2019
Bajarangadal 2-day ‘Pranth Baitak’ held at Ujire

Bajarangadal 2-day ‘Pranth Baitak’ held at Ujire

September 22, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In