ಸಹಕಾರ ಭಾರತಿ : ಒಂದು ವಿಶಿಷ್ಟ ಹೆಜ್ಜೆ
ನಮ್ಮ ದೇಶದ ಸಹಕಾರಿ ರಂಗದ ವ್ಯಾಪ್ತಿ ಬಹಳ ದೊಡ್ಡದು. ಸ್ವಾತಂತ್ರ್ಯಪೂರ್ವದಿಂದಲೂ ಅನೇಕ ಸಹಕಾರಿ ಸಂಘಗಳು ಜನಸಾಮಾನ್ಯರನ್ನು ಸಂಘಟಿಸಿ, ಸ್ಥಳೀಯ ಕೃಷಿ, ವ್ಯಾಪಾರ, ವ್ಯವಹಾರಗಳಿಗೆ ಬೆನ್ನೆಲುಬಾಗಿ ನಿಂತಿವೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಬಹಳ ಮಹತ್ತ್ವದ್ದು. ಈಗಂತೂ ಅವುಗಳ ಮಹತ್ತ್ವ, ವ್ಯಾಪ್ತಿ ಮತ್ತು ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಕೇವಲ ಸ್ವಾರ್ಥಸಾಧನೆಗಾಗಿ ಸಹಕಾರ ವಿಶೇಷವೇನಲ್ಲ. ಸಹಕಾರವು ಸಂಸ್ಕಾರಯುತ ವಾದಾಗ ಸಮಾಜಕ್ಕೆ ಹೆಚ್ಚು ಹಿತ. ಎಲ್ಲರೂ ಪ್ರತ್ಯೇಕವಾಗಿ ತಮ್ಮ ತಮ್ಮದೇ ಸಹಕಾರಿ ಸಂಘಗಳನ್ನು ನಡೆಸುತ್ತಾ ಒಬ್ಬರಿಗೊಬ್ಬರ ಪರಿಚಯವಿಲ್ಲದೇ ತಮ್ಮ ದಾರಿಯಲ್ಲಿ ತಾವು ನಡೆಯುವುದಕ್ಕಿಂತ ಎಲ್ಲರ ನಡುವೆ ಬಾಂಧವ್ಯ ಬೆಳೆದರೆ, ಪರಸ್ಪರ ಅನುಭವಗಳನ್ನು ಹಂಚಿಕೊಳ್ಳು ವಂತಾದರೆ, ಜನರಿಗೆ ಅನುಕೂಲವಾಗುವ ಹೊಸ ಹೊಸ ಪ್ರಯೋಗಗಳನ್ನು ನಡೆಸುವಂತಾದರೆ, ಹೊಸದಾಗಿ ಸಹಕಾರ ಸಂಘಗಳನ್ನು ರಚಿಸುವವರಿಗೆ ‘ಹೆದರಬೇಡಿ ನಾವಿದ್ದೇವೆ!’ ಎನ್ನುವ ಮಾರ್ಗದರ್ಶನ ಸಿಗುವಂತಾದರೆ ಎಷ್ಟು ಚೆನ್ನ! ಅಲ್ಲದೇ, ಸಹಕಾರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವ ಕಾನೂನುಗಳ ಜಾರಿ, ಸಹಕಾರ ಸಂಘಗಳಿಗೆ ಅನುದಾನ ಇಂತಹವುಗಳ ಬಗ್ಗೆ ಗಮನ ಹರಿಸಲು ಒಂದು ಸಂಘಟನೆಯಿದ್ದರೆ ಸಹಕಾರಿಗಳಿಗೆ ಖಂಡಿತಾ ಖುಷಿಯಲ್ಲವೇ? ಅಂತಹ ಒಂದು ಪ್ರಯತ್ನವೇ ಸಹಕಾರ ಭಾರತಿ!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ದಿ| ಲಕ್ಷ್ಮಣರಾವ್ ಇನಾಂದಾರ್‌ರವರ ಮಾರ್ಗದರ್ಶನದಲ್ಲಿ ೧೯೭೮ರ ಸೆಪ್ಟೆಂಬರ್ ೧೫, ಅನಂತ ಚತುರ್ದಶಿಯ ದಿನದಂದು ದಿ| ಮಾಧವರಾವ್ ಗೋಡ್‌ಬೋಲೆ ಯವರಿಂದ ಮಹಾರಾಷ್ಟ್ರದ ಪುಣೆಯಲ್ಲಿ ಸಹಕಾರ ಭಾರತಿಯು ಜನ್ಮ ತಳೆಯಿತು. ಇಂದು ೨೩ ರಾಜ್ಯಗಳಲ್ಲಿ ಅಸ್ತಿತ್ವ ಹೊಂದಿರುವ ಸಹಕಾರ ಭಾರತಿಯು ಸಹಕಾರ ರಂಗದ ಬೆಳವಣಿಗೆಗಾಗಿ ಸಂಘಟನೆ, ಆಂದೋಲನ, ಪ್ರಕಲ್ಪ ಮತ್ತು ಸಹಕಾರ ಸಂಘಗಳ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ’ಸಹಕಾರಿ ರಂಗದ ಏಕೈಕ ಸ್ವಯಂಸೇವಾ ಸಂಘಟನೆ’ ಎಂದು ಗುರುತಿಸಲ್ಪಟ್ಟಿದೆ.
ಭ್ರಷ್ಟಾಚಾರರಹಿತ ಮತ್ತು ಆದರ್ಶ ಸಹಕಾರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಹಕಾರ ಭಾರತಿಯು ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಸಂಘಟನೆ ಯಾಗಿ ಸಹಕಾರ ರಂಗದಲ್ಲಿ ತನ್ನ ವಿಶಿಷ್ಟ ಛಾಪನ್ನು ಮೂಡಿಸಿದೆ. ಕರ್ನಾಟಕದಲ್ಲಿ ಸಹಕಾರ ಭಾರತಿಯ ಸಾಧನೆಗಳ ಬಗೆಗಿನ ಕಿರುನೋಟ ಇಲ್ಲಿದೆ.
ಸಂಘಟನಾತ್ಮಕ ಚಟುವಟಿಕೆಗಳು
ಟ ಆಗಾಗ ಕಾರ್ಯಕರ್ತರ ಅಭ್ಯಾಸ ವರ್ಗಗಳು, ಸಹಕಾರಿಗಳ ಸಮಾವೇಶಗಳು, ನಾಯಕತ್ವ ಶಿಬಿರ, ಸಹಕಾರಿ ಸಂಘಗಳ ನಿರ್ದೇಶಕರ ತರಬೇತಿ ಕಾರ್ಯಕ್ರಮ, ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಾಗಾರಗಳು, ವಿಚಾರಗೋಷ್ಠಿ, ಹೊಸ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳು – ಹೀಗೆ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಟ ಸದಸ್ಯರಲ್ಲಿ ಸಹಕಾರಿ ರಂಗದ ಅರಿವಿನ ಜೊತೆಗೆ ರಾಷ್ಟ್ರೀಯತೆ ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಲು ’ಮಾಹಿತಿ ಸಿಂಚನ’ ಕೈಪಿಡಿ.
ಟ ಸಹಕಾರ ಭಾರತಿಯ ಚಟುವಟಿಕೆಗಳು ಮತ್ತು ಸಹಕಾರಿ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳನ್ನು ಸಹಕಾರಿಗಳಿಗೆ ತಿಳಿಸಲು ’ಸಹಕಾರ ಕುಸುಮ’ ತ್ರೈಮಾಸಿಕ.
ಟ ಸದಸ್ಯತ್ವ ನೋಂದಣಿ ಅಭಿಯಾನ. ಸುಮಾರು ೨೦೦ ಸಹಕಾರಿ ಸಂಘಗಳು ಮತ್ತು ೫೦೦೦ ವ್ಯಕ್ತಿ ಸದಸ್ಯರ ಸದಸ್ಯತ್ವ ನೋಂದಣಿ.
ಆಂದೋಲನಾತ್ಮಕ ಚಟುವಟಿಕೆಗಳು
ಟ ಕರ್ನಾಟಕದಲ್ಲಿ ೫% ಸಹಕಾರ ಕಲ್ಯಾಣ ನಿಧಿ ರದ್ದತಿಗೆ ನ್ಯಾಯಾಲಯದ ಮೂಲಕ ಹೋರಾಟ. ಅದರಲ್ಲಿ ಯಶಸ್ಸು. ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿಯಲ್ಲಿ ಸಹಕಾರ ಭಾರತಿಯ ಶಿಫಾರಸ್ಸುಗಳಿಗೆ ಮನ್ನಣೆ.
ಟ ಕಾನೂನು ತಿದ್ದುಪಡಿಯ ಮೂಲಕ ಸಹಕಾರ ಸಂಘಗಳ ಆಡಳಿತ ಮಂಡಳಿಗಳಿಗೆ ಹೆಚ್ಚಿನ ಅಧಿಕಾರ ಸಿಗುವಂತೆ ಮಾಡುವಲ್ಲಿ ಯಶಸ್ವಿ.
ಟ ಕೃಷಿ ಪತ್ತಿನ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಪ್ರೊ| ವೈದ್ಯನಾಥನ್ ಸಮಿತಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಸತತ ಹೋರಾಟ.
ಟ ಸಹಕಾರ ಸಂಘಗಳ ಮೂಲಕ ಖರೀದಿಸಿದ ಹಾಲಿಗೆ ೨ ರೂಪಾಯಿ ಬೆಂಬಲ ಬೆಲೆ ಸಿಗುವಂತೆ ಮಾಡುವಲ್ಲಿ ಯಶಸ್ವಿ.
ಟ ಸಹಕಾರಿ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕರಡು ತಯಾರಿ. ಸಚಿವರಿಗೆ ಮನವಿ.
ಪ್ರಕಲ್ಪಾತ್ಮಕ ಚಟುವಟಿಕೆಗಳು
ಟ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯ ರಚನೆಯಲ್ಲಿ ಸಹಕಾರ ಭಾರತಿಯ ವಿಶೇಷ ಪ್ರಯತ್ನ ಹಾಗೂ ಈ ಕಾಯ್ದೆಯಡಿ ಹೊಸ ಸಂಘಗಳ ಸ್ಥಾಪನೆ.
ಟ ಪ್ರತಿ ಗ್ರಾಮದಲ್ಲಿ ಸಹಕಾರಿ ಸಂಘ ಮತ್ತು ಪ್ರತಿ ಜಿಲ್ಲೆಯಲ್ಲಿ ಕೇಂದ್ರ ಸಹಕಾರಿ ಬ್ಯಾಂಕು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ.
ಚುನಾವಣೆಗಳಲ್ಲಿ ಯಶಸ್ಸು
ಟ ಕರ್ನಾಟಕ ಸೌಹಾರ್ದ ಸಹಕಾರಿ ಮಹಾಮಂಡಳಕ್ಕೆ ಸಹಕಾರ ಭಾರತಿಯ ನೇತೃತ್ವ.
ಟ ಕ್ಯಾಂಪ್ಕೋ, ಮ್ಯಾಮ್‌ಕೋಸ್, ತುಮ್‌ಕೋಸ್, ಕೆ.ಸಿ.ಸಿ. ಬ್ಯಾಂಕ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲದೇ ರಾಜ್ಯದ ಸುಮಾರು ೫೦೦೦ ಸಹಕಾರ ಸಂಸ್ಥೆಗಳಿಗೆ ಸಹಕಾರ ಭಾರತಿಯ ಕಾರ್ಯಕರ್ತರ ನೇತೃತ್ವ. ನಿಮ್ಮ ಊರಿನಲ್ಲಿನ ಸಹಕಾರ ಸಂಘವನ್ನೂ ಸಹಕಾರ ಭಾರತಿಯೊಂದಿಗೆ ಜೋಡಿಸ ಬೇಕೆನಿಸುತ್ತಿ ದೆಯೇ? ಅಥವಾ ಹೊಸ ಸಹಕಾರ ಸಂಘ ಶುರು ಮಾಡಬೇಕೆನಿಸುತ್ತಿದೆಯೇ? ಹಾಗಿದ್ದರೆ, ಇಲ್ಲಿದೆ ನೋಡಿ ವಿಳಾಸ.
ಸಹಕಾರ ಭಾರತಿ ಕರ್ನಾಟಕ
ನಂ. ೧೭೨/೧೧, ಮೊದಲನೆಯ ಮಹಡಿ,
೩ನೆಯ ಮುಖ್ಯರಸ್ತೆ, ೧ನೆಯ ಅಡ್ಡರಸ್ತೆ, ದೇವಯ್ಯ ಪಾರ್ಕ್,
ರಾಮಮೋಹನಪುರ, ಬೆಂಗಳೂರು – ೫೬೦ ೦೨೧
ದೂರವಾಣಿ : 080 6565 0717 / 98458 93455