• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

‘ಸಂಘದ ಕೆಲಸ ಹಿಂದೂ ಸಮಾಜದ ಚೌಕಟ್ಟನ್ನು ಬಲಪಡಿಸುವ ಕಾರ್ಯ’: RSS ಸಂಘ ಶಿಕ್ಷಾ ವರ್ಗ ಸಮಾರೋಪದಲ್ಲಿ ಮುಕುಂದಜಿ

Vishwa Samvada Kendra by Vishwa Samvada Kendra
May 10, 2015
in News Digest
252
0
RSS Karnataka State level annual Sangh Shiksha Varg concludes in Bengaluru
495
SHARES
1.4k
VIEWS
Share on FacebookShare on Twitter

ಚನ್ನೇನಹಳ್ಳಿ ಬೆಂಗಳೂರು 09-05-2015: ರಾಷ್ಟ್ರೀಯ ಸ್ವಯಂಸೇವಕ ಸಂಘದ 20 ದಿನಗಳ ವಾರ್ಷಿಕ ಕಾರ್ಯಕರ್ತ ತರಬೇತಿ ಶಿಬಿರ ಸಂಘ ಶಿಕ್ಷಾ ವರ್ಗ-2015’  ಬೆಂUಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಇಂದು ಸಮಾರೋಪಗೊಂಡಿತು.

RSS Sangh Shiksha Varg Samarop May 9-2015 (2)

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ಶಿಬಿರದ ವರದಿಯನ್ನು ನೀಡಿದ ಶಿಬಿರಾಧಿಕಾರಿ ವರದರಾಜನ್‌ರವರು ’ಈ ಬಾರಿಯ ದ್ವಿತೀಯ ವರ್ಷದ ಪ್ರಶಿಕ್ಷಣ ವರ್ಗದಲ್ಲಿ 101 ಊರುಗಳಿಂದ 148ಶಿಕ್ಷಾರ್ಥಿಗಳು ಹಾಗೂ ಪ್ರಥಮ ವರ್ಷದ ವರ್ಗದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 329 ಊರುಗಳಿಂದ  642 ಶಿಕ್ಷಾರ್ಥಿಗಳು ಸೇರಿದಂತೆ ಒಟ್ಟು 780 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ. ಎಪ್ರಿಲ್ 19ರಿಂದ ಆರಂಭಗೊಂಡ 20 ದಿನಗಳ ಶಿಬಿರದಲ್ಲಿ 10ನೇ ತರಗತಿಯಿಂದ ಆರಂಭಗೊಂಡು ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಶಿಕ್ಷಾರ್ಥಿಗಳು ಸೇರಿದಂತೆ ಕೃಷಿಕರು, ಉದ್ಯೋಗಿಗಳು, ಕಾರ್ಮಿಕರು, ಇಂಜಿನಿಯರ್‌ಗಳು ಮೊದಲಾದ ವಿವಿಧ ವೃತ್ತಿಯಲ್ಲಿರುವವರು ಸಂಘ ಶಿಕ್ಷಣ ಪಡೆದರು. ಪ್ರತಿನಿತ್ಯ ಮುಂಜಾನೆ 4.40ಕ್ಕೆ ಆರಂಭಗೊಂಡು ರಾತ್ರಿಯ 10.00ರವರೆಗೆ ನಡೆಯುವ ಶಿಬಿರದ ನಿತ್ಯದ ಚಟುವಟಿಕೆಯಲ್ಲಿ ದಂಡಯುದ್ಧ, ನಿಯುದ್ಧ, ಯೋಗಾಸನ, ಆಟಗಳು ಮೊದಲಾದ ಶಾರೀರಿಕ ಶಿಕ್ಷಣದ ಜೊತೆಗೆ ಗುಂಪು ಚರ್ಚೆ, ಭಾಷಣ, ಕಥೆಗಳ ಮೂಲಕ ದೇಶದ ಇತಿಹಾಸ, ವರ್ತಮಾನಗಳನ್ನು ಅರಿಯುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಿದ್ದಾರೆ. ಜೊತೆಗೆ ದೇಶ ಮತ್ತು ಸಮಾಜ ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ’ ಎಂದು ನುಡಿದರು.

RSS Sangh Shiksha Varg Samarop May 9-2015 (3)

’ಆರೆಸ್ಸೆಸ್ ಸರಸಂಘಚಾಲಕ ಶ್ರೀ ಮೋಹನ್‌ರಾವ್ ಭಾಗವತ್, ಆಖಿಲ ಭಾರತೀಯ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ್, ಪರಿವಾರ ಪ್ರಭೋದನ ಸಣಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್, ಹಿರಿಯ ಪ್ರಚಾರಕರಾದ ಕೃ ಸೂರ್ಯನಾರಾಯಣ ರಾವ್, ಮೈ ಚ ಜಯದೇವ, ಸು ರಾಮಣ್ಣ ಮುಂತಾದವರು ಸೇರಿದಂv ಆರೆಸ್ಸೆಸ್‌ನ ಕ್ಷೇತ್ರ ಹಾಗೂ ಪ್ರಾಂತದ ಹಲವಾರು ಪ್ರಮುಖರು ಶಿಬಿರಕ್ಕೆ ಭೇಟಿ ನೀಡಿ ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.’ ಎಂದು ಅವರು ವರದಿ ನೀಡಿದರು.

ರಾ ಸ್ವ ಸಂಘದ ಅಖಿಲ ಭಾರತ ಸಹಬೌದ್ಧಿಕ ಪ್ರಮುಖ ಮುಕುಂದರವರು ಸಮಾರೋಪ ಸಮಾರಂಭದ ಬೌದ್ಧಿಕ ವರ್ಗವನ್ನು ನಡೆಸಿಕೊಟ್ಟರು. ಮಾನ್ಯ ಮುಕುಂದರವರ ಬೌದ್ಧಿಕದ ಸಾರಾಂಶ:

ಜನಸೇವಾ ಸಂಸ್ಥೆಯ ಈ ಆವರಣದಲ್ಲಿ ಕಳೆದ 40 ವರ್ಷಗಳಿಂದ ಸಾವಿರಾರು ಸ್ವಯಂಸೇವಕರು ಶಿಕ್ಷಣವನ್ನು ಪಡೆದು ಸಂಘಕಾರ್ಯದ ಕೆಲಸದ ಸಂಕಲ್ಪ ಮಾಡಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಕೆಲವು ವರ್ಷಗಳ ಕೆಳಗೆ ಇಲ್ಲೇ ಸಂಘದ ಶಿಕ್ಷಣವನ್ನು ಪಡೆದ ಯುವಕ ಕೈತುಂಬ ಸಂಬಳದ ನೌಕರಿಯನ್ನು ಬಿಟ್ಟು ದೂರದ ಮಣಿಪುರದಲ್ಲಿ ಸಂಘದ ಕೆಲಸ ಮಾಡುತ್ತಿದ್ದಾನೆ. ಓರ್ವ ಸ್ವಯಂಸೇವಕ ಇಲ್ಲೇ ಬೆಂಗಳೂರಿನಲ್ಲಿ ಟ್ಯೂಶನ್ ಸೆಂಟರ್‌ನ್ನು ಪ್ರಾರಂಭಮಾಡಿದ್ದಾನೆ. ಅದರ ಪರಿಣಾಮವಾಗಿ ಅಲ್ಲಿನ ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದಲ್ಲದೇ ಅವರ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದೇ ಅಲ್ಲದೇ ಅಲ್ಲಿನ ಮನೆಗಳಲ್ಲೂ ಸುಸಂಸ್ಕಾರ ಮೂಡಿದೆ.

RSS Akhil Bharatiya Sah Bouddik Pramukh Mukunda CR addressing the valedictory Ceremony of RSS Sangh Shiksha Varg 2015
RSS Akhil Bharatiya Sah Bouddik Pramukh Mukunda CR addressing the valedictory Ceremony of RSS Sangh Shiksha Varg 2015

ಇಲ್ಲಿ ಪಡೆದ ಶಿಕ್ಷಣ ನಮಗೆ ವ್ಯಕ್ತಿಗತ ಶಾರೀರಿಕ, ಬೌದ್ಧಿಕ ಸಾಮರ್ಥ್ಯವನ್ನು ಕೊಡುವುದರ ಜೊತೆಗೆ ಸಮಾಜ  ಹಾಗೂ ದೇಶದ ಸೇವೆಯನ್ನು ಮಾಡಬೇಕು ಎನ್ನುವ ಪ್ರೇರಣೆ ನಿಡುತ್ತದೆ. ಉದಾಹರಣೆಗೆ ಸಂಘದ ಹಿರಿಯ ಸ್ವಯಂಸೇವಕರು ಬಹಳ ಹಣವಂತರೇನು ಅಲ್ಲ. ಆದರೆ ತಮ್ಮ ಮನೆಯ ಪಕ್ಕದಲ್ಲಿ ಐದು ಸೈಟುಗಳನ್ನು ಮಾಡಿ ಹಿಂದುಳಿದ ವರ್ಗದ ಜನರೆಂದು ದೂರತಳ್ಳಲ್ಪಟ್ಟ ಅಸ್ಪೃಶ್ಯರೆಂದು ಕರೆಯಲ್ಪಡುವ ವರ್ಗದ ಜನರಿಗೆ ನೀಡಿದರು. ಹೀಗೆ ಸಂಘದ ಶಿಕ್ಷಣ ಪಡೆದ ಶಿವಮೊಗ್ಗದ ಸ್ವಯಂಸೇವಕ ಕೆಲವು ವರ್ಷಗಳ ಹಿಂದೆ ಜೋಳಿಗೆ ಪುಸ್ತಕ ಯೋಜನೆಯನ್ನು ಆರಂಭಿಸಿದರು. ಜೋಳಿಗೆಯಲ್ಲಿನ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಮರಳಿ ಕೊಡುವುದು ಈ ಯೋಜನೆ. ಹೀಗೆ ಜೋಳಿಗೆಯ ಪುಸ್ತಕಗಳನ್ನು ಓದಿದ ಹಿಂದುಳಿದ ವರ್ಗದ ಹುಡುಗಿ ಇಂದು ಶಿಕ್ಷಕಳಾಗಿದ್ದಾಳೆ. ಹೀಗೆ ಸ್ವಯಂಸೇವಕರನ್ನು ಸಮಾಜಮುಖಿಯಾಗಿಸುವ ಶಿಕ್ಷಣವನ್ನು ಸಂಘದ ಶಾಖೆಗಳಲ್ಲಿ ನೀಡಲಾಗುತ್ತದೆ. ಜೀವನ ಪ್ರೀತಿಯನ್ನು, ರಾಷ್ಟ್ರಪ್ರೇಮ, ಸಾಮಾಜಿಕ ಬದ್ಧತೆಯನ್ನು ದೊಡ್ಡದೊಡ್ಡ ಶಬ್ದಗಳನ್ನು ಹೇಳದೇ ಸಾಮಾನ್ಯ ಜನರಲ್ಲಿ ಕಲಿಸುವುದ ಸಂಘದ ಪದ್ಧತಿ.

ಕಿಂಗ್ ಇಸ್ ನೇಕೆಡ್ ಎನ್ನುವ ಒಂದು ಇಂಗ್ಲೀಷ್ ಕತೆಯಲ್ಲಿ ನೇಕಾರನ ಸೋಗಿನಲ್ಲಿ ಬಂದ ಮೋಸಗಾರರು ರಾಜನನ್ನು ಬೆತ್ತಲೆ ಮೆರವಣೆಗೆ ಮಾಡದಂತೆ ರಾಷ್ಟ್ರೀಯ ಹಿಂದುತ್ವದ ಬಗೆಗೆ ಮಾತನಾಡುವವರನ್ನು ಸಮಾಜ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಹಲವು ವರ್ಷಗಳಿಂದ ನಡುಯುತ್ತಿದೆ. ನಮ್ಮ ದೇಶದಲ್ಲಿ ಹಿಂದುತ್ವದ ವಿಷಯವನ್ನು ರಾಷ್ಟ್ರೀಯ ವಿಚಾರಗಳನ್ನು ಮಾತನಾಡುವವರು, ದೇಶಭಕ್ತಿಯನ್ನು ಕುರಿತು ಮಾತನಾಡುವವರನ್ನು ಕಮ್ಯೂನಲ್, ಪ್ರತಿಗಾಮಿಗಳು ಹೀಗೆ ಸಂಘದ ಕುರಿತು ಕೃತಕ ಪರದೆಯನ್ನು ತಥಾಕಥಿತ ಬುದ್ಧಿಜೀವಗಳು ಬೆಳೆಸಿದ್ದಾರೆ. ಆದರೆ ಇಂದಿನ ಯುವಕರು ತಮ್ಮದೇ ಆದ ರೀತಿಯಲ್ಲಿ ಈ ಪರದೆಯನ್ನು ಕಳಚುತ್ತಿದ್ದಾರೆ. ದೇಶಕ್ಕೆ ಹಾಗೂ ಸಮಾಜಕ್ಕೆ ಅನುಕೂಲಕರವಾಗುವ ಕಾರ್ಯದಲ್ಲಿ ಇಂದಿನ ಯುವಕರು ಮಾಡುತ್ತಿದ್ದಾರೆ.

ಇಲ್ಲಿ ನಡೆದಿರುವಂತೆ ದೂರದ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಎಂಬ ಗ್ರಾಮದಲ್ಲಿಯೂ ಒಂದು ಸಂಘದ ಶಿಬಿರ ನಡೆಯುತ್ತಿದೆ. ಈ ಘಟನೆ ಸಣ್ಣದಾಗಿ ಕಾಣಬಹುದು.  ಆದರೆ ರಾಷ್ಟ್ರೀಯತೆಯನ್ನು ವಿರೋಧಿಸುವ ನಕ್ಸಲ್ ಆಂದೋಲನ ಪ್ರಾರಂಭವಾದ ಈ ಪ್ರದೇಶದಲ್ಲಿ ಇಂದು ನಕ್ಸಲರಿಲ್ಲ. ಆದರೆ ರಾಷ್ಟ್ರವಾದಿ ಸಂಘದ ಚಟುವಟಿಕೆ ನಡೆಯುತ್ತಿದೆ.  ಇತಿಹಾಸ ರಾಷ್ಟ್ರೀಯ ಚಳುವಳಿಯನ್ನು ಸೂಕ್ಷಮವಾಗಿ ನೋಡಿದಾಗ ಇಂದು ಅರಾಷ್ಟ್ರೀಯ ಆಂದೋಲನ ಮುಕ್ತಾಯದ ಹಂತ ತಲುಪಿದ್ದನ್ನು ನಾವು ಕಾಣಬಹುದು.

ಸಂಘಸ್ಥಾಪಕ ಡಾ. ಹೆಡಗೆವಾರ್  ಹೇಳಿದಂತೆ ನಮ್ಮಲ್ಲಿ ಸಾಮಾಜಿಕ ಬದ್ಧತೆ ಮೂಡಬೇಕಾದರೆ ನಮ್ಮ ಸಮಾಜ ಯಾವುದೂ ಎನ್ನುವ ಅರಿವು ಮೊದಲು ಆಗಬೇಕು. ಆಗ ಸಮಾಜದ ಬಗ್ಗೆ ಅಭಿಮಾನ ಮೂಡಲು ಸಾಧ್ಯ. ಹಿಂದು ಸಮಾಜದ ಅಭಿಮಾನ ಮೂಡಿಸಲು ಯಾವ ಹೆಸರಿನಿಂದ ಕರೆದಬ್ಬಿಸಬೇಕಾಗಿತ್ತೋ ಆ ಕೆಲಸವನ್ನು ಡಾ ಹೆಡಗೇವಾರ್ ಮಾಡಿದರು.

ದೇಹದಲ್ಲಿ ಅನಾರೋಗ್ಯವಾದಾಗ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಮನಸ್ಸಿನಲ್ಲಿ ಮೂಡಬೇಕು. ಅಂತೆಯೇ ಸಮಾಜದಲ್ಲಿರುವ ಅನಾರೋಗ್ಯವನ್ನು ಹೋಗಲಾಡಿಸಲು ಅಲ್ಲನ ಜನರಲ್ಲೇ ಸಾಮಾಜಿಕ ಬದ್ಧತೆಯನ್ನು ಹೆಚ್ಚುಸುವುದೇ ಪರಿಹಾರ. ಸಮಾಜದ ಅಭಿಮಾನದ ಜಾಗೃತವಾದಾಗ ಅದರ ನಿಜವಾದ ಶಕ್ತಿ ಹೊರಗೆ ಬರುತ್ತದೆ ಆ ಕಾರ್ಯವನ್ನು ಸಂಘ ಮಾಡುತ್ತಿದೆ.

ಹಿಂದು ಸಂಸ್ಕೃತಿಯ ಮೌಲ್ಯಗಳಲ್ಲಿ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಾಮರ್ಥ್ಯವಿದೆ. ಇಂತಹ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಹೆಚ್ಚು ಬೇಕು. ಸಂಘ ಅಂತಹ ವ್ಯಕ್ತಿಗಳ ನಿರ್ಮಾಣ ಮಾಡುತ್ತಿದೆ. ಸಂಘದ ಕೆಲಸ ಹಿಂದೂ ಸಮಾಜದ ಚೌಕಟ್ಟನ್ನು ಬಲಪಡಿಸುವ ಕಾರ್ಯ.

ಇಲ್ಲಿ ಶಿಕ್ಷಣ ಪಡೆದ ಸ್ವಯಂಸೇವಕರು ತಮ್ಮ ತಮ್ಮ ಪ್ರದೇಶಗಳಲ್ಲಿ ಹಿಂದೂ ಸಮಾಜದ ಎಲ್ಲರನ್ನು ಜೊತೆಗೆ ಕೂಡಿಸಿ ಸಮಾಜ ಸಂಘಟನೆಯ ಕಾರ್ಯದಲ್ಲಿ ತೊಡಗಲಿದ್ದಾರೆ. ಭಾರತೀಯ ಸಮಾಜ ಯಾವ ದಿಕ್ಕಿನಲ್ಲಿ ಸಾಗಬೇಕೋ ಆ ನಿಟ್ಟಿನಲ್ಲಿ ಸಾಗುವ ಕಾರ್ಯವನ್ನು ಸಂಘ ಮಾಡುತ್ತಿದೆ. ಈ ಕಾರ್ಯಕ್ಕೆ ಇನ್ನೂ ಹೆಚ್ಚಿನ ವೇಗವನ್ನು ನೀಡಬೇಕಾದ ಅವಶ್ಯಕತೆಯಿದೆ. ಸಂಘದ ಈ ವಿಶಿಷ್ಟ ಪ್ರಯತ್ನದಲ್ಲಿ ಸಮಾಜ ಜೋಡಿಕೊಳ್ಳಬೇಕೆನ್ನುವುದು ಸಂಘದ ಕಳಕಳಿಯ ಅಪೇಕ್ಷೆ.

ದೇಶ ಸೇವೆಯ ಬಗ್ಗೆ ಪ್ರೇರಣೆ ನೀಡಬಲ್ಲ ಸಂಘಟನೆ ಎಂದರೆ ರಾ ಸ್ವ ಸಂಘ: ಹಾಲ್ದೊಡ್ಡೇರಿ ಸುಧೀಂದ್ರ

ಅಧ್ಯಕ್ಷೀಯ ಭಾಷಣ ಮಾಡಿದ  ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದ ಪ್ರಸ್ತುತ ಅಲಾಯನ್ಸ್ ವಿಶ್ವವಿದ್ಯಾಲಯದ ವೈಮಾಂತರಿಕ್ಷ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಹಾಲ್ದೊಡ್ಡೇರಿ ಸುಧೀಂದ್ರರವರು ಈ ಎರಡು ಗಂಟೆಗ ಕಾಲ ವೇದಿಕೆಯಲ್ಲಿ ಕುರಿತು ನಾನು ನಿಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಿದ್ದೆ. ನನ್ನ ವೃತ್ತಿಜೀವನದನಲ್ಲಿ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತ ಸೈನ್ಯದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶ ದೊರಕಿತ್ತು. ಆ ಅನುಭವದವಿರುವ ನನಗೆ ಇಲ್ಲಿ ಕುಂತಾಗ ಮಿಲಿಟರಿ ಪರೇಡ್‌ನ್ನು ನೊಡಿದ ಅನುಭವವಾಯಿತು. ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನು ಯಾರ ಬಗ್ಗೆ ಹೆಮ್ಮೆ ಪಡಬಹುದು. ನಾನೇ ನನ್ನ ಹೆತ್ತಮ್ಮನ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನು ಯಾರು ಹೆಮ್ಮೆಪಡಬಲ್ಲರು. ಶಿಸ್ತು, ದೇಶದ ಬಗ್ಗೆ ಹೆಮ್ಮೆಯನ್ನು ದೇಶ ಸೇವೆಯ ಬಗ್ಗೆ ಪ್ರೇರಣೆ ನೀಡಬಲ್ಲ ಸಂಘಟನೆ ಎಂದರೆ ರಾ ಸ್ವ ಸಂಘ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ. ಎಂದು ನುಡಿದರು.

Scientist Sudhindra Haldodderi speaks at RSS Camp May 9-2015

ರಕ್ಷಣಾ ತಂತ್ರಜ್ಞಾನ, ಬಾಹ್ಯಾಕಾಶ ಪರಮಾಣು ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆಯನ್ನು ವಿವರಿಸಿದ ಸುಧೀಂದ್ರರವರು ನಮ್ಮ ದೇಶದ ಕುರಿತು ಹೆಮ್ಮೆ ಪಡುವ ಅನೇಕ ವಿಷಯಗಳಿವೆ ಆದರೆ ನಾವು ನಮ್ಮಲ್ಲಿ ಇಲ್ಲದಿರುವುದರ ಕುರಿತು ಚಿಂತಿಸುತ್ತಿದ್ದೇವೆ. ರಾ ಸ್ವ ಸಂಘವು ಯುವಜನರನ್ನು ದೇಶಸೇವೆಗೆ ತೊಡಗಲು ಪ್ರೇರಣೆ ಕೊಡುವ ದೇಶದ ಬಗ್ಗೆ ಹೆಮ್ಮೆ ಮೂಡುವ ಶಿಕ್ಷಣವನ್ನು ನೀಡುತ್ತಿದೆ. ಇಂತಹ ಯುವಜನರಿಂದ ಭಾರತ ಜಗತ್ತಿನ ಅತ್ಯಂತ ಪ್ರಬಲ ಸಮರ್ಥ ದೇಶವಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ನುಡಿದರು.

ಸಮಾರಂಭದ ಪ್ರಾರಂಭದಲ್ಲಿ ಶಿಬಿರಾರ್ಥಿ ಸ್ವಯಂಸೇವಕರು ಆವರಣದಲ್ಲಿ ಧ್ವಜಪ್ರದಕ್ಷಿಣ ಪಥಸಂಚಲನ ನಡೆಸಿದರು. ನಂತರ ನಡೆದ ಶಾರೀರಿಕ  ಪ್ರದರ್ಶನದಲ್ಲಿ ಶಿಬಿರದಲ್ಲಿ ಕಲಿತ ಸ್ವದೇಶೀ ಬ್ಯಾಂಡ್ ಘೋಷ್, ನಿಯುದ್ಧ, ಡಂಡಯುದ್ಧ, ಯೋಗಾಸನಗಳು, ವಿವಿಧ ಆಟಗಳ ಆಕರ್ಷಕ ಪ್ರದರ್ಶನ ನಡೆಯಿತು. ಒಬ್ಬರಿಗೊಬ್ಬರು ಹೆಗಲು ಕೊಟ್ಟು ಸಹಾಯ ಮಾಡುತ್ತ ಸ್ವಯಂಸೇವಕರು ಸಿಂಹಮುಖ, ಕೋಟೆ, ತಾವರೆ, ರಥ,  ಮುಂತಾ ಮಾನವ ಗೋಪುರ ರಚನೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿತು. ಸ್ವಯಂಸೇವಕರ ಒಕ್ಕೊರಲಿನಿಂದ ಮೂಡಿಬಂದ ’ಮುಂದೆ ಬರಲಿ ತರುಣ ಶಕ್ತಿ ಮನವನೊಂದುಗೂಡಿಸಿ’ ಎನ್ನುವ ಸಾಂಘಿಕ ಗೀತೆ ಆಗಸವನ್ನು ತಲುಪಿತು. ಸಾಮೂಹಿಕ ಸೂರ್ಯನಮಸ್ಕಾರ, ಸಮೂಹ ಅನುಶಾಸನ ಬಿಂಬಿಸುವ ತ್ರಿವಳಿ ವ್ಯಾಯಾಮ, ಸಮತಾ ಪ್ರದರ್ಶನ ಆಕರ್ಷಕವಾಗಿ ಮೂಡಿಬಂದವು.

ವೇದಿಕೆಯಲ್ಲಿ ಪ್ರಾಂತ ಸಂಘಚಾಲಕರಾದ ಮ ವೆಂಕಟರಾಮು, ವರ್ಗಾಧಿಕಾರಿಗಳಾದ ಸಂಜೀವ ರೆಡ್ಡಿ ಹಾಗೂ ವರದರಾಜನ್‌ರವರು ಉಪಸ್ಥಿತರಿದ್ದರು.

ಸಮಾರೋಪ ಕಾರ್ಯಕ್ರಮದಲ್ಲಿ ಸಂಘದ ಹಿರಿಯರಾದ ಮೈ ಚ ಜಯದೇವ, ಚಂದ್ರಶೇಖರ ಭಂಢಾರಿ, ಮಂಗೇಶ ಭೇಂಡೆ, ದಾ ಮ ರವೀಂದ್ರ, ಡಾ ಕಲ್ಲಡ್ಕ ಪ್ರಭಾಕರ ಭಟ್, ನಾ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರರಿದ್ದರು. ಪ್ರಥಮ ವರ್ಷ ವರ್ಗದ ಶಿಬಿರಾಧಿಕಾರಿ ಸಂಜೀವ ರೆಡ್ಡಿ ಸ್ವಾಗತಿಸಿ ಪರಿಚಯಿಸಿದರು.

RSS Akhil Bharatiya Sah Bouddik Pramukh Mukunda CR addressing the valedictory Ceremony of RSS Sangh Shiksha Varg 2015
RSS Akhil Bharatiya Sah Bouddik Pramukh Mukunda CR addressing the valedictory Ceremony of RSS Sangh Shiksha Varg 2015

RSS Sangh Shiksha Varg Samarop May 9-2015 (3) RSS Sangh Shiksha Varg Samarop May 9-2015 (1) Mukunda CR Speaks at RSS SSV Samarop May-9-2015

***************************************************

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
RSS Karnataka State level annual Sangh Shiksha Varg concludes in Bengaluru

RSS Karnataka State level annual Sangh Shiksha Varg concludes in Bengaluru

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

Protest at Kolar against JK Report

Protest at Kolar against JK Report

July 6, 2012

ತಮಿಳುನಾಡಿನಲ್ಲಿ ವಿವೇಕಾನಂದ ಸಭಾಗೃಹ ಉದ್ಘಾಟಿಸಿದ ಆರ್‌ಎಸ್‌ಎಸ್‌ನ ಸರಸಂಘಚಾಲಕರಾದ ಶ್ರೀಮೋಹನ್ ಭಾಗವತ್

January 21, 2022
‘Performing the duty itself is Dharma’: RSS Sarasanghachalak Mohan Bhagwat at Haryana

‘Performing the duty itself is Dharma’: RSS Sarasanghachalak Mohan Bhagwat at Haryana

March 30, 2015
ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ : ಹಿಂದೂ ಸಾಮ್ರಾಜ್ಯ ದಿನೋತ್ಸವಕ್ಕೆ  ಒಂದು ವಿಶೇಷ ಲೇಖನ.

ಹಿಂದವೀ ಸ್ವರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ್ : ಹಿಂದೂ ಸಾಮ್ರಾಜ್ಯ ದಿನೋತ್ಸವಕ್ಕೆ ಒಂದು ವಿಶೇಷ ಲೇಖನ.

June 4, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In