• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ರಾಮಕೃಷ್ಣ ಪರಮಹಂಸರು ಭಾರತದ ಯುವಜನತೆಗೆ ದಾರಿದೀಪ…

Vishwa Samvada Kendra by Vishwa Samvada Kendra
February 18, 2022
in Articles
251
0
ರಾಮಕೃಷ್ಣ ಪರಮಹಂಸರು ಭಾರತದ ಯುವಜನತೆಗೆ ದಾರಿದೀಪ…
493
SHARES
1.4k
VIEWS
Share on FacebookShare on Twitter

ರಾಮಕೃಷ್ಣ ಪರಮಹಂಸರು! ಹೀಗೊಂದು ಹೆಸರು ಕೇಳಿದರೆ ಯುವಕರ ಮೈಮನದಲ್ಲಿ ದಿವ್ಯ ಸಾನ್ನಿಧ್ಯವೊಂದರ ವಿದ್ಯುತ್ ಸಂಚಾರವಾಗುತ್ತದೆ. ಇಡೀ ಜಗತ್ತಿಗೆ ಸತ್ವ ಶಕ್ತಿಯ ಪ್ರವಾಹವನ್ನೇ ಹರಿಸಿದವರು ಅವರು.ಶಿಷ್ಯಗಣದ ಮಹತ್ ಶಕ್ತಿಯ ತೊರೆಯಲ್ಲಿ ಜಗತ್ತಿಗೆ ಬೆಳಕು ನೀಡಿದ ಮಹಾತ್ಮರವರು.ಭಾರತದ ಆತ್ಮಕ್ಕೆ ಹೊಸ ಉಡುಗೆಯುಡಿಸಿ ಸಿಂಗರಿಸಿ ಹೊಸ ಮನ್ವಂತರಕ್ಕೆ ಸಾಕ್ಷಿಯಾದ ಮಹಾಪುರುಷರು.

ಯುವಸಮೂಹಕ್ಕೆ ತಾನು ಹೇಳಿದ್ದೆ ಪರಮ ಸತ್ಯ ನೀವು ಅವುಗಳನ್ನ ಒಪ್ಪಿಕೊಳ್ಳಬೇಕು ಎಂದವರಲ್ಲ, ಬದಲಾಗಿ ಯಾವುದನ್ನೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳಬೇಡಿ ಎಂದವರವರು,

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಸ್ವತಃ ಶಿಷ್ಯ ನರೇಂದ್ರನಾಥನಿಗೆ ನೀನು ಸುಮ್ಮನೆ ನನ್ನನ್ನ ಗುರುವಾಗಿ ಒಪ್ಪಿಕೊಳ್ಳಬೇಡ,ಹೇಗೆ ಸಾಲ ಕೊಟ್ಟವರು ಒಂದೊಂದು ಕಾಸನ್ನೂ ಪೂರ್ಣಾವಾಗಿ ಪರಿಶೀಲಿಸಿ ತೆಗೆದುಕೊಳ್ಳತ್ತಾರೋ ಅಷ್ಟೇ ಕೂಲಂಕುಷವಾಗಿ ಪರೀಕ್ಷೆ ಮಾಡು ಎನ್ನುತ್ತಾರೆ.

ಹೀಗಿರುವಾಗ ಒಮ್ಮೆ ದಕ್ಷಿಣೇಶ್ವರಕ್ಕೆ ಭೇಟಿಗೆಂದು ಬಂದ ನರೇಂದ್ರನಾಥ ರಾಮಕೃಷ್ಣ ಪರಮಹಂಸರಿಗೆ ಹಣವೆಂದರೆ ಆಗಿ ಬರುವುದಿಲ್ಲ ಎಂದು ಕಂಡುಕೊಂಡು, ರಾಮಕೃಷ್ಣರಿಲ್ಲದಾಗ ಅವರ ಕೊಠಡಿಯ ಹಾಸಿಗೆಯಡಿ ಬೆಳ್ಳಿ ನಾಣ್ಯವೊಂದನ್ನಿರಿಸುತ್ತಾನೆ, ಎಲ್ಲ ಕೆಲಸಗಳ ತರುವಾಯದಲ್ಲಿ ವಿಶ್ರಾಂತಿಗೆಂದು ಬಂದ ಅವರು ಹಾಸಿಗೆಯ ಮೇಲೆ ಕೂತಾಗ ಮುಳ್ಳು ಚುಚ್ಚಿದವರಂತೆ ಕೆಳಗೆ ಹಾರುತ್ತಾರೆ.ಹೀಗೆ ನರೇಂದ್ರನಾಥನ ಪರೀಕ್ಷೆಯನ್ನೂ ನಗುನಗುತ್ತಾ ತಮ್ಮನ್ನ ಸ್ವೀಕರಿಸಿದವರು ಅವರು.

ಹೇಗೆ ನದಿಯೊಂದರ ಪಾತ್ರ ಬೇರೆಯಾದರೂ ಅದು ಕೊನೆಗೆ ಹೋಗಿ ಸಮುದ್ರವನ್ನೇ ಸೇರುತ್ತದೋ ಹಾಗೇ ನಾವುಗಳು ಆಚರಿಸುವ ಮತ ಪಂಥಗಳು ಒಬ್ಬನೇ ಭಗವಂತನನ್ನ ಸೇರುತ್ತವೆ ಎನ್ನುತ್ತಾ ಅನೇಕ ಆಧ್ಯಾತ್ಮಿಕ ಪ್ರಯೋಗಗಳಿಗೆ ತಮ್ಮನ್ನ ತಾವು ಒಳಕೊಂಡವರು.ಹೇಗೆ ಕುಂಬಾರ ಒಂದೇ ಮಣ್ಣಿನಿಂದ ಮಡಿಕೆ ಲೋಟ ತಟ್ಟೆ ಹೀಗೆ ಅನೇಕ ಸಾಧನಗಳನ್ನ ಮಾಡಿದರೂ ಅದೆಲ್ಲವನ್ನ ಒಂದೇ ಮಣ್ಣಿನಿಂದ ಮಾಡುತ್ತಾನೋ ಹಾಗೆಯೇ ಹೆಸರು,ಪೂಜೆ,ವ್ಯಕ್ತಗೊಳಿಸುವ ರೀತಿ ಬೇರೆಯಾದರೂ ಭಗವಂತ ಎನ್ನುವವನು ಒಬ್ಬನೇ ಎಂದು ಪ್ರತಿಪಾದಿಸುತ್ತಾ ಎಲ್ಲ ಮತ ಪಂಥಗಳ ಸಾಧನೆಯ ಹಾದಿಯನ್ನೂ ಅನುಭವಿಸಿ ಯುವಜನತೆಗೆ ತಮ್ಮೊಳಗಿನ ಹುಡುಕಾಟಕ್ಕೆ ಅನ್ವೇಷಣೆಗೆ ಪ್ರೇರಣೆ ನೀಡುತ್ತಾ ಭಾರತದ ಚೈತನ್ಯಕ್ಕೆ ಹೊಸ ಸ್ಪೂರ್ತಿಯನ್ನ ತಂದವರು.

ಸನಾತನ ಪರಂಪರೆಯ ಮೌಲ್ಯ,ಸಂಸ್ಕೃತಿಗಳು,ಜ್ಞಾನ, ಆಚರಣೆಗಳು ಮತ್ತು ಹೊಸ ಯುಗದ ವಿಜ್ಞಾನದ ಆವಿಷ್ಕಾರಗಳು, ಪಶ್ಚಿಮದ ಹೊಸ ಚಿಂತನೆಗಳು,ಭಾರತದಲ್ಲಿನ ವಿವಿಧ ಮತ ಪಂಥಗಳು ಹೀಗೇ ಅನೇಕ ಬಗೆಯ ಪ್ರಭಾವಕ್ಕೆ ಒಳಗಾಗಿ ಗೊಂದಲದಲ್ಲಿದ್ದ ಯುವ ಸಮೂಹಕ್ಕೆ ರಾಮಕೃಷ್ಣ ಪರಮಹಂಸರು ದಾರಿ ತೋರಿದವರು.ಇಂದಿಗೂ ಗೋಜಲುಗಳ ಮಧ್ಯೆ ಸಿಲುಕಿದ ಎಲ್ಲ ಯುವಕ ಯುವತಿಯರಿಗೆ ರಾಮಕೃಷ್ಣ ಪರಮಹಂಸರ ವಾಕ್ಯಗಳು ಹೊಸ ದಿಸೆಯನ್ನೇ ತೋರುತ್ತವೆ.

“ಭಗವಂತ ನಮ್ಮೆಲ್ಲರಲ್ಲೂ ಇದ್ದಾನೆ, ಅವನನ್ನ ಹುಡುಕಬೇಕು,ಪರಮ ನಿಷ್ಠೆಯಿಂದ ಹುಡುಕ ಬೇಕು, ನಾಚಿಕೆ, ದ್ವೇಷಾಸೂಯೆ ಮತ್ತು ಭಯಗಳ ಹಂಗು ತೊರೆದು ಹುಡುಕಬೇಕು, ಆಗ ಮಾತ್ರ ಭಗವಂತ ದೊರೆಯುತ್ತಾನೆ” ಎನ್ನುತ್ತಿದ್ದ ಪರಮಹಂಸರು ತಾವೂ ಕೃಷ್ಣನನ್ನ ಪೂಜಿಸುವಾಗ ರಾಧೆಯಂತಾಗಿ ಬಿಡುತ್ತಿದ್ದರು, ಥೇಟ್ ರಾಧೆಯಂತೆಯೇ ಭಕ್ತಿ,ಭಾವ ಮೈರೆತು ಹಾಡುತ್ತಿದ್ದ ಭಜನೆ, ರಾಧೆಯೇ ಆವರಿಸಿಕೊಂಡಂತೆ ಕುಣಿಯುತ್ತಿದ್ದ ರಾಸಲೀಲೇ… ಆಧ್ಯಾತ್ಮಿಕ ಜೀವನದ ಅತ್ಯುನ್ನತ ಸ್ಥಿತಿಯಾದ ಸಮಾಧಿ ಸ್ಥಿತಿಯಲ್ಲಿ ಮೆರೆದವರು ಪರಮಹಂಸರು.

ಸ್ತ್ರೀಯರನ್ನ ಅತ್ಯಂತ ಕೆಳಗಿನ ಸ್ಥಾನದಲ್ಲಿಟ್ಟು ನೋಡುತ್ತಿದ್ದ ಕಾಲದಲ್ಲಿ, ತನ್ನ ಪತ್ನಿಯವರಾದ ಶ್ರೀಮಾತೆ ಶಾರದಾ ದೇವಿಯವರನ್ನೇ ಕಾಳಿಯಾಗಿ ಕೂರಿಸಿ ಪೂಜೆ ಮಾಡುತ್ತಾ ಸಮಾಧಿ ಸ್ಥಿತಿಗೇರುತ್ತಾರೆ, ಸ್ವತಃ ಕೈಹಿಡಿದ ಪತ್ನಿಯನ್ನ ಮಾತೃ ಸ್ವರೂಪಳಾಗಿ ಕಂಡು,ಪೂಜಿಸುವ ಆ ವಿಶಿಷ್ಟ ಈ ಜಗತ್ತಿನ ವಿಸ್ಮಯ! ಸಂಸಾರದಲ್ಲಿದ್ದೂ ಸಂಸಾರ ಬಂಧನದಿಂದ ಪಾರಾಗುವ ಅವರ ಬೋಧನೆಗಳು ಅನೇಕ ಗೃಹಸ್ಥ ಭಕ್ತರಿಗೂ ಮಾರ್ಗದರ್ಶಕವೇ ಆಗಿತ್ತು. 

“ಪ್ರಾರ್ಥನೆ ಮಾಡು, ಶುದ್ಧ ಅಂತಃಕರಣದಿಂದ ಭಗವಂತನ ಬಳಿ ಅಂಗಲಾಚು, ಅವನು ದಾರಿ ತೋರುತ್ತಾನೆ,ನೀನು ಮಾಡುವ ಪ್ರಾರ್ಥನೆಯಲ್ಲಿ ಶ್ರದ್ಧೆಯಿದ್ದರೆ ಭಗವಂತ‌ ಖಂಡಿತ ನಿನ್ನೆಡೆಗೆ ಕೃಪೆ ಮಾಡುತ್ತಾನೆ, ವಿಭೂತಿ ಪುರುಷರ ಸಂಗ ನೀಡುತ್ತಾ ಉದ್ಧಾರವಾಗುವ ಹಾದಿ ತೋರಿಸುತ್ತಾನೆ, ಸಜ್ಜನರ ಸಹವಾಸ ಮಾಡಿಸಿ ನಿನ್ನ ದುಃಖ ದೂರ ಮಾಡುತ್ತಾನೆ” ಎನ್ನುತ್ತಾ ಹುಡುಕಾಟಕ್ಕೆ ಹೊರಟವರಿಗೆ ಮಾರ್ಗದರ್ಶನ ನೀಡುತ್ತಾರೆ, ಭಗವಂತನಿಗೆ ಶ್ರದ್ಧೆಯಿಂದ ಪ್ರಾರ್ಥಿಸುವಂತೆ ಹೇಳುತ್ತಾ… ಸಜ್ಜನರ ಸಹವಾಸದ ಪ್ರಾಮುಖ್ಯತೆಯನ್ನು ಹೇಳುತ್ತಾರೆ, ಹೀಗೇ ಅನೇಕ ಯುವಜನರ ಆಧ್ಯಾತ್ಮಿಕ ಪಥಕ್ಕೆ ಗುರುವಾಗಿ ನಿಂತು ಕೈಹಿಡಿದು ನಡೆಸಿದವರು ರಾಮಕೃಷ್ಣ ಪರಮಹಂಸರು.

“ವೇದ ತೋರದು ಶಾಸ್ತ್ರ ತೋರದು,ಮತವು ಮುಕ್ತಿಯ ತೋರದು, ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮ ಪಾಶವು!” ಎನ್ನುವ ವಿವೇಕಾನಂದರ ನುಡಿಗಳು ರಾಮಕೃಷ್ಣ ಪರಮಹಂಸರ ಬೋಧವೇ.ಎಲ್ಲಾ ಶಾಸ್ತ್ರಗಳನ್ನೋದಿಯೂ ಸುಮ್ಮನೆ ಕೂತರೆ ಓದಿಯಾದರೂ ಏನುಪಯೋಗ ಎನ್ನುತ್ತಾ ಯುವ ಜನತೆಗೆ ಧರ್ಮದ ರಹಸ್ಯವಿರುವುದು ಸಿದ್ದಾಂತಗಳಲ್ಲಲ್ಲ,ಆಚರಣೆಯಲ್ಲಿ ಎಂದು ತೋರಿಸಿಕೊಟ್ಟವರು ರಾಮಕೃಷ್ಣರು.

ಯಾವುದೇ ವ್ಯಕ್ತಿ ಹಚ್ಚಿಟ್ಟ ಹಣತೆಯ ಬೆಳಕಲ್ಲಿ ಕೂತು ಭಗವದ್ಗೀತೆಯನ್ನು ಓದಿ, ಇತರರ ಮತ್ತು ಆತ್ಮೋನ್ನತಿಯ ದಾರಿ ಹಿಡಿಯ ಬಹುದು, ಆದರೆ ಅದೇ ಹಣತೆಯ ಬೆಳಕಿನಲ್ಲಿ ಮತ್ತೊಬ್ಬ ಯಾವುದೋ ಕಾಗದಕ್ಕೆ ಸುಳ್ಳು ಸಹಿ ಹಾಕಿ ಮೋಸದ ಸಂಚು ರೂಪಿಸಬಹುದು. ಹೀಗೇ ಎರಡೂ ಕೆಲಸಗಳಿಂದ ದೀಪಕ್ಕೆ ಏನೂ ಬದಲಾವಣೆಯಾಗದು, ದೀಪವೇನಿದ್ದರೂ ತಾನುರಿದು ಬೆಳಕನ್ನ ನೀಡುವ ಕಾಯಕವನ್ನಷ್ಟೇ ಮಾಡುತ್ತದೆ, ಅಂತೆಯೇ ಸೂರ್ಯನ ಬೆಳಕು ಅದು ಎಲ್ಲರಿಗೂ ಒಂದೆಯೇ ಆಗಿದೆ, ಸೂರ್ಯನ ಬೆಳಕು ಯಾರಿಗಾದರೂ ಭೇದ ಮಾಡಿದ್ದು ಕಂಡಿಲ್ಲ, ಅದು ಎಲ್ಲ ಕಡೆಯೂ ಸಮನಾಗಿಯೇ ಹರಡುತ್ತದೆ ಹಾಗಿರುವಾಗ ನಾವು ಅಂತೆಯೇ ನಮ್ಮ ಕರ್ತವ್ಯಗಳ ಕುರಿತು ಕಾಯಕದ ಕುರಿತು ಗಮನವಿರಿಸಿ, ಉಳಿದೆಲ್ಲಕ್ಕೂ ಸಮನಾದ ಭಾವದಲ್ಲಿ ಸೇವಿಸಿದಾಗ ಮಾತ್ರವೇ ನಮ್ಮ ಆತ್ಮೋನ್ನತಿ ಸಾಧ್ಯ ಎಂಬುದು ಶ್ರೀ ರಾಮಕೃಷ್ಣ ಪರಮಹಂಸರು ಅವರನ್ನ ಭೇಟಿಯಾಗಲು ಬಂದ ತರುಣರಿಗೆಲ್ಲ ಬೋಧಸುತ್ತಿದ್ದುದ್ದು.

ಬಂಧನವೆಂಬುದೂ ಮನಸ್ಸಿನ ಸ್ಥಿತಿ, ಸ್ವಾತಂತ್ರ್ಯವೆಂಬುದೂ ಮನಸ್ಸಿನ ಒಂದು ಸ್ಥಿತಿ, ನಾನೊಬ್ಬ ಮುಕ್ತ ಆತ್ಮ, ನಾನು ಪರಮೇಶ್ವರನ ಪುತ್ರ ಎಂದು ನೀವು ಅಂದುಕೊಂಡಲ್ಲಿ ನೀವು ಅದೇ ಆಗುವಿರಿ,ಕೇವಲ ಪರಮೇಶ್ವರ ಮಾತ್ರವೇ ನನ್ನನ್ನ ಬಂಧಿಸಲು ಸಾಧ್ಯ, ನಾನು ಸರ್ವ ತಂತ್ರ ಸ್ವತಂತ್ರ ಎಂದುಕೊಂಡಾಗಲಷ್ಟೇ ನೀವು ಹಾಗಾಗಲು ಸಾಧ್ಯ ಎಂಬುದು ಅವತ್ತಿನ ಯುವಕರಿಗೆ ರಾಮಕೃಷ್ಣ ಪರಮಹಂಸರ ನುಡಿಗಳಿವು, ಇದು ಆಧ್ಯಾತ್ಮಿಕ ಸಾಧಕರಿಗಷ್ಟೇ ಅಲ್ಲ, ಭಾರತದ ಸ್ವಾತಂತ್ರ್ಯ ಹೋರಾಟದ ಅನೇಕ ಮಹನೀಯರುಗಳ ಸ್ಪೂರ್ತಿ ಸ್ರೋತವಾಗಿದ್ದುದು ರಾಮಕೃಷ್ಣ ಪರಮಹಂಸರ ಇಂತಹ  ಆಂತರ್ಯದ ಮತ್ತು ಬಾಹ್ಯದ ಸ್ವಾತಂತ್ರ್ಯದ ಹಸಿವಿಗೆ ಇಂಬು ಕೊಟ್ಟ ಬೋಧನೆಗಳೇ…

ಯುವಸನ್ಯಾಸಿ ಶಿಷ್ಯರ ಬಳಗದಿಂದ ಸುತ್ತುವರೆದಿರುತ್ತಿದ್ದ ಅವರು ಯಾವತ್ತಿಗೂ ಸ್ವಾರ್ಥವನ್ನ ತೊರೆದು ಸೇವೆ ಮಾಡುವ ಮಾರ್ಗವನ್ನೇ ತೋರಿದವರು,”ಜೀವೇ ದಯಾ ನೋಯ್,ಶಿವ್ ಗ್ಯಾನೇ,ಜೀವ್ ಸೇಬಾ” ನಾವು ಇತರರಿಗೆ ದಯೆ ತೋರುವುದಲ್ಲ, ಇತರರನ್ನೂ ಶಿವನೆಂದೇ ಭಾವಿಸಿ ಸೇವಿಸಬೇಕು ಎಂದು ಸೇವೆಯೇ ಶಿವನನ್ನ ಸೇರುವ ಮಾರ್ಗವೆಂದು ತೋರುತ್ತಾರೆ.

ಜಗತ್ತಿಗೆ ನಾವು ಸೇವೆ ಮಾಡುವುದೆ? ಬೇರೆಯವರಿಗೆ ಸಹಾಯ ಮಾಡಲು ನಾವಾದರೂ ಯಾರು? ಜಗತ್ತನ್ನ ಉದ್ಧಾರ ಮಾಡಲು ನಾವು ಎಷ್ಟರವರು? ನಾವು ಮಾಡುವ ಕೆಲಸ ಅದು ದೇವರ ಕೆಲಸ,ಜಗತ್ತಿಗೆ ನೀನು ಮಾಡುವ ಸಹಾಯ,ಅದು ನಿನಗೆ ನೀನು ಮಾಡುವ ಸಹಾಯ ಮಾತ್ರ, ಎಲ್ಲರಲ್ಲೂ ಶಿವನನ್ನೇ ಕಾಣು, ಎಲ್ಲವನ್ನೂ ಶಿವನ ಸೇವೆಯೆಂದೇ ಮಾಡು ಎನ್ನುವ ರಾಮಕೃಷ್ಣ ಪರಮಹಂಸರ ಈ ಬೋಧವೇ ಅನೇಕ ಯುವಜನತೆಯ ಪ್ರೇರಣೆಯಾಗಿದೆ,ಅದು ಬರಗಾಲ,ಪ್ರವಾಹ,ಅಥವಾ ಕೊರೋನಾದಂತಹ ಕಷ್ಟ ಕಾಲದಲ್ಲೂ ಜೀವವೇ ಶಿವನೆಂದು ಭಾವಿಸಿ ನಿಸ್ವಾರ್ಥ ಸೇವೆ ಮಾಡುವ ಅವರಿಂದ ಸ್ಪೂರ್ತಿ ಪಡೆದ ದೊಡ್ಡ ಯುವಸಮೂಹವನ್ನೇ ನಾವು ಕಾಣಬಹುದಾಗಿದೆ.

ರಾಮಕೃಷ್ಣ ಪರಮಹಂಸರು ನಮ್ಮೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರ ಆಧ್ಯಾತ್ಮಿಕ ಶಕ್ತಿ ಚೈತನ್ಯ ರೂಪಿಯಾಗಿ ನಮ್ಮೊಳಗೆ ಪ್ರವಹಿಸುತ್ತಿದೆ, ಹೊಸಯುಗದ ಸವಾಲುಗಳು ಕಾಡುತ್ತಿರುವ ಈ ಹೊತ್ತಿಗೆ ಅವರ ಬೋಧನೆಗಳು , ಚಿಂತನೆಗಳು, ಆಧ್ಯಾತ್ಮಿಕ ಹಾದಿಯೊಂದೇ ಬೆಳಕನೀವ ಲಾಂದ್ರ, ಜಡವಾಗುತ್ತಿರುವ ಯುವಜನತೆಯ ಶಕ್ತಿಯನ್ನ ಏಕಮುಖಿಯಾಗಿಸಿ,ಚೈತನ್ಯವಾಗಿಸುತ್ತಿರುವುದು ಅವರ ಬೋಧನೆಗಳೇ.

ಅನೇಕ ಬಾರಿ ಭಾರತ ತನ್ನ ಮೈಮರೆವಿನಲ್ಲಿ ಮಲಗಿದ್ದಾಗೆಲ್ಲ ಋಷಿ ಪರಂಪರೆಯೊಂದು ತನ್ನ ಆಧ್ಯಾತ್ಮಿಕ ಮೂಲಬೇರುಗಳ ತಳಹದಿಯ ಮೇಲೆ ಸ್ವಾರ್ಥರಹಿತವಾದ ಸಮಾಜದ ನಿರ್ಮಾಣ ಕಾರ್ಯವನ್ನ ಮಾಡಿಕೊಂಡು ಬಂದಿದೆ, ಅದಕ್ಕೆ ರಾಮಕೃಷ್ಣ ಪರಮಹಂಸರ ಜನ್ಮವೂ ಒಂದು ನಿದರ್ಶನ. ಜಗತ್ತನ್ನೇ ತಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಸತ್ವದ ಮೂಲಕ ಎಚ್ಚರಿಸುವ ಆ ವಿದ್ಯುತ್‌ಸಮ ಪ್ರಭೆಯನ್ನ ಇಂಬುಗೊಳಿಸಿದ ರಾಮಕೃಷ್ಣ ಪರಮಹಂಸರು ಭಾರತದ ಯುವಜನತೆಗೊಂದು ದಾರಿದೀಪವೇ ಸರಿ. 

  • email
  • facebook
  • twitter
  • google+
  • WhatsApp
Tags: Ramakrishna paramahamsa

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post

ಹಿಂದವಿ ಸಾಮ್ರಾಜ್ಯದ ಗುರಿ,ರಾಮದಾಸರೆಂಬ ಗುರು... ಶಿವಾಜಿ ಮಹಾರಾಜರೆಂಬ ವ್ಯಕ್ತಿತ್ವ!

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಪಶ್ಚಿಮ ಘಟ್ಟದ ಮೇಲೀಗ ಬೇಡ್ತಿ-ವರದಾ ನದಿ ಜೋಡಣೆಯ ಕಾರ್ಮೋಡ

ಪಶ್ಚಿಮ ಘಟ್ಟದ ಮೇಲೀಗ ಬೇಡ್ತಿ-ವರದಾ ನದಿ ಜೋಡಣೆಯ ಕಾರ್ಮೋಡ

April 5, 2021
Vijnana Bharati’s letter to Prime Minister of India; An appeal related Genetically Modified Organisms

Vijnana Bharati’s letter to Prime Minister of India; An appeal related Genetically Modified Organisms

September 30, 2014
Dr.Veerendra Heggade releases the book on veteran VHP leader Sadananda Kakade at Bangalore

Dr.Veerendra Heggade releases the book on veteran VHP leader Sadananda Kakade at Bangalore

October 16, 2011
Know more about RSS inspired nationalist women’s organisation ‘Rashtra Sevika Samiti’: #RashtraSevikaBharatSevika

Know more about RSS inspired nationalist women’s organisation ‘Rashtra Sevika Samiti’: #RashtraSevikaBharatSevika

August 3, 2016

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In