• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಗೃಹ ಮಂತ್ರಿ -ಗೃಹ ಕಾರ್ಯದರ್ಶಿ ಹೇಳಿಕೆ : ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆರೆಸ್ಸೆಸ್‌

Vishwa Samvada Kendra by Vishwa Samvada Kendra
November 26, 2013
in News Digest
250
0
Shinde’s remark has weakened country’s ability to fight terror: Ram Madhav at IBNLive Interaction

Ram Madhav, RSS Akhil Bharatiya Sah Sampark Pramukh.

491
SHARES
1.4k
VIEWS
Share on FacebookShare on Twitter

ಸಂಝೋತಾ ಎಕ್ಸ್‌ಪ್ರೆಸ್, ಮೆಕ್ಕಾ ಮಸೀದಿ ಮತ್ತು ದರ್ಗಾ ಷರೀಫ್‌ಗಳಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪಕ್ಕೊಳಗಾಗಿರುವವರಲ್ಲಿ ಕನಿಷ್ಠ ೧೦ ಮಂದಿ ಒಂದಲ್ಲಒಂದು ಸಮಯದಲ್ಲಿ ಆರೆಸ್ಸೆಸ್‌ನ ಸಂಪರ್ಕ ಹೊಂದಿದವರೆಂಬ ಕೇಂದ್ರ ಗೃಹ ಕಾರ್ಯದರ್ಶಿಯ ಹೇಳಿಕೆಯನ್ನು ರಾ.ಸ್ವ.ಸಂಘದ  ರಾಮ್‌ಮಾಧವ್‌ ಉಗ್ರವಾಗಿ ಖಂಡಿಸಿದ್ದಾರೆ.

“ಕೇಂದ್ರ ಗೃಹ ಕಾರ್ಯದರ್ಶಿಯ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಆತುರಾತುರವಾಗಿತನ್ನರಾಜಕೀಯ ನಾಯಕರನ್ನು ಸಮರ್ಥಿಸುವಅಗತ್ಯ ಗೃಹ ಕಾರ್ಯದರ್ಶಿಯವರಿಗೇನಿತ್ತು ಎನ್ನುವುದುಅರ್ಥವಾಗುವುದಿಲ್ಲ. ದೇಶದಲ್ಲಿ ಈಗ ಚರ್ಚೆ ನಡೆಯುತ್ತಿರುವುದುರಾಜಕೀಯ ಪಕ್ಷವೊಂದರ ಸಭೆಯಲ್ಲಿ ನೀಡಿದ ಹೇಳಿಕೆಯ ಬಗ್ಗೆ.ಅದಕ್ಕೆ ಗೃಹ ಕಾರ್ಯದರ್ಶಿಯೇಕೆ ಪ್ರತಿಕ್ರಿಯಿಸಬೇಕು?” ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Ram Madhav, RSS Akhil Bharatiya Sah Sampark Pramukh.
Ram Madhav, RSS Akhil Bharatiya Sah Sampark Pramukh.

ಅವರ ಹೇಳಿಕೆಯನ್ನು  ಆರೆಸ್ಸೆಸ್‌ ನಿರಾಕರಿಸುತ್ತೇವೆ ಅಲ್ಲದೇ, ಅದರಲ್ಲಿ ಆಕ್ಷೇಪಾರ್ಹವಾದ ಅಂಶಗಳೂ ಇವೆ.

೧.    ಕೇವಲ ಆರೋಪವಿರುವ ಮಾತ್ರಕ್ಕೆಅವರ‍್ನುತಪ್ಪಿತಸ್ಥರೆಂದು ಹೇಗೆ ಅವರು ತೀರ್ಮಾನಿಸಿಬಿಡುತ್ತಾರೆ? ಹಾಗಾದರೆ, ಪ್ರತಿಯೊಬ್ಬಆರೋಪಿಯನ್ನು, ಆ ತರಾಜಕಾರಣಿಯಿರಲಿ ಅಥವಾ ಮಂತ್ರಿಯಿರಲಿ ಆರೋಪಿಗಳನ್ನೆಲ್ಲಾ ಅಪರಾಧಿಗಳೆಂದು ಇವರು ಪರಿಗಣಿಸುತ್ತಾರೆಯೇ?

೨.    ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ 3 ವರ್ಷಗಳಾದರೂ ಎನ್‌ಐಎ ವಿಫಲವಾಗಿದೆ ಮತ್ತುತನಿಖೆಯಿನ್ನೂ ಮುಗಿದಿಲ್ಲ ಎನ್ನುವಅಂಶವನ್ನು ಬೇಕೆಂದೇ ಗೃಹ ಕಾರ್ಯದರ್ಶಿ ಮುಚ್ಚಿಟ್ಟಿದ್ದಾರೆ.

೩.    ಹಿಂದುಯುವಕರನ್ನು ಬಂಧಿಸುವ ಮೊದಲು, ಇನ್ನೂ ಹಲವರನ್ನು ಬಂಧಿಸಿ ಅವರ ಮೇಲೆ ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತುಎನ್ನುವಅಂಶವನ್ನೂಅವರುಮುಚ್ಚಿಡುತ್ತಿದ್ದಾರೆ. ಅಲ್ಲದೇ, ಯುಎಸ್‌ಎ ಮತ್ತು ವಿಶ್ವ ಸಂಸ್ಥೆಗಳೂ ಕೂಡ ಸಂಝೋತಾಎಕ್ಸ್‌ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಕೆಲವು ಪಾಕಿಸ್ತಾನೀಯರನ್ನು ಆರೋಪಿಗಳೆಂದು ಹೇಳಿವೆ ಎನ್ನುವುದನ್ನೂಅವರು ಮುಚ್ಚಿಡುತ್ತಿದ್ದಾರೆ.

೪.    ಈ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವ (ಅವರ ಪ್ರಕಾರ) ಎಲ್ಲರೂಆರೆಸ್ಸೆಸ್‌ನೊಂದಿಗೆ ಸಂಬಂಧ ಹೊಂದಿದವರೆನ್ನುವುದನ್ನೂ ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ಇದುಆರೆಸ್ಸೆಸ್‌ಗೆಅಪಮಾನಕರವಾದ ಹೇಳಿಕೆ.

ಗೃಹ ಕಾರ್ಯದರ್ಶಿಯವರು ತಮ್ಮ ವ್ಯಾಪ್ತಿಯನ್ನು ಮೀರಿ, ಹೇಳಿಕೆಯನ್ನು ನೀಡುವುದರ ಮೂಲಕ, ನ್ಯಾಯಾಲಯದ ಮುಂದಿರುವ ಈ ಪ್ರಕರಣಗಳ ತನಿಖೆಯನ್ನು ಪ್ರಭಾವಿಸುವ ಪ್ರಯತ್ನ ಮಾಡಿದ್ದಾರೆ.ಅವರ ಈ ಕಾನೂನುಬಾಹಿರ ಹೇಳಿಕೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ.

ಹಾಗೆಯೇ, ಗೃಹ ಕಾರ್ಯದರ್ಶಿಯವರು ಕಳೆದ ಹಲವಾರು ನಮ್ಮದೇಶದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಗಳ್ಲಿ ’ಭಾಗಿಯಾದವರ’ ಹೆಸರುಗಳನ್ನೂ ಬಿಡುಗಡೆ ಮಾಡಲಿ ಎಂದು ನಾವು ಆಗ್ರಹಿಸುತ್ತೇವೆ. ಐದು ಪ್ರಕರಣಗಳಲ್ಲಿ ಭಾಗಿಯಾದವರ ಹೆಸರು ಹೇಳಬಹುದಾದರೆ, ಐವತ್ತು ಪ್ರಕರಣಗಳಲ್ಲಿ ಭಾಗಿಯಾದವರ ಹೆಸರು ಹೇಳಲು ಏಕೆ ಸಾಧ್ಯವಿಲ್ಲ?

ಗೃಹ ಮಂತ್ರಿ ಹೇಳಿಕೆ ಸತ್ಯಕ್ಕೆದೂರವಾದದ್ದು, ಆಧಾರರಹಿತ: ಮನಮೋಹನ ವೈದ್ಯ

ಕೇಂದ್ರ ಗೃಹ ಮಂತ್ರಿ ಶ್ರಿ ಸುಶೀಲ್ ಕುಮಾರ್ ಶಿಂದೆಯವರ ’ಆರೆಸ್ಸೆಸ್ ಮತ್ತು ಬಿಜೆಪಿ ತರಬೇತಿ ಶಿಬಿರಗಳಲ್ಲಿ ಭಯೋತ್ಪಾದಕತರಬೇತಿಯನ್ನು ನೀಡಲಾಗುತ್ತಿದೆ’ ಎಂಬ ಹೇಳಿಕೆ ಸತ್ಯಕ್ಕೆದೂರವಾದದ್ದು, ಆಧಾರರಹಿತ, ಬೇಜವಾಬ್ದಾರಿ ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದ್ದಾಗಿದೆ ಎಂದುಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಮನಮೋಹನ್ ವೈದ್ಯ ಹೇಳಿದ್ದಾರೆ.

ದುರದೃಷ್ಟಕರವಾದ ಈ ಆರೋಪವು ಸಂಪೂರ್ಣವಾಗಿ ನಿರಾಧಾರವಾದುದು ಮತ್ತುಇದನ್ನು ನಾವು ತೀವ್ರವಾಗಿಖಂಡಿಸುತ್ತೇವೆ. ಭಯೋತ್ಪಾದನೆಯನ್ನು’ಹಿಂದು ಭಯೋತ್ಪಾದನೆ’ಎಂದು ಹೇಳುವ ಮೂಲಕ ಶಾಂತಿ ಮತ್ತು ಸೌಹಾರ್ದಕ್ಕೆಪ್ರಪಂಚದಲ್ಲೇ ಹೆಸರಾಗಿರುವ ಹಿಂದು ಸಮಾಜವಕ್ಕೇಅವಮಾನ ಮಾಡಿದ್ದಾರೆ. ‘ಕೇಸರಿ ಭಯೋತ್ಪಾದನೆ’ಎಂದುಕರೆಯುವ ಮೂಲಕ ನಮ್ಮದೇಶದ ಸಂನ್ಯಾಸ ಪರಂಪರೆಗೇಅವಮಾನ ಮಾಡಿದ್ದಾರೆ.ಕಾಂಗ್ರೆಸ್ ಪಕ್ಷ ಮತ್ತು ಗೃಹ ಮಂತ್ರಿಯವರುತಮ್ಮ ಆಕ್ಷೇಪಾರ್ಹಗಳಿಗಾಗಿ ಬೇಷರತ್ತಾಗಿ ಹಿಂದು ಸಮಾಜದ ಕ್ಷಮೆಯಾಚಿಸಬೇಕೆಂದು ಆರೆಸ್ಸೆಸ್‌ ಆಗ್ರಹಿಸುತ್ತದೆ.

ಇಡೀದೇಶವೇ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವಾಗ, ಈ ಹೋರಾಟದಲ್ಲಿ ನಮ್ಮ ವೀರಯೋಧರನ್ನು ಕಳೆದುಕೊಳ್ಳುತ್ತಿರುವಾಗ, ಗೃಹಮಂತ್ರಿಯವರ ಈ ಅಪ್ರಬುದ್ಧ ಮತ್ತು ಬೇಜವಾಬ್ದಾರಿಯುತ ಹೇಳಿಕೆಯು ನಮ್ಮಯೋಧರ ನೈತಿಕ ಸ್ಥೈರ್ಯಕ್ಕೆದೊಡ್ಡ ಪೆಟ್ಟುಕೊಟ್ಟಿದೆ ಮತ್ತು ಪಾಕಿಸ್ತಾನದ ಭಯೋತ್ಪಾದಕರ ಸ್ಥೈರ್ಯವನ್ನು ಹೆಚ್ಚಿಸಿದೆ.ಅಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸಿದೆ. ಈ ಹೇಳಿಕೆಯನ್ನು ಆರೆಸ್ಸೆಸ್‌ ಕಟುವಾಗಿಟೀಕಿಸುತ್ತದೆ.ಭಯೋತ್ಪಾದಕ ಕೃತ್ಯಗಳ ತನಿಖೆ ನಡೆಯುತ್ತಿರುವಾಗಲೇ ದಿಕ್ಕು ತಪ್ಪಿಸುವ ಇಂತಹ ಹೇಳಿಕೆ ನೀಡಿರುವುದರ ಹಿಂದೆ ತನಿಖೆಯನ್ನು ಪ್ರಭಾವಿಸುವ ಕುತಂತ್ರವಿದೆ.ಇದು ಅತ್ಯಂತ ಆಕ್ಷೇಪಾರ್ಹವಾದದ್ದು ಮತ್ತು ಎಲ್ಲರೂ ಖಂಡಿಸಬೇಕಾದದ್ದು.

ಗೃಹ ಮಂತ್ರಿಯವರ ಈ ಹೇಳಿಕೆಯು ದೇಶದ ಲಕ್ಷಾಂತರಜನರ ಭಾವನೆಗಳನ್ನು ಘಾಸಿಗೊಳಿಸಿದೆ.ಗೃಹ ಮಂತ್ರಿಯವರ ಈ ದೇಶಾಭಿಮಾನರಹಿತ ನಿಲುವನ್ನು ವಿರೋಧಿಸಲು ಮತ್ತುಕ್ಷಮಾಪಣೆ ಕೇಳುವಂತೆ ಅವರ ಮತ್ತುಕಾಂಗ್ರಸ್ ಪಕ್ಷದ ಮೇಲೆ ಒತ್ತಡತರಲು ಜನವರಿ 24 ರಂದು ದೇಶಾದ್ಯಂತ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ದೇಶದಜನತೆಯಲ್ಲಿ ಆರೆಸ್ಸೆಸ್‌ ಮನವಿ ಮಾಡುತ್ತದೆ.

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Shinde’s remark has weakened country’s ability to fight terror: Ram Madhav at IBNLive Interaction

Shinde's remark has weakened country's ability to fight terror: Ram Madhav at IBNLive Interaction

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Tribes stage Dharna against forcible conversions

Tribes stage Dharna against forcible conversions

September 7, 2011
ABPS resolution-2: Defeat Chinese Designs against  our National Interests and Security

ABPS resolution-2: Defeat Chinese Designs against our National Interests and Security

March 12, 2011

ಧಾರವಾಡದಲ್ಲಿ ಉತ್ತುಂಗ ಮತ್ತು ಪ್ರಬಂಧ ಸಂಚಯ ಕೃತಿ ಬಿಡುಗಡೆ

January 25, 2022
VIDEO: Narendra Modi speaks on RSS and the growing acceptance of Sangh Ideology

VIDEO: Narendra Modi speaks on RSS and the growing acceptance of Sangh Ideology

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In