RASHTRIYA SWAYAMSEVAK SANGH – press release
New Delhi: The 3-day meeting of the Akhil Bharatiya Karyakari Mandal of the Rashtriya Swayamsevak Sangh (RSS) concluded on 31st Oct at Jalgaon (Maharashtra), has decided to hold nationwide MASS DHARNA on the 10th of November at all state and district head quarters to protest against the hateful and politically motivated anti-Hindu and anti-Hindutva canard by some leaders and political parties related with the Union govt. The misleading charges of ‘Hindu’ terrorism and ‘Saffron’ terrorism, sinister designs to malign the Hindu saints, Hindu organizations etc., in recent times and also to wrongly implicate RSS and its workers in some of the bomb-blast cases are only the next steps of this anti-Hindu political agenda.
The proposed Dharna is also intended to create public awareness by exposing the baseless charges against Sangh and the politically motivated conspiracy of defaming Hindu beliefs and Hindu sentiments. The RSS strongly deplores the heinous game of maligning it and firmly believes that the people won’t heed to such calumny for they know Sangh is a patriotic organization engaged in the service of nation. Shri Bhaiya Joshi, Sarkaryavah of RSS, through his statements, has made it amply clear that it neither believes in nor supports any form of terrorism or violence. Instead, it is the RSS which has always stood against terrorism even paying heavy price for its fight.
RSS appeals to the public to support with all its might this nationalist campaign for strengthening truth and justice.
ರಾಷ್ಟ್ರೀಯ ಸ್ವಯಂಸೇವಕ ಸಂಘ; ಕರ್ನಾಟಕ
ಪತ್ರಿಕಾ ಹೇಳಿಕೆ
ಹಿಂದು ವಿರೋಧಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾ ಧರಣಿ
ಹಿಂದು ಸಂಘಟನೆಗಳ ಪ್ರಮುಖರ ಮೇಲೆ ಸುಳ್ಳು ಆರೋಪ ಹೊರಿಸುವ ಕೇಂದ್ರ ಸರ್ಕಾರದ ಷಡ್ಯಂತ್ರದ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘ ಇದೇ ನವೆಂಬರ್ 10ರಂದು ಬೃಹತ್ ಪ್ರತಿಭಟನಾ ಧರಣಿ ನಡೆಸಲಿದೆ.
ಬೆಳಗ್ಗೆ 11.00ಕ್ಕೆ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು, ಹಿತೈಷಿಗಳು, ಸಮಾನಮನಸ್ಕ ಸಂಘಟನೆಗಳು ಭಾಗವಹಿಸುವ ನಿರೀಕ್ಷೆಯಿದೆ.
ಹಿಂದುತ್ವವನ್ನು ಭಯೋತ್ಪಾದನೆಯ ಕ್ರೂರಮುಖದೊಂದಿಗೆ ಸೇರಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ದೇಶಭಕ್ತ ಸಂಘಟನೆಯ ಹೆಸರಿಗೆ ಮಸಿಬಳಿಯುವ ಪ್ರಯತ್ನ ಮಾಡುತ್ತಿರುವ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಈ ಕುತಂತ್ರದ ಹಿಂದೆ ಮತ ಬ್ಯಾಂಕ್ ರಾಜಕಾರಣ ಅಡಗಿದೆ ಎಂಬುದನ್ನು ದೇಶವಾಸಿಗಳೆದುರು ಬಯಲಿಗೆಳೆಯಲು ಆರೆಸ್ಸೆಸ್ ಕರೆ ನೀಡಿದೆ. ಸಂಘದ ಮುಖಂಡರಾದ ಇಂದ್ರೇಶ್‌ಕುಮಾರ್ ಅಂತಹವರನ್ನು ಬಾಂಬ್‌ಸ್ಫೋಟದಂತಹ ಘಟನೆಯೊಂದಿಗೆ ಜೋಡಿಸುವ ಷಡ್ಯಂತ್ರವನ್ನು ಸಂಘ ಮತ್ತು ವಿವಿಧ ಹಿಂದು ಸಂಘಟನೆಗಳು ತೀವ್ರವಾಗಿ ವಿರೋಧಿಸುತ್ತವೆ. ಹಿಂದೆ ಇದೇ ರೀತಿಯ ಅಪಪ್ರಚಾರದ ಯತ್ನವನ್ನು ಕಂಚಿ ಶಂಕರಾಚಾರ್ಯ, ಬಾಬಾ ರಾಮದೇವ್, ಸಾಧ್ವಿ ಪ್ರಜ್ಞಾಸಿಂಗ್, ಮಾತಾ ಅಮೃತಾನಂದಮಯಿ ಮುಂತಾದವರ ಬಗ್ಗೆ ಮಾಡಿದ್ದನ್ನು ನೆನಪಿಸಿರುವ ಸಂಘವು, ಜಾಗೃತ ಹಿಂದು ಜನಶಕ್ತಿಯ ಹೋರಾಟದ ಮೂಲಕ ಇದಕ್ಕೆ ಉತ್ತರಿಸುವುದಾಗಿ ಎಚ್ಚರಿಸಿದೆ.
ಪ್ರತಿಭಟನಾ ಧರಣಿಯಲ್ಲಿ ಎಲ್ಲ ಹಿಂದು ಬಾಂಧವರು ಪಾಲ್ಗೊಂಡು ಕೇಂದ್ರ ಸರಕಾರದ ಧೋರಣೆಯನ್ನು ಪ್ರತಿಭಟಿಸಬೇಕೆಂದು ರಾಜ್ಯ ಆರೆಸ್ಸೆಸ್ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.