• Samvada
Wednesday, May 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಸಮಾಚಾರ ಸಮೀಕ್ಷೆ – ಜನವರಿ 2012

Vishwa Samvada Kendra by Vishwa Samvada Kendra
December 29, 2011
in Articles
250
0
ಸಮಾಚಾರ ಸಮೀಕ್ಷೆ – ಜನವರಿ 2012
491
SHARES
1.4k
VIEWS
Share on FacebookShare on Twitter

ಕೇರಳದಲ್ಲಿ ಕ್ಯಾಥೋಲಿಕ್ ಚರ್ಚ್ ವತಿಯಿಂದ ಜನಸಂಖ್ಯೆ ಹೆಚ್ಚಿಸಿ ಅಭಿಯಾನ

ಸುದ್ದಿ: ಕೇರಳದಲ್ಲಿ ಕ್ಯಾಥೋಲಿಕ್ ಚರ್ಚ್ ನವೆಂಬರ್ 14ರಂದು ೫ಕ್ಕಿಂತ ಹೆಚ್ಚು ಮಕ್ಕಳಿರುವ 5೦೦೦ ದಂಪತಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಮೂಲಕ ವಿನೂತನ ರೀತಿಯಲ್ಲಿ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಂಡಿತ್ತು. ಪರಿವಾರ ಬೆಳೆಸಿ ಎಂಬ  ಘೋಷಣೆ  ಸಹಿತ ನಡೆದ ಈ ಅಭಿಯಾನವನ್ನು ಇನ್ನೂ ಮುಂದುವರೆಸುವ ಯೋಜನೆ ಅವರಿಗಿದೆ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಹಿನ್ನೆಲೆ: ಕ್ರೈಸ್ತ ಜನಸಂಖ್ಯೆ ದಟ್ಟವಾಗಿರುವ ರಾಜ್ಯಗಳ ಪೈಕಿ ಕೇರಳವೂ ಒಂದು. ಅಲ್ಲಿ ಸುಮಾರು 2೦% ಕ್ರೈಸ್ತರಿದ್ದಾರೆ. ಅವರು ಸುಶಿಕ್ಷಿತರೂ ಆಗಿರುವವರು. ಆದರೆ, ಕಳೆದ ಒಂದು ದಶಕದಲ್ಲಿ ಅವರ ಜನಸಂಖ್ಯೆ ೦.೨೫%zಂ?ಂಂಔ ಕಡಿಮೆಯಾಗಿದೆ. ಮುಸಲ್ಮಾನರು ಸಹ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜ್ಯ ಕೇರಳವೇ. ಆದರೆ, ಇದೇ ಕಾಲಾವಧಿಯಲ್ಲಿ ಅವರ ಜನಸಂಖ್ಯೆ ಹೆಚ್ಚಿದೆ. ಕ್ಯಾಥೋಲಿಕ್ ಸಮುದಾಯದ ನಾಯಕರು ತುಂಬ ಚಿಂತಿತರಾಗಲು ಮುಖ್ಯ ಕಾರಣವಿದು.  ಈ ವಿದ್ಯಮಾನದ ಬಗ್ಗೆ ಗಂಭೀರವಾಗಿ ಲಕ್ಷ್ಯ ವಹಿಸುವಂತೆ ಹಿಂದುಗಳಿಗೂ ಅವರು ಎಚ್ಚರ ನೀಡಿದ್ದಾರೆ.

ಈ ಅಭಿಯಾನವನ್ನು 2008 ನೇ ಇಸವಿಯಿಂದಲೇ ಆರಂಭಿಸಿ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚರ್ಚ್ ಕೈಗೊಂಡಿರುವ ಕೆಲವು ಕ್ರಮಗಳು ಹೀಗಿವೆ:

೧. ಹೆಚ್ಚಿನ ಮಕ್ಕಳನ್ನು ಹೊಂದಿರುವಂತೆ ಮಾಡಲು, ಕ್ರೈಸ್ತ ದಂಪತಿಗಳಿಗೆ ಹಲವು ವಿಧದ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

೨. ವಾಯನಾಡ್ ಜಿಲ್ಲೆಯ ಸೈಂಟ್ ವಿನ್ಸೆಂಟ್ ಚರ್ಚ್ ತನ್ನ ಕ್ಷೇತ್ರದಲ್ಲಿನ ಯಾವುದೇ ಕ್ಯಾಥೋಲಿಕ್ ಪರಿವಾರದಲ್ಲಿ ಐದನೇ ಮಗು ಹುಟ್ಟಿದಲ್ಲಿ ಅದಕ್ಕೆ ರೂ.೧೦,೦೦೦/- ನಗದು ಬಹುಮಾನ ಘೋಷಿಸಿದೆ.

೩. ಇಡುಕ್ಕಿ ಡಯೋಸಿಸ್ (ಕ್ರೈಸ್ತ ಪ್ರಾಂತ)ದಲ್ಲಿ ಎರಡಕ್ಕಿಂತ ಹೆಚ್ಚಾಗಿ ಹುಟ್ಟುವ ಪ್ರತಿ ಮಗುವಿಗೂ ಹೆಚ್ಚೆಚ್ಚು ಉಡುಗೊರೆ ಮತ್ತು ಪ್ರೋತ್ಸಾಹಧನ ನೀಡಬೇಕೆಂದು ಒಂದು ವಿಸ್ತೃತ ಯೋಜನೆ ರೂಪಿಸಲಾಗಿದೆ. ಉದಾಹರಣೆಗೆ ನಾಲ್ಕನೇ ಮಗು ಹುಟ್ಟಿದಲ್ಲಿ, ಅದಕ್ಕೆ ಸಂಬಂಧಿಸಿದ ಆಸ್ಪತ್ರೆಯ ಖರ್ಚು-ವೆಚ್ಚಗಳನ್ನು ಚರ್ಚ್ ತಾನೇ ನಿಭಾಯಿಸಲಿದೆ. ಐದನೇ ಮಗು ಹುಟ್ಟಿದಲ್ಲಿ ಅದರ ಪೂರ್ಣ ಜೀವನದ ವೆಚ್ಚವನ್ನು ತಾನೇ ವಹಿಸಿಕೊಳ್ಳಲಿದೆ.

೪. ಆಲ್ ಇಂಡಿಯಾ ಕ್ರಿಶ್ಚಿಯನ್ ಕೌನ್ಸಿಲ್‌ನ ನಾಯಕ ಜಾನ್ ದಯಾಳ್ ಅವರು ಹೇಳುವಂತೆ, ಕ್ರೈಸ್ತ ಪರಿವಾರದ ನಾಲ್ಕನೇ ಮಗುವಿನ ಶಿಕ್ಷಣಕ್ಕೆ ಚರ್ಚ್ ಸ್ವತಃ ವಿಇಂ?ಂ ವ್ಯವಸ್ಥೆ ಮಾಡಲಿದೆ. ಹೆಚ್ಚಿನ ಮಕ್ಕಳಿರುವ ಕ್ರೈಸ್ತ ಪರಿವಾರಗಳಿಗೆ ಎಲ್ಲ ಕ್ರೈಸ್ತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಬಂಧಿತಪ್ಯಾಕೇಜುಗಳನ್ನು ಜಾರಿಗೊಳಿಸಲಾಗುವುದು.

  • . ಆಧುನಿಕ ವಿಶ್ವದಲ್ಲಿ ಜನಸಂಖ್ಯಾ ವೃದ್ಧಿ ಒಂದು ದೂರಗಾಮಿ ಯುದ್ಧತಂತ್ರವೆಂಬುದನ್ನು ಅಲಕ್ಷಿಸಲಾಗದು. ಯಾವುದೇ ಸಮುದಾಯವೂ ಇದನ್ನು ಅಲಕ್ಷಿಸುವುದು ಆತ್ಮಘಾತುಕವೇ ಆದೀತು. ಕೇರಳದ ಕ್ಯಾಥೋಲಿಕ್ ಚರ್ಚ್ ಈ ನಿಟ್ಟಿನಲ್ಲಿ ಎಚ್ಚರ ವಹಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಭಾರತದಿಂದ ಪ್ರತ್ಯೇಕಗೊಂಡ ದೇಶಗಳಾದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಜನ್ಮತಳೆದುದು ಇದಕ್ಕೊಂದು ತಾಜಾ ಉದಾಹರಣೆ. ಆಫ಼್ಘಾನಿಸ್ತಾನವಂತೂ ಈ ಹಿಂದೆಯೇ ಈ ವಿದ್ಯಮಾನಕ್ಕೆ ಸಾಕ್ಷಿ ನೀಡಿದೆ. ಇದೀಗ ಕಾಶ್ಮೀರ ಸಹ ಇದೇ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಅತ್ತ ಪೂರ್ವಾಂಚಲದ ರಾಜ್ಯಗಳೂ ಕ್ರೈಸ್ತ ಬಾಹುಳ್ಯದ ಮೂಲಕ ಸಮಸ್ಯಾಗ್ರಸ್ತವಾಗುತ್ತಿರುವುದು ಇದೇ ಕಾರಣಕ್ಕಾಗಿ. ಈ ಹಿನ್ನೆಲೆಯಲ್ಲಿ ಹಿಂದು ಸಮಾಜವು ಸ್ವಲ್ಪವೂ ಎಚ್ಚರ ವಹಿಸುತ್ತಿಲ್ಲ ಎನ್ನುವುದು ಅತ್ಯಂತ ಗಂಭೀರ ಹಾಗೂ ಖೇದಕರ ಸಂಗತಿಯಾಗಿದೆ.
  • ೨. ಚೆನ್ನೈನ ಸೆಂಟರ್ ಫ಼ಾರ್ ಪಾಲಿಸಿ ಸ್ಟಡೀಸ್ನ ಒಂದು ಅಧ್ಯಯನಪೂರ್ಣ ವರದಿ ರಿಲೀಜಿಯಸ್ ಡೆಮಾಗ್ರಫ಼ಿ ಆಫ಼್ ಇಂಡಿಯಾ’ (ಭಾರತದಲ್ಲಿ ಮತಾನುಸಾರ ಜನಸಂಖ್ಯಾ ದಟ್ಟಣೆ) ಈ ಬಗ್ಗೆ ವಿವರವಾದ ಮಾಹಿತಿಯನ್ನು ೨೦೦೩ರಲ್ಲೇ ಗ್ರಂಥ ರೂಪದಲ್ಲಿ ನೀಡಿದೆ. ಅದು ಹೇಳುವಂತೆ, ಭಾರತದ ಪ್ರತಿಯೊಂದು ಭಾಗದಲ್ಲೂ ಮುಸಲ್ಮಾನ ಜನಸಂಖ್ಯೆ ಇನ್ನಿತರ ಯಾವುದೇ ಸಮುದಾಯದ ಹೋಲಿಕೆಯಲ್ಲಿ ಅತಿ ವೇಗದಲ್ಲಿ ಹೆಚ್ಚುತ್ತಿದೆ. ೧೯೯೩ರಲ್ಲಿ ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ೧೧% ಇದ್ದಲ್ಲಿ, ಕೇವಲ ೧೫ ಂ?ಂಜUಂಳಲ್ಲಿ ಅದು ೧೪% ಆಗಿದೆ. ಸಮೀಪದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಂತೂ ಇವರ ಜನಸಂಖ್ಯೆಯು ಇನ್ನೂ ತೀವ್ರಗತಿಯಲ್ಲಿ ಏರುತ್ತಿದೆ. ಪರಿಣಾಮವೆಂದರೆ, ೧೯೪೭ರ ಪೂರ್ವದಲ್ಲಿ ಒಂದಾಗಿದ್ದ ಭೂಪ್ರದೇಶದಲ್ಲಿ ಮುಸಲ್ಮಾನರ ಜನಸಂಖ್ಯೆ ಹಿಂದುಗಂ?ಇಔಂ ಆಗಲಿರುವ ಸ್ಥಿತಿ ಬಹು ದೂರವೇನಲ್ಲ.
  • ೩. ಭಾರತದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರು ತಮ್ಮ ಜನಸಂಖ್ಯೆ ಹೆಚ್ಚಿಸಲು ಒಂದು ಕಡೆ ಅನಿಯಂತ್ರಿತ ಪ್ರಜನನದ ಪ್ರಕ್ರಿಯೆ ನಡೆಸುತ್ತಿದ್ದಲ್ಲಿ ಇನ್ನೊಂದು ಕಡೆ ಮತಾಂತರದ ಮೂಲಕವೂ ಅದಕ್ಕಾಗಿ ಭರದಿಂದ ಪ್ರಯತ್ನದಲ್ಲಿ ತೊಡಗಿದ್ದಾರೆ. ಮುಸಲ್ಮಾನರಂತೂ ನೆರೆದೇಶಗಳಿಂದ ಅಕ್ರಮ ವಲಸೆ ನಡೆಸುತ್ತಿದ್ದಾರೆ. ’ಲವ್ ಜೆಹಾದ್’ ಕೂಡಾ ಇದೇ ಯೋಜನೆಯ ಇನ್ನೊಂದು ಮುಖ. ವಿಡಂಬನೆಯೆಂದರೆ ಹಿಂದು ಬಹುಸಂಖ್ಯಾತ ಭಾರತದಲ್ಲಿ ಕೇಂದ್ರ ಸರಕಾರ ಅಕ್ರಮವಲಸಿಗರನ್ನೂ ಸಕ್ರಮಗೊಳಿಸುವ ಕೆಲಸ ನಡೆಸುತ್ತಿದೆ. ಭಾಜಪ ಆಡಳಿತವಿರುವ ರಾಜ್ಯಗಳು ಮತಾಂತರ ವಿರೋಧಿ ಕಾನೂನು ಜಾರಿಗೊಳಿಸಲು ಅಲ್ಲಲ್ಲಿನ ರಾಜ್ಯಪಾಲರು ಅಡ್ಡಗಾಲು ಹಾಕುತ್ತಿದ್ದಾರೆ. ಹಿಂದುಗಳು ಕುಟುಂಬ ಯೋಜನೆಯನ್ನು ಕಾನೂನಿನ ರೀತಿಯಲ್ಲಿ ಪಾಲಿಸುತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಮಕ್ಕಳಿರುವವರನ್ನು ತಪ್ಪಿತಸ್ಥರಂತೆ ಕಾಣಲಾಗುತ್ತದೆ. ಆದರೆ, ಗಮನಿಸಬೇಕಾದ ಸಂಗತಿಯೆಂದರೆ, ಕುಟುಂಬ ಯೋಜನೆಯು ಇಲ್ಲಿಯವರೆಗೆ ಕಾನೂನಾಗಿಲ್ಲ. ಹೀಗಾಗಿ, ಕುಟುಂಬ ಯೋಜನೆಯನ್ನು ಪಾಲಿಸದಿರುವುದು ಅಪರಾಧವಲ್ಲ. ಆದರೆ, ಕುಟುಂಬ ಯೋಜನೆಯ ಆಗ್ರಹವಿರುವುದು ಹಿಂದುಗಳಿಗೆ ಮಾತ್ರ ಮತ್ತು ಅದನ್ನು ಅಕ್ಷರಶಃ ಪಾಲಿಸುತ್ತಿರುವುದೂ ಹಿಂದುಗಳು ಮಾತ್ರ. ಇವೆಲ್ಲವೂ ಹಿಂದು ಸಮಾಜಕ್ಕೆ ಮರಣಶಾಸನವಲ್ಲದೆ ಇನ್ನೇನು?

೪. ವಿಶ್ವದಲ್ಲಿ ಮುಸಲ್ಮಾನ ಬಹುಸಂಖ್ಯಾತವಿರುವ ಹಲವು ದೇಶಗಳಿವೆ. ಅದೇ ರೀತಿ ಕ್ರೈಸ್ತರು ಹೆಚ್ಚಿರುವ ದೇಶಗಳೂ ಸಾಕಷ್ಟಿವೆ. ವಾಸ್ತವಿಕವಾಗಿ ಸಂಪೂರ್ಣ ವಿಶ್ವದಲ್ಲಿ ಕ್ರೈಸ್ತರ ಸಂಖ್ಯೆಯೇ ಅತಿ ಹೆಚ್ಚಿನದು. ಹೀಗಿದ್ದರೂ ತಮ್ಮ ಜನಸಂಖ್ಯೆಯ ಬಗ್ಗೆ ಅವರಿಗೆ ಚಿಂತೆಯಿದೆ. ತಮ್ಮ ಜನಸಂಖ್ಯೆ ಕಡಿಮೆಗೊಳಿಸಬೇಕೆಂದು ಯಾವುದೇ ದೇಶದ ಸರಕಾರವಾಗಲೀ, ಅಲ್ಲಿನ ಮತೀಯ ನಾಯಕರಾಗಲೀ ಅಲ್ಲಲ್ಲಿನ ಸಮುದಾಯಗಳಿಗೆ ಉಪದೇಶಿಸುವುದಿಲ್ಲ. ಬದಲಾಗಿ ಹೆಚ್ಚಿಸಲು ಪ್ರೋತ್ಸಾಹ ಕೊಡುವಂತಹವು ಹಲವಿವೆ. ಜನಸಂಖ್ಯಾ ಬೆಳವಣಿಗೆಗೆ ನಿಯಂತ್ರಣ ವಿಧಿಸಲು ಪ್ರಯತ್ನಿಸುತ್ತಿರುವುದು ಭಾರತ ಮತ್ತು ಚೀನಾದಲ್ಲಿ ಮಾತ್ರ (ಚೀನಾಕ್ಕೆ ತನ್ನದೇ ಆದ ಬೇರೆ ಕೆಲವು ಸಮಸ್ಯೆಗಳಿವೆ). ಹಿಂದುಗಳು ಬಹುಸಂಖ್ಯಾತರಾಗಿರುವ ದೇಶಗಳು ಭಾರತ ಮತ್ತು ನೇಪಾಳ ಮಾತ್ರ. ಹೀಗಿದ್ದರೂ ಹಿಂದುಗಳು ಜನಸಂಖ್ಯೆ ಕಡಿಮೆಗೊಳಿಸುವ ಅಗತ್ಯವಿದೆ ಎಂದು ಉಪದೇಶಿಸುವುದು ಅದೂರದರ್ಶಿತ್ವದ ಪರಮಾವಧಿಯಲ್ಲದೆ ಬೇರೇನೂ ಅಲ್ಲ.

೫. ಕಿತ್ತು ತಿನ್ನುವ ಬಡತನ, ಬದುಕಿನ ಅಸುರಕ್ಷಿತತೆ, ಸಾಂಕ್ರಾಮಿಕ ರೋಗ ಅಥವಾ ಘೋರ ಬರಗಾಲದಂತಹ ಪ್ರಾಕೃತಿಕ ವಿಕೋಪಗಳಿಂದಾಗಿ ಜನಸಂಖ್ಯೆಯಲ್ಲಿ ಕುಸಿತ, ಇತ್ಯಾದಿಗಳು ಪ್ರಜನನದ ವೇಗವನ್ನು ಹೆಚ್ಚಿಸುತ್ತವೆ ಎಂಬುದು ಸಮಾಜಶಾಸ್ತ್ರದ ಅಧ್ಯಯನ ನಡೆಸುವವರು ಗುರುತಿಸಿರುವ ವಿದ್ಯಮಾನ. ಹೀಗಾಗಿ ಸಮಾಜದಲ್ಲಿ ಸಮೃದ್ಧಿ, ಸುರಕ್ಷಿತತೆ ಹಾಗೂ ಆರೋಗ್ಯ ಸಂಪನ್ನತೆ ಹೆಚ್ಚಾದಾಗ ತಾನಾಗಿಯೇ ಜನಸಂಖ್ಯಾ ಹೆಚ್ಚಳವೂ ನಿಯಂತ್ರಿತವಾಗುತ್ತದೆ ಎಂಬುದು ಈ ಅಧ್ಯಯನ ಹೇಳುವ ಇನ್ನೊಂದು ಮಾಹಿತಿ (ಶ್ರೀಮಂತ ಪರಿವಾರಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಹಾಗೂ ಬಡವರಿಗೆ ಮಕ್ಕಳು ಹೆಚ್ಚಿರುವುದು ಇದೇ ಕಾರಣಕ್ಕಾಗಿ ಎಂದು ಹೇಳಲಾಗುತ್ತದೆ).

ಹೀಗಾಗಿ ಸರಕಾರ ಸಮಾಜದ ಮೇಲೆ ಹೇರಬೇಕಾದುದು ಕಡ್ಡಾಯ ಕುಟುಂಬ ಯೋಜನೆಯಲ್ಲ; ಬದಲಾಗಿ ಸಾಮಾಜಿಕ ಸುರಕ್ಷಿತತೆ, ಸಮೃದ್ಧಿ ಹಾಗೂ ಆರೋಗ್ಯ ಸಂಪನ್ನತೆ.

 ಅಂತರ್ಜಾಲ ಸರಕಾರದ ಕೈಗೊಂಬೆಯಾಗಿರಬೇಕೆ?

ಸುದ್ದಿ: ಕೇಂದ್ರದ ಸಚಿವರಾದ ಶ್ರೀ ಕಪಿಲ್ ಸಿಬಲ್ ಅವರು ಅಂತರ್ಜಾಲದಲ್ಲಿ ಪ್ರಕಾಶಿತವಾಗುವ ಸುದ್ದಿ, ಅಭಿಪ್ರಾಯ ಮತ್ತು ಚರ್ಚೆಗಳಲ್ಲಿ ನಿಯಂತ್ರಣ ತರುವ ಪ್ರಸ್ತಾಪವನ್ನು ಅಂತರ್ಜಾಲ ಸಂಬಂಧೀ ಕಂಪನಿಗಳ ಮುಂದೆ ಇಟ್ಟಿದ್ದಾರೆ.

ಹಿನ್ನೆಲೆ: ೧. ೨೦೦೦ನೇ ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾನೂನು ಜಾರಿಗೆ ಬಂದಿತು. ಅದು ಸಂಖ್ಯಾ ಸಹಿ (ಜigiಣಚಿಟ sigಟಿಚಿಣuಡಿe), ಉದ್ಯಮಗಳ ರಕ್ಷಣೆ, ಅಂತರ್ಜಾಲದ ಮೂಲಕ ನಡೆಯುವ ಕಳ್ಳತನದಂತಹ ಹಲವಾರು ಅಂಶಗಳನ್ನು ಒಳಗೊಂಡಿತ್ತು. ಈ ಕಾನೂನಿನ ಪ್ರಕಾರ ಪೋಲೀಸರು ನ್ಯಾಯಾಲಯದ ಅನುಮತಿ ಇಲ್ಲದೇ ಯಾವುದೇ ಸ್ಥಳವನ್ನು ಶೋಧಿಸಬಹುದು ಮತ್ತು ಯಾರನ್ನೇ ಆದರೂ ಬಂಧಿಸಬಹುದು. ೨೦೦೦ನೇ ಇಸವಿಗೆ ಮುಂಚೆಯೂ, ಭಾರತದಲ್ಲಿ ಅಂತರ್ಜಾಲದ ತಾಣಗಳನ್ನು ನಿಯಂತ್ರಣಕ್ಕೆ ಒಳಪಡಿಸಲಾಗಿತ್ತು. ಕಾರ್ಗಿಲ್ ಯುದ್ಧದ ಮಧ್ಯೆ ಪಾಕಿಸ್ತಾನದ ಡಾನ್ ಪತ್ರಿಕೆಯನ್ನು ನಿರ್ಬಂಧಿಸಲಾಗಿತ್ತು.

೨. ೨೦೦೩ರಲ್ಲಿ ಈಶಾನ್ಯ ಪ್ರಾಂತಗಳಲ್ಲಿ ಸಕ್ರಿಯವಾಗಿದ್ದ ಭಯೋತ್ಪಾದನಾ ಸಂಘಟನೆಯೊಂದರ ಯಾಹೂ ಗುಂಪು (ಙಚಿhoo! ಉಡಿouಠಿs) ಒಂದನ್ನು ನಿ?ಇಂ’ಸಲಾಗಿತ್ತು. ಹಾಗೆಯೇ, ಡಾ||ಅಂಬೇಡ್ಕರ್, ಶಿವಾಜಿ ಮಹಾರಾಜ್ ಇವರ ಬಗ್ಗೆ ನಡೆಸಿದ ಅವಹೇಳನಾಕಾರೀ ಪ್ರಚಾರಕ್ಕೆ ಕೆಲ ತಾಣಗಳನ್ನು ನಿ?ಇಂ’ಸಲಾಗಿತ್ತು. ಬಾಳಾ ಠಾಕ್ರೆಯವರನ್ನು ಟೀಕಿಸಿದ ತಾಣವೂ ನಿರ್ಬಂಧಕ್ಕೊಳಗಾಗಿತ್ತು. ಗ್ಲಾಸ್‌ಗೋ ಭಯೋತ್ಪಾದನೆಯಲ್ಲಿ ಭಾಗವಹಿಸಿದ ಡಾ||ಕಫೀಲ್ ಅಹ್ಮದ್ ಬಗ್ಗೆ ಪ್ರಕಟಿಸಿದ ಸುದ್ದಿಯೊಂದನ್ನು ರೀಡಿಫ್.ಕಾಮ್ (ಖeಜiಜಿಜಿ.ಛಿom) ಅಂತರ್ಜಾಲ ತಾಣವು ಸರ್ಕಾರದ ಆದೇಶದ ಮೇರೆಗೆ ವಾಪಸ್ ಪಡೆದಿತ್ತು. ಹಾಗೆಯೇ, ‘ಸಂಗಮ್’ ಚಿತ್ರದ ಹಕ್ಕುಗಳನ್ನು ಕಾಪಾಡಲು ನ್ಯಾಯಾಲಯವು ಹೊರಡಿಸಿದ ಆದೇಶವನ್ನು ಪಾಲಿಸಲು ಸರ್ಕಾರವು ಹಲವಾರು ತಾಣಗಳನ್ನು ನಿಯಂತ್ರಣಕ್ಕೊಳಪಡಿಸಿ ಕೋಲಾಹಲಕ್ಕೆ ಕಾರಣವಾಗಿತ್ತು.

೩. ತೀರಾ ಇತ್ತೀಚೆಗೆ, ೨೦೧೧ರಲ್ಲಿ ನೂರಾರು ತಾಣಗಳನ್ನು ಸರ್ಕಾರ ನಿ?ಇಂ’ಸಲು ಉದ್ದೇಶಿಸಿತ್ತು. ಸರ್ಕಾರವನ್ನು ಟೀಕಿಸಿದ್ದೇ ಅವುಗಳಲ್ಲಿ ಬಹುಪಾಲು ತಾಣಗಳು ಮಾಡಿದ ತಪ್ಪಾಗಿತ್ತು. ಈಗ ವೈಯುಕ್ತಿಕ ನಿಂದನೆ ಮತ್ತು ಮತೀಯ ನಿಂದನೆಯನ್ನು ತಡೆಯುವ ಪ್ರಸ್ತಾಪದೊಂದಿಗೆ ಸರ್ಕಾರವು ಅಂತರ್ಜಾಲ ತಾಣಗಳನ್ನು ನೀಡುವ ಉದ್ಯಮಗಳ ಜೊತೆ ಮಾತುಕತೆಗೆ ಮುಂದಾಗಿದೆ.

Analysis:

೧. ಮುದ್ರಣ, ದೃಶ್ಯ ಮತ್ತು ಶ್ರವಣ ಮಾಧ್ಯಮಗಳ ಮೇಲೆ ಸರ್ಕಾರದ ಮತ್ತು ಇತರರ ನಿಯಂತ್ರಣ ತುಲನಾತ್ಮಕವಾಗಿ ಸುಲಭ. ಏಕೆಂದರೆ ಈ ಮಾಧ್ಯಮಗಳಿಗೆ ಬಂಡವಾಳ ಮತ್ತು ಸರ್ಕಾರದ ಅನುಮತಿ ಬೇಕು. ಪತ್ರಕರ್ತರಿಗೆ ಮಾಧ್ಯಮ ಉದ್ಯಮ ಲಾಭಗಳಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಇದೆ. ಆದರೆ ಅಂತರ್ಜಾಲದ ಉದ್ಯಮದಲ್ಲಿ ಬರಹಗಾರರು ಮತ್ತು ತಾಣಗಳನ್ನು ನೀಡುವವರು ಬೇರೆಬೇರೆಯಾದ್ದರಿಂದ ಸರಕಾರದ ನಿಯಂತ್ರಣ ಸುಲಭವಲ್ಲ.

೨. ಅಂತರ್ಜಾಲವು ಎಲ್ಲಾ ವಯಸ್ಸಿನವರಿಗೂ ಸಮಾನವಾಗಿ ಸಿಗುವಂತಹದು. ಹೀಗಾಗಿ ಮಕ್ಕಳನ್ನು, ಹದಿವಯಸ್ಕರನ್ನು ಹಾದಿತಪ್ಪಿಸುವ ತಾಣಗಳ ನಿಯಂತ್ರಣದ ಅಗತ್ಯ ಇದ್ದೇ ಇದೆ. ಆರ್ಥಿಕ ಉದ್ಯಮಗಳ ರಕ್ಷಣೆಗೆ, ಅಂತರ್ಜಾಲದ ಮೂಲಕ ನಡೆಯುವ ಮೋಸ, ಕಳ್ಳತನಗಳಿಗೆ ಕಡಿವಾಣ ಹಾಕಲು ಸಹ ಕಾನೂನಿನ ಅಗತ್ಯವಿದ್ದೇ ಇದೆ. ಈ ಹಿಂದೆ ಸರ್ಕಾರವು ನಿರ್ಬಂಧಿಸಿದ ಸಂದರ್ಭಗಳೆಲ್ಲವೂ ಆಕ್ಷೇಪಾರ್ಹವೇನಲ್ಲ. ಕಾರ್ಗಿಲ್ ಯುದ್ದದಂಥ ಸಂದರ್ಭದಲ್ಲಿ ದೇಶ ವಿರೋಧೀ ಶಕ್ತಿಗಳು ಭಾರತದ ನಾಗರಿಕರಲ್ಲಿ ಗೊಂದಲ ಮೂಡಿಸುವಂತೆ ಮಾಹಿತಿ ನೀಡುತ್ತಾರೆ ಎಂಬುದು ಅರ್ಥವಾಗುವಂಥಹುದೇ. ಅಂಥಹ ಸನ್ನಿವೇಶದಲ್ಲಿ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವುದು ಸ್ವಾಗತಾರ್ಹವೇ. ಆಂತರಿಕವಾಗಿ, gಂ?ಂಔಛಿ\ಂಂgಂಂ?ಂgಂ ಹಾಗೂ ಸಂಸ್ಕೃತಿಯ ಅವಹೇಳನ ಮಾಡುವ ಬರಹ, ತಾಣಗಳನ್ನು ಮುಕ್ತವಾಗಿ ಬಿಡಲೂಬಾರದು. ಅವುಗಳಿಗೆ ಅಗತ್ಯ ಕಡಿವಾಣವನ್ನು ಹಾಕುವಂಥ ಕಾನೂನುಗಳು ಬೇಕೇ ಬೇಕು. ಮತ್ತು ಅವುಗಳ ಬಳಕೆಯೂ ಆಗಬೇಕು.

೩. ಚಲನಚಿತ್ರ ಮತ್ತು ಧ್ವನಿಸುರುಳಿಗಳ ಹಕ್ಕು ಕಾಪಾಡುವ ಹೊಣೆ ಸರ್ಕಾರಕ್ಕಿದೆ. ಈ ಸಂಬಂಧ ನ್ಯಾಯಾಲಯಗಳು ನೀಡುವ ತೀರ್ಪುಗಳ ಜಾರಿಯ ಜವಾಬ್ದಾರಿ ಸರ್ಕಾರದ್ದೇ. ಆದರೆ ಸರ್ಕಾರದ ಅತಿರೇಕದ ಮತ್ತು ಅಪರೂಪದ ಪ್ರತಿಕ್ರಿಯೆ ಅನಪೇಕ್ಷಣೀಯ. ಹಾಗೆಯೇ ರಾಜಕೀಯ ಹಿತಾಸಕ್ತಿ, ಒತ್ತಡಗಳಿಗೆ ಮಣಿದು ಸರ್ಕಾರ ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವುದು ಸಲ್ಲದು.

೪. ಭಾರತದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಕೋಮುಗಲಭೆ, ಮತಾಂತರ ಮತ್ತು ಎಡಪಂಥೀಯರ ಹಿಂಸಾಚಾರದಂತಹ ಹಲವಾರು ಸಮಸ್ಯೆಗಳು ಮುಂದುವರೆದಿದೆ. ಈ ಸಮಸ್ಯೆಗಳ ಪರಿಹಾರಕ್ಕಾಗಿ ಮುಕ್ತವಾದ ಚಿಂತನೆ ಅತ್ಯಗತ್ಯ. ಆದರೆ ಮುದ್ರಣ, ದೃಶ್ಯ ಹಾಗೂ ಶ್ರವಣ ಮಾಧ್ಯಮಗಳು ಈ ಸೂಕ್ಷ್ಮ ವಿಚಾರಗಳ ಬಗ್ಗೆ ಮುಕ್ತ ಚಿಂತನೆಗೆ ಅವಕಾಶಮಾಡಿಕೊಡಲು ವಿಫಲವಾಗಿವೆ. ಅಂತರ್ಜಾಲದಲ್ಲಿ ಒಂದಿ?ಂಂಔ ಮಟ್ಟಿಗೆ ಈ ದಿಕ್ಕಿನಲ್ಲಿ ಚರ್ಚೆ ನಡೆಯುತ್ತಿದೆ. ಜಿಹಾದೀ ಮನೋವೃತ್ತಿ, ಕ್ರೈಸ್ತ ಮತಾಂತರಗಳ ವಿರುದ್ಧ ಹಲವಾರು ಧ್ವನಿಗಳು ಅಂತರ್ಜಾಲದಲ್ಲಿ ಮಾತ್ರ ಸಿಗಬಲ್ಲವು. ಇದು ಪಟ್ಟಭದ್ರ ಹಿತಾಸಕ್ತಿಗಳಿಗೆ ಮುಜುಗರ ಉಂಟುಮಾಡಿದೆ. ಹಿಂದೂ ಹಿತಾಸಕ್ತಿಯ ಪರವಾಗಿ ಇರುವ ಧ್ವನಿಗಳು ನಿಲ್ಲುವಂತೆ ಮಾಡುವ ಹಲವಾರು ಯೋಚನೆ-ಯೋಜನೆಗಳು ಪ್ರಾರಂಭವಾಗಿವೆ. ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವ ಕಾನೂನಿನ ದುರುಪಯೋಗ ಆಗುವ ಸಾಧ್ಯತೆಗೆ ಈ ಹಿನ್ನೆಲೆ ಇದೆ.

೫. ಪ್ರಸಕ್ತ ಚರ್ಚೆಯಲ್ಲಿ ಅಂತರ್ಜಾಲ ತಾಣಗಳಲ್ಲಿ ಧಾರ್ಮಿಕ ಅವಹೇಳನವನ್ನು ನಿರ್ಬಂಧಿಸಬೇಕೆಂಬ ಪ್ರಸ್ತಾಪ ಸರ್ಕಾರದಿಂದ ಬಂದಿದೆ. ಸರ್ಕಾರವನ್ನು ನಡೆಸುತ್ತಿರುವ ಪಕ್ಷವಾದ ಕಾಂಗ್ರೆಸ್‌ಗೆ ಅಂತರ್ಜಾಲ ತಾಣಗಳಲ್ಲಿ ಪ್ರಬಲವಾಗುತ್ತಿರುವ ಸೋನಿಯಾ-ರಾಹುಲ್-ಪ್ರಿಯಾಂಕಾ ಟೀಕೆಗಳನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಮತಾಂತರದ ಬಗ್ಗೆ ಮುಕ್ತ ಚರ್ಚೆ ಬೇಕಿರದ ಕ್ರೈಸ್ತರ ಚರ್ಚ್‌ಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನಿನ ವ್ಯಾಖ್ಯೆ ಮಾಡುವಂತೆ ಕಾಂಗ್ರೆಸ್ ಪಕ್ಷದ ಮೇಲೆ ಪ್ರಭಾವ ಬೀರುತ್ತಿವೆ ಎಂಬ ಸಂಶಯ ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಹಿಂದೆಯೂ ಸಹ ಅಂತರ್ಜಾಲ ತಾಣಗಳ ನಿರ್ಬಂಧ ಮಾಡುವ ಕಾನೂನಿನ ದುರುಪಯೋಗ ಆಗಿದೆ. ೨೦೦೮ ರಲ್ಲಿ ಗ್ಲಾಸ್‌ಗೋ ಸ್ಫೋಟದಲ್ಲಿ ಭಾಗವಹಿಸಿದ ಕಫೀಲ್ ಭಾರತದ ಮುಸ್ಲಿಂ ಎಂಬ ಸತ್ಯ ಹೇಳಿದ ರೀಡಿಫ್ ಸುದ್ದಿಯೊಂದನ್ನು ಸರ್ಕಾರ ಬಲವಂತದಿಂದ ತೆಗೆದು ಹಾಕಿಸಿತ್ತು.

೬. ಪ್ರಸಕ್ತ ಸಂದರ್ಭದಲ್ಲಿ ಕಾನೂನಿನ ವ್ಯಾಖ್ಯೆಯನ್ನು ಮಾಡುವ ಸನ್ನಿವೇಶದಲ್ಲಿ ಹಿಂದೂ ಅವಹೇಳನವನ್ನು ಮಾತ್ರ ಧಾರ್ಮಿಕ ಅವಹೇಳನ ಎಂದು ಪರಿಗಣಿಸಬೇಕು. ಮತಾಂತರದ, ಜಿಹಾದೀ ಪ್ರವೃತ್ತಿಯ ವಿಇeಂ?ಂuಇಂiಂಂ’ ಧಾರ್ಮಿಕ ಅವಹೇಳನ ಎಂದು ವ್ಯಾಖ್ಯಾನಿಸಬಾರದು. ಆಗ ಮಾತ್ರ ಇಂತಹ ಕಾನೂನಿಗೆ ವ್ಯಾಪಕ ಮಾನ್ಯತೆ ಸಿಗಬಲ್ಲದು.

DOWNLOAD THE PDF:

Samachara_Sameekshe_Jan_2012

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
Listen to the cries of Hindus from Pakistan; appeals RSS mouthpiece Organiser

Listen to the cries of Hindus from Pakistan; appeals RSS mouthpiece Organiser

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Janajagruti Vedike Launches Campaign Against Media Who Misquoted Bhagwat Statements.

Janajagruti Vedike Launches Campaign Against Media Who Misquoted Bhagwat Statements.

January 21, 2013
In Kerala, Communist Movement plunging into deepest crisis since inception : S Chandrasekhar

In Kerala, Communist Movement plunging into deepest crisis since inception : S Chandrasekhar

June 11, 2012
स्वामी विवेकानन्द और हिन्दू : writes MG Vaidya

स्वामी विवेकानन्द और हिन्दू : writes MG Vaidya

January 6, 2014
ವಿವೇಕಾನಂದ ಬೀರಿದ ಪ್ರಖರ ವೈಚಾರಿಕತೆಯ ಬೆಳಕು: ದು ಗು ಲಕ್ಷ್ಮಣ

ವಿವೇಕಾನಂದ ಬೀರಿದ ಪ್ರಖರ ವೈಚಾರಿಕತೆಯ ಬೆಳಕು: ದು ಗು ಲಕ್ಷ್ಮಣ

January 21, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In