• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ!

Vishwa Samvada Kendra by Vishwa Samvada Kendra
November 10, 2020
in Articles
250
0
ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ!

Siddaramaiah started the practice of Tipu Jayanti in Karnataka

491
SHARES
1.4k
VIEWS
Share on FacebookShare on Twitter

ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ!

ನವೆಂಬರ್ ೧೦, ೨೦೧೫ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವವಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಅಲ್ಲಿಯವರೆಗೆ ಮುಸ್ಲಿಂ ಓಲೈಕೆ ಕರ್ನಾಟಕಕ್ಕೆ, ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಸಾಕಷ್ಟು ಓಲೈಕೆ ರಾಜಕಾರಣವನ್ನು ಅಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಒಬ್ಬ ಕ್ರೂರ ಹಿನ್ನಲೆಯುಳ್ಳ ಟಿಪ್ಪುವನ್ನು ನೆನೆಸಿಕೊಂಡು ಓಲೈಕೆಗೆ ಮುಂದಾಗಿದ್ದನ್ನು ಜನರು ಮೊದಲ ದಿನದಿಂದಲೇ ಪ್ರತಿಭಟಿಸಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕಾರಣ ಓಲೈಕೆಯ ಅಮಲು ನಾಯಕರನ್ನು ಕಟ್ಟಿಹಾಕಿತ್ತು. ನವೆಂಬರ್ ತಿಂಗಳು ಕರ್ನಾಟಕ, ಕನ್ನಡವನ್ನು ಸಂಭ್ರಮಿಸಲೋಸುಗವೇ ಮೀಸಲು. ಆ ತಿಂಗಳಿನಲ್ಲಿ ಟಿಪ್ಪುವಿನಂತಹ - ಕನ್ನಡವನ್ನು ಧಿಕ್ಕರಿಸಿ ಪರ್ಷಿಯನ್ ಭಾಷೆಯನ್ನು ಕಡ್ಡಾಯಗೊಳಿಸಿದವನ, ಕನ್ನಡಿಗ ಹಿಂದೂ-ಕ್ರಿಶ್ಚಿಯನ್ನರ ನರಮೇಧ ನಡೆಸಿದ ಮತಾಂಧನ ಜಯಂತಿ ಆಚರಿಸಿದ್ದು ವಿಪರ್ಯಾಸವಲ್ಲದೇ ಮತ್ತೇನು? ೨೦೧೫ರಲ್ಲಿ ಆರಂಭಗೊಂಡ ಟಿಪ್ಪು ಜಯಂತಿಯ ನಂತರದ ದಿನಗಳಲ್ಲಿ ಕರ್ನಾಟಕದ ವಿವಿಧೆಡೆಗಳಲ್ಲಿ ಮತಾಂಧತೆಯೂ ಹೆಚ್ಚಾಗಿ ೨೦ಕ್ಕೂ ಹೆಚ್ಚು ಅಮಾಯಕ ಹಿಂದೂ ಕಾರ್ಯಕರ್ತರು ಜೀವ ಕಳೆದುಕೊಂಡರು. ಆ ಕೊಲೆಗಳ ಹಿಂದೆ, ಟಿಪ್ಪು ಸುಲ್ತಾನನನ್ನು ತಮ್ಮ ಭಿತ್ತಿಪತ್ರಗಳಲ್ಲಿ ರಾರಾಜಿಸಿಕೊಂಡ ಸಂಘಟನೆಗಳು ಭಾಗಿಯಾಗಿದ್ದವು ಎಂಬುದು ಹೊರಬಂದವು. ಓಲೈಕೆಗೆಂದೇ ಬಂದ ಈ ಜಯಂತಿಯನ್ನು ೨೦೧೯ರಲ್ಲಿ ಯಡಿಯೂರಪ್ಪನವರ ಭಾಜಪ ಸರ್ಕಾರ ರದ್ದುಗೊಳಿಸಿತು. ಈ ಸುದ್ದಿ ಕನ್ನಡಿಗರಲ್ಲಿ ಸಂತಸ ತಂದಿತ್ತು. ಮತಾಂಧ ಟಿಪ್ಪುವನ್ನು ಸ್ಮರಿಸಬೇಕೆಂದರೆ ಅದು ಅವನ ದುರ್ವರ್ತನೆಯನ್ನು ಜನರಿಗೆ ಹೇಳಿಯೇ. ತನ್ನಿಮಿತ್ತ ಈ ಲೇಖನ ಶ್ರೀ ಮಾರುತೀಶ್ ಅಗ್ರಾರ ಅವರಿಂದ.

ಅನೇಕರಿಗೆ ನೆನಪಿರಬಹುದು, ಐದು ವರ್ಷದ ಹಿಂದೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮತಬ್ಯಾಂಕಿನ ಓಲೈಕೆಗಾಗಿ" ಹಾಗೂಮುಸ್ಲಿಮರನ್ನ ತೃಪ್ತಿ”ಪಡಿಸುವುದಕ್ಕಾಗಿ ಪ್ರತಿವರ್ಷ ನವೆಂಬರ್ ೧೦ರಂದು ಸರ್ಕಾರದ ವತಿಯಿಂದಲೇ “ಟಿಪ್ಪು ಜಯಂತಿ”ಆಚರಿಸಲಾಗುವುದೆನ್ನುವ ಆದೇಶ ಹೊರಡಿಸಿ ಇತಿಹಾಸದ ಖಳನಾಯಕನನ್ನು(ಟಿಪ್ಪು) ರಾಷ್ಟ್ರಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲಾ ಸಮಾಜದೆದುರು ವೈಭವಿಕರಿಸಿ ಪ್ರಜಾಪೀಡಕ ದೊರೆಯ ಜಯಂತಿ ಆಚರಿಸಿದ್ದು ನಾಡಿನ ದೌರ್ಭಾಗ್ಯವೇ ಸರಿ. ಅಂದು ಕಾಂಗ್ರೆಸ್ ಸರ್ಕಾರ ಆದೇಶಿಸಿದ ಟಿಪ್ಪು ಜಯಂತಿ ಆಚರಣೆಗೆ ನಾಡಿನಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಯಿತು. ಮಡಿಕೇರಿಯ ಕುಟ್ಟಪ್ಪ ಎಂಬ ಅಮಾಯಕ ವ್ಯಕ್ತಿ ಟಿಪ್ಪು ಜಯಂತಿ ಆಚರಣೆಯ ವಿರೋಧಿ ಹೋರಾಟದಲ್ಲಿ ಸಿಲುಕಿ ಬೀದಿ ಹೆಣವಾದ! ಅದಕ್ಕು ತಲೆಕೆಡಿಸಿಕೊಳ್ಳದ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತಾಂಧನೊಬ್ಬನ ಜಯಂತಿಯನ್ನು ಪ್ರತಿವರ್ಷವೂ(2018ರ ವರೆಗೂ)ವಿಜೃಂಭಣೆಯಿಂದ ಮಾಡುತ್ತಾ ಬಂತು. ಹಿಂದೂಪರ ಸಂಘಟನೆಗಳು ಯಾವುದೇ ಕಾರಣಕ್ಕೂ ನಾವು ಟಿಪ್ಪು ಜಯಂತಿ ಆಚರಿಸವುದಕ್ಕೆ ಬಿಡುವುದಿಲ್ಲ, ಆತನೊಬ್ಬ ದೇಶದ್ರೋಹಿ,ಹಿಂದೂ ವಿರೋಧಿ,ಕೊಲೆಗಾರ, ಮತಾಂಧ, ಅತ್ಯಾಚಾರಿ ಅಂಥವನ ಜಯಂತಿ ಆಚರಣೆ ಸರಿಯಲ್ಲ ಮೊದಲು ಮತಾಂಧ ಟಿಪ್ಪು ಜಯಂತಿ ಆಚರಣೆಯ ಆದೇಶವನ್ನು ಹಿಂಪಡೆಯಿರಿ ಎಂದು ಅಂದು ಸಿದ್ದರಾಮಯ್ಯನವರನ್ನು ಹಿಂದೂ ಪರ ಸಂಘಟನೆಗಳು ಕೇಳಿಕೊಂಡರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಸಿದ್ದರಾಮಯ್ಯನವರು ತಾವು ಅಧಿಕಾರದಲ್ಲಿರುವವರೆಗೂ ಟಿಪ್ಪು ಜಯಂತಿಯನ್ನು ಮಾತ್ರ ರದ್ದು ಮಾಡಲಿಲ್ಲ. ನಿಜ ಹೇಳಬೇಕೆಂದರೆ ಟಿಪ್ಪು ಜಯಂತಿ ಆಚರಣೆ(ಕಾಂಗ್ರೆಸ್ ನಾಯಕರನ್ನು ಹೊರತುಪಡಿಸಿ)ಯಾರಿಗೂ ಬೇಕಾಗಿರಲಿಲ್ಲ! ಯಾಕೆಂದರೆ ಟಿಪ್ಪು ತನ್ನ ಅಧಿಕಾರಾವಧಿಯಲ್ಲಿ ಇಡೀ ರಾಜ್ಯವನ್ನು ದಾರ್-ಉಲ್-ಇಸ್ಲಾಂ ಮಾಡಬೇಕೆಂಬ ಕಲ್ಪನೆಯನ್ನು ಹೊಂದಿ ಅದರಂತೆ ಆಡಳಿತ ನಡೆಸಿದ ಮತಾಂಧ. ಆತ ಹೋರಾಡಿದ್ದು ಇಸ್ಲಾಂ ಸಾಮ್ರಾಜ್ಯವನ್ನು ಕಟ್ಟಬೇಕೆಂದೆ ವಿನಾಃ,ಬೇರೆ ಯಾವ ಒಳ್ಳೆಯ ಉದ್ದೇಶವಾಗಲಿ, ದೇಶಾಭಿಮಾನವಾಗಲಿ ಆತನಲ್ಲಿ ಇರಲಿಲ್ಲ! ಜತೆಗೆ ಎಡಪಂಥಿಯರು,ಕಾಂಗ್ರೆಸಿಗರು ಹೇಳುವಂತೆ ಆತನೇನು ಸ್ವಾತಂತ್ರ್ಯ ಹೋರಾಟಗಾರನೂ ಅಲ್ಲ! ದೇಶಪ್ರೇಮಿಯೂ ಅಲ್ಲ ಹಾಗೂ ಕನ್ನಡಾಭಿಮಾನಿಯೂ ಆಗಿರಲಿಲ್ಲ! ಹಿಂದಿನ ಮೈಸೂರು ರಾಜ್ಯದ ನೈಜ ಇತಿಹಾಸವನ್ನು ಓದಿದವರಿಗೆ ಟಿಪ್ಪು ಎಂಥ ಅಯೋಗ್ಯ, ಮತಾಂಧ ದೊರೆ ಆಗಿದ್ದನು ಎಂಬುದರ ಅರಿವಾಗುತ್ತದೆ. ಇಂದು ನಾವು ಆತನನ್ನು ನೆನೆಯುವುದೇ ಅವಮಾನಕರ ಹಾಗೂ ದೇಶಕ್ಕೆ ಮಾಡುವ ದ್ರೋಹ! ಟಿಪ್ಪು ಜಯಂತಿ ಆಚರಣೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿದ್ದಾದರು ಯಾವ ಪುರುಷಾರ್ಥಕ್ಕೆ ಎಂದು ಕೇಳಿಕೊಂಡರೆ ಉತ್ತರ ಸಿಗದು. ಹಾಗಾದರೆ ಟಿಪ್ಪುವಿನ ಇತಿಹಾಸವೇನು? ಆತ ಮಾಡಿದ ಘನಂದಾರಿ ಕೆಲಸಗಳೇನು? ನಾವ್ಯಾಕೆ ಟಿಪ್ಪುವನ್ನು ವಿರೋಧಿಸಬೇಕು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

Tipu jayanti at Kodagu 2015

ಆತನೊಬ್ಬ ದೇಶದ್ರೋಹಿ, ಜಿಹಾದಿ ದೊರೆ
ಕಾಂಗ್ರೆಸ್ ನಾಯಕರು, ಎಡಪಂಥೀಯರು, ಬುದ್ಧಿಜೀವಿಗಳು,ಪ್ರಗತಿಪರರು, ತಥಾಕಥಿತ ಹೋರಾಟಗಾರರು ಹೇಳುವಂತೆ ಟಿಪ್ಪು ದೇಶಪ್ರೇಮಿಯಲ್ಲ, ಸ್ವಾತಂತ್ರ್ಯ ಸೇನಾನಿಯೂ ಅಲ್ಲ! ಆತನೊಬ್ಬ ದೇಶದ್ರೋಹಿ, ಜಿಹಾದಿ ದೊರೆ, ಹಿಂದೂ ವಿರೋಧಿ, ಮತಾಂಧ ಹಾಗೂ ಕಟ್ಟರ್ ಮುಸ್ಲಿಂ ಮೂಲಭೂತವಾದಿ ದೊರೆ! ಅಂದು ಮೈಸೂರು ರಾಜ್ಯವಾಗಿದ್ದ ಇಂದಿನ ಕರ್ನಾಟಕವನ್ನು ಫ್ರೆಂಚರಿಗೆ ಮಾರಾಟ ಮಾಡಲು ಟಿಪ್ಪು ಸುಲ್ತಾನ್ ಮುಂದಾಗಿದ್ದನ್ನ ಕಾಂಗ್ರೆಸಿಗರು ದೇಶಪ್ರೇಮವೆನ್ನುತ್ತಾರೆಯೇ?! ಇಡೀ ಮೈಸೂರು ರಾಜ್ಯದ ಆಡಳಿತ(ಕನ್ನಡ)ಭಾಷೆಯನ್ನು ಟಿಪ್ಪು ಬದಲಾಯಿಸಿ, ಮೈಸೂರು ರಾಜ್ಯದ ಆಡಳಿತ ಪರ್ಷಿಯನ್ ಭಾಷೆಯಾಗಬೇಕೆಂದು ಅಪ್ಪಣೆಯನ್ನು ಮಾಡಿದ್ದ ಎನ್ನುವುದನ್ನು ಇತಿಹಾಸವೇ ಸಾರಿಸಾರಿ ಹೇಳುತ್ತದೆ. ಇತಿಹಾಸದ ಪುಟಗಳಲ್ಲಿ ಪರ್ಷಿಯನ್ ಇತಿಹಾಸಕಾರನೊಬ್ಬ ದಾಖಲಿಸಿರುವ ಪ್ರಕಾರ, ಟಿಪ್ಪು ಸುಲ್ತಾನನ ಅಧಿಕಾರಾವಧಿಯಲ್ಲಿ ರೆವಿನ್ಯೂ ದಾಖಲೆಗಳನ್ನೆಲ್ಲ ಕನ್ನಡ ಹಾಗು ಇತರ ಸ್ಥಳೀಯ ಭಾಷೆಗಳಿಗೆ ಬದಲಾಗಿ ಫಾರಸಿ ಭಾಷೆಯಲ್ಲಿಯೇ ಇರಬೇಕೆಂದು ಟಿಪ್ಪು ಆಜ್ಞೆ ಮಾಡಿದ್ದನಂತೆ.ಇದರ ಪರಿಣಾಮವಾಗಿ ರೆವಿನ್ಯೂ ಇಲಾಖೆಯಲ್ಲಿದ್ದ ಹಿಂದೂ ಸಿಬ್ಬಂದಿಗಳನ್ನು ಬದಲಾಯಿಸಿ, ಮುಸ್ಲಿಂ ಸಿಬ್ಬಂದಿಗಳನ್ನು ಆ ಜಾಗಗಳಿಗೆ ನೇಮಿಸಲಾಯಿತು ಎನ್ನುವುದು ಪರ್ಷಿಯನ್ ಇತಿಹಾಸಕಾರನ ಮಾತು. ಟಿಪ್ಪು ಸುಲ್ತಾನ್ ಎಂಥ ಮತಾಂಧನೆಂದರೆ ತನ್ನ ಆಳ್ವಿಕೆಯನ್ನು ಖುದಾದದ್ ಸರ್ಕಾರ್"(ಅಲ್ಲಾಹ್ ನೀಡಿದ ಸರ್ಕಾರ) ಎಂದು ಕರೆದುಕೊಂಡು, ತನ್ನ ಎಲ್ಲ ವ್ಯವಹಾರಗಳನ್ನು ಈ ಹೆಸರಿನಲ್ಲಿಯೇ ಮಾಡಿದ ಎನ್ನುವುದು ಇತಿಹಾಸದ ದಾಖಲೆಯಲ್ಲಿರುವ ಸತ್ಯ ಸಂಗತಿ. ಟಿಪ್ಪು ತನ್ನ ಅಧಿಕಾರಾವಧಿಯಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಜಾರಿಗೆ ತಂದ. ಅವೆಲ್ಲವೂ ಕೂಡ ಇಸ್ಲಾಮೀ ಸ್ವರೂಪದ ಲಕ್ಷಣಗಳನ್ನೇ ಹೊಂದಿದ್ದವು. ನಾಣ್ಯದ ಮುಂಭಾಗದಲ್ಲಿಹೈದರನ ವಿಜಯಗಳಿಂದಾಗಿ ಅಹಮದರ ಧರ್ಮವು ಜಗತ್ತನ್ನು ಬೆಳಗಿದೆ” ಎಂದು ಬರೆದಿದ್ದರೆ ಹಿಂಭಾಗದಲ್ಲಿ “ಅವನೇ(ಅಲ್ಲಾಹ್) ಏಕೈಕ ಹಾಗೂ ನ್ಯಾಯವಾದ ದೊರೆ” ಎಂದು ಬರೆಯಲಾಗಿದೆ. ಇವುಗಳನ್ನು ಪ್ರವಾದಿ ಮಹಮ್ಮದರ ಹೆಸರಿನಲ್ಲಿ ಹಾಗೂ ಶಿಯಾ ಸಂಪ್ರದಾಯದ ಹನ್ನೆರಡು ಮಂದಿ ಇಮಾಮರ ಹೆಸರಿನಲ್ಲಿ ಹೊರತರಲಾಗಿತ್ತೆಂದು ಅವನ ಸಮಕಾಲೀನ ಇತಿಹಾಸಕಾರರ ದಾಖಲೆಗಳು ಹೇಳುತ್ತವೆ.

ಟಿಪ್ಪುವಿನ ಸ್ವಭಾವ ಹಾಗೂ ಆತನ ವ್ಯಕ್ತಿತ್ವದ ಬಗ್ಗೆ ಸಂಶೋಧನೆ ಮಾಡಿದ್ದ ವಿದೇಶಿ ಲೇಖಕ ಡಾಡ್ ವೆಲ್ Cambridge History Of India ಎಂಬ ಪುಸ್ತಕದಲ್ಲಿ ಟಿಪ್ಪುವಿನ ಬಗ್ಗೆ ಉಲ್ಲೇಖ ಮಾಡುತ್ತಾ, ಟಿಪ್ಪು ಕ್ರೂರ ಹಾಗೂ ಗಗನಗಾಮಿ ಮಹತ್ತ್ವಕಾಂಕ್ಷೆಗಳ ವ್ಯಕ್ತಿಯಾಗಿದ್ದ. ಆತನು ಕಟ್ಟರ್ ಇಸ್ಲಾಮಿನ ದೊರೆಯಾಗಿ ಹಿಂದೂ ಜನಸಮುದಾಯದ ಮೇಲೆ ದಬ್ಬಾಳಿಕೆ ನಡೆಸಿದ.ಹಿಂದೂ ಸಮುದಾಯವನ್ನು ಆತ ಅತ್ಯಂತ ಕ್ರೂರವಾಗಿ ಹಿಂಸಿಸಿದ್ದ.ಆದ್ದರಿಂದಲೇ ಮೈಸೂರಿನ ಸುತ್ತಮುತ್ತಲಿನ ಪ್ರದೇಶದ ಜನರು ಆತನ ವಿಷಯದಲ್ಲಿ ಅಸಹ್ಯಪಟ್ಟುಕೊಳ್ಳುತ್ತಿದ್ದರು ಎಂದು ಡಾಡ್ ವೆಲ್ ಇತಿಹಾಸದ ಪುಟಗಳಲ್ಲಿ ಉಲ್ಲೇಖಿಸಿದ್ದಾನೆ. ಇನ್ನು ಸ್ವತಃ ಟಿಪ್ಪುಸುಲ್ತಾನನೇ ತನ್ನ ಕೈಯ್ಯಾರೆ ಕೇರಳದ ಮಲಬಾರ್ ಪ್ರದೇಶದ ತನ್ನ ಅಧಿಕಾರಿಗಳಿಗೆ ಒಳಗಿಂದೊಳಗೆ ಪತ್ರಗಳನ್ನು ಬರೆದು,ಅದರ ಪ್ರಕಾರ ಆದೇಶ ನೀಡಿರುವುದು ಇತಿಹಾಸದ ದಾಖಲೆಗಳಲ್ಲಿ ದಾಖಲಾಗಿವೆ. ಜನರಿಂದ ‘ಮೈಸೂರು ಹುಲಿ’ ಎಂದು ಹೆಮ್ಮೆಯಿಂದ ಕರೆಯಿಸಿಕೊಂಡಿದ್ದ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಅಧಿಕಾರಿಗಳಿಗೆ ಬರೆದ ಪತ್ರಗಳನ್ನು ಓದಿದರೆ ಅವನೆಂಥ ಕ್ರೂರಿ, ಹಿಂದೂ ವಿರೋಧಿ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆತನೇ ತನ್ನ ಕೈಯಾರೆ ಬರೆದ ಪತ್ರಗಳು ಹೀಗಿವೆ:

14.12.1788 ರಲ್ಲಿ ಬರೆದ ಪತ್ರ… ಟಿಪ್ಪು ಕಲ್ಲಿಕೋಟೆಯ ಸೇನಾಧಿಪತಿಗೆ ಪತ್ರ ಬರೆದು, ಮೀರ್ ಹುಸೇನ್ ಆಲಿಯನ್ನು ಇಬ್ಬರು ಅಂಗರಕ್ಷಕರೊಂದಿಗೆ ಕಳುಹಿಸಲಾಗಿದೆ. ಆತನು ನಿಗದಿತ ಸ್ಥಳವನ್ನು ದೇವರ ಕೃಪೆಯಿಂದ ಸೇರಲಿದ್ದಾನೆ. ನೀನು ಆತನ ಜೊತೆಗೂಡಿ, ದೇವರಲ್ಲಿ ನಂಬಿಕೆಯಿಲ್ಲದ ಎಲ್ಲ ನಾಸ್ತಿಕರನ್ನು ಬಂಧಿಸಿ ನಂತರ ಕೊಲ್ಲಬೇಕು. ಇಪ್ಪತ್ತು ವರ್ಷಗಳಿಗಿಂತ ಕಿರಿಯ ತರುಣರನ್ನು ಸೆರೆಮನೆಯಲ್ಲಿಟ್ಟು ಉಳಿದಂತೆ ಕನಿಷ್ಠ ಐದು ಸಾವಿರ ಮಂದಿಯನ್ನು ಮರಗಳಿಗೆ ನೇಣುಕಾಬೇಕು ಎಂದು ಟಿಪ್ಪು ಪತ್ರದ ಮೂಲಕ ತಿಳಿಸಿದ್ದಾನೆ.

14.12.1788 ರಲ್ಲಿ ಕೊಡಗೇರಿಯ ಸೇನಾಧಿಪತಿ ಮೀರ್ ಹೈದರನಿಗೆ ಟಿಪ್ಪು ಪತ್ರ… ರಹಸ್ಯ ಮೂಲಗಳಿಂದ ತಿಳಿದು ಬಂದಿರುವಂತೆ ಕೊಡಗೇರಿ ಮತ್ತು ಕೊಡತ್ತನಾಟ್ಟು ರಾಜರು ಒಂದಾಗಿದ್ದಾರೆ. ನೀನು ಕುಟಿಲೊಪಾಯಗಳನ್ನಾದರೂ ಸರಿಯೇ ಬಳಸಿ, ಅವರನ್ನು ಬಂಧಿಸಿ ಅವರನ್ನು ನಿರ್ನಾಮ ಮಾಡಿ ಅವರಿಗೆಲ್ಲ ನರಕದ ಹಾದಿ ತೋರಬೇಕು. ಆ ಎರಡೂ ನಾಯಿಗಳನ್ನು ಹಿಡಿದ ತಕ್ಷಣ ಮೇಲಿನ ನಮ್ಮ ಆಜ್ಞೆಯಂತೆ ಅವರನ್ನು ಶಿಕ್ಷಿಸಬೇಕು ಎಂದು ಮೀರ್ ಹೈದರನಿಗೆ ಟಿಪ್ಪು ಆದೇಶ ಪತ್ರ ರವಾನಿಸಿದ್ದಾನೆ.

21.12.1788 ರಲ್ಲಿ ಶೇಖ್ ಕುತ್ಬುದೀನನಿಗೆ ಪತ್ರ ಬರೆದ ಟಿಪ್ಪು, ನಿನ್ನ ವರದಿಯಿಂದ ಅತೀವ ಹರ್ಷವಾಗಿದೆ. ಸೆರೆಸಿಕ್ಕವರಲ್ಲಿ ಇಪ್ಪತ್ತು ವರ್ಷಗಳಿಗೆ ಮೇಲ್ಪಟ್ಟವರನ್ನೇಲ್ಲ ಮರಗಳಿಗೆ ನೇಣು ಹಾಕಬೇಕು. ಬೆಟ್ಟಗುಡ್ಡ, ಕಾಡುಮೇಡುಗಳಲ್ಲಿ ಅಡಗಿದ್ದರೆ ಅವರನ್ನು ಹಿಡಿದು ಶಿಕ್ಷಿಸಬೇಕು. ಈ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಲು ದಿಲೀರ್ ಮತ್ತು ಧೀಲ್ಖಾನರ ನೇತೃತ್ವದಲ್ಲಿ ಸೇನೆಯನ್ನು ಎರಡು ಭಾಗಗಳನ್ನಾಗಿ ಮಾಡಲು ಅವರ ಜೊತೆ ಒಪ್ಪಂದ ಮಾಡಿಕೊಳ್ಳಬಹುದು ಎಂದು ಶೇಖ್ ಕುತ್ಬುದೀನನಿಗೆ ಸಲಹೆ ಕೊಟ್ಟಿರುವ ಟಿಪ್ಪು, ನಂತರ ಬಂಧಿತರಾಗಿರುವ 242 ನಾಯರುಗಳನ್ನು ಕಳುಹಿಸಿ ಕೊಟ್ಟಿದ್ದೇವೆ. ಅವರ ಸ್ಥಾನಮಾನಗಳ ವಿವಾರವಾದ ಪಟ್ಟಿ ಕೂಡ ಕಳುಹಿಸಲಾಗಿದೆ.ಅವರೆಲ್ಲರನ್ನೂ ಇಸ್ಲಾಮಿಗೆ ಮತಾಂತರಿಸಿ ಬಳಿಕ ಪುರುಷರಿಗೆ ಆರು ಅಡಿ ಉದ್ದದ ಬಟ್ಟೆ ಹಾಗೂ ರುಮಾಲುಗಳನ್ನು, ಸ್ತ್ರೀಯರಿಗೆ ಎಂಟು ಅಡಿ ಉದ್ದದ ಬಟ್ಟೆ ಮತ್ತು ರವಿಕೆಗಳನ್ನು ಒದಗಿಸುವುದು. ಅವರೆಲ್ಲರ ಮೇಲೆ ತೀವ್ರ ನಿಗಾ ಇರಲಿ. ಮೇಲಿನ ನನ್ನ ಆಜ್ಞೆಗಳ ಉಲ್ಲಂಘನೆಯಾದಲ್ಲಿ ಬಂಧನದಿಂದ ಯಾರಾದರೂ ತಪ್ಪಿಸಿಕೊಂಡಲ್ಲಿ ನನ್ನ ತೀವ್ರ ಆಕ್ರೋಶಕ್ಕೆ ನೀನು ಗುರಿಯಾಗುತ್ತೀಯ ಎಂದು ಎಚ್ಚರಿಕೆಯನ್ನು ಟಿಪ್ಪು ಕೊಟ್ಟಿದ್ದಾನೆ.
ಮತ್ತೊಂದು ಪತ್ರದಲ್ಲಿ ನೀನು ಇಪ್ಪತ್ತೈದು ವರ್ಷಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸೈನಿಕರನ್ನು ಕೊಂದಿರುವೆ.ಅಂತಹ ನೀನು ಸರ್ಕಾರಿ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇನ್ನು ಮೇಲೆ ನೀನು ಇಂತಹ ಕೃತ್ಯಗಳಿಗೆ ಕೈಹಾಕಿದರೆ ಇಸ್ಲಾಂ ಧರ್ಮದ ನಿಯಮಗಳನುಸಾರ ನೀನು ಪ್ರತಿಫಲಗಳನ್ನು ಪಡೆಯುವೆ ಎಂದು 1789 ರಲ್ಲಿ ಟಿಪ್ಪು ಘೋಷಿಸಿದ್ದಾನೆ.

22.3.1789 ರ ಕೊಡೆಂಗೇರಿ ಅಬ್ದುಲ್ ಖಾದೀಗೆ ಬರೆದ ಪತ್ರದಲ್ಲಿ, ಸುಮಾರು ಹನ್ನೆರಡು ಸಾವಿರ ನಾಸ್ತಿಕರನ್ನು ಇಸ್ಲಾಮಿಗೆ ಮತಾಂತರಿಸಲಾಗಿದೆ.ಅವರಲ್ಲಿ ಕೆಲವು ಸೈನಿಕರು, ನಂಬೂದಿರಿಗಳು ಇದ್ದಾರೆ. ಈ ಅಂಶವನ್ನು ಆ ಪ್ರದೇಶದ ಇತರರ ಗಮನಕ್ಕೆ ತರತಕ್ಕದ್ದು ಜೊತೆಗೆ ಇತರರನ್ನೂ ಆಹ್ವಾನಿಸಿ ಅವರನ್ನು ಇಸ್ಲಾಮಿಗೆ ಮತಾಂತರಗೊಳಿಸು. ಈ ವಿಷಯದಲ್ಲಿ ಸೈನಿಕರು ಮತ್ತು ನಂಬೂದಿರಿಗಳು ಎಂಬ ಭೇದ ಬೇಡ. ಮತಾಂತರ ಆದವರಿಗೆ ನೀಡಲಾಗುವ ವಿಶೇಷ ಉಡುಪುಗಳು ಸರಬರಾಜಾಗುವ ತನಕ ಅವರು ಕಾಯಬೇಕಾಗುತ್ತದೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಡು ಎಂದು ಅಬ್ದುಲ್ ಖಾದಿಗೆ ತಿಳಿಸಿದ್ದಾನೆ.

18.01.1790 ರಲ್ಲಿ ಸೈಯದ್ ಅಬ್ದುಲ್ ಮಲ್ ಮಲಕ್ ಗೆ ಬರೆದ ಪತ್ರದಲ್ಲಿ ಪ್ರವಾದಿ ಮಹಮ್ಮದರ ಕೃಪೆ ಮತ್ತು ಅಲ್ಲಾಹನ ದಯೆಯಿಂದ ನಾವು ಕಲ್ಲಿಕೋಟೆಯ ಸುಮಾರು ಎಪ್ಪತ್ತೈದರಷ್ಟು ನಾಸ್ತಿಕರನ್ನು ಇಸ್ಲಾಮಿಗೆ ಮತಾಂತರಿಸಿದ್ದೇವೆ. ಕೊಚ್ಚಿಯ ಗಡಿ ಪ್ರದೇಶಗಳಲ್ಲಿ ಇಸ್ಲಾಮಿಗೆ ಮತಾಂತರಗೊಂಡಿರದವರು ಕೆಲವರು ಇನ್ನೂ ಇದ್ದಾರೆ. ಅವರನ್ನೂ ತಕ್ಷಣ ಮತಾಂತರಗೊಳಿಸಲು ಸಂಕಲ್ಪಿಸಿದ್ದೇನೆ. ಇದನ್ನು ನಾನು ಒಂದು “ಧರ್ಮಯುದ್ಧ”ವೆಂದೇ ಪರಿಗಣಿಸುತ್ತೇನೆ ಎಂದು ಮಲಕ್ ಹೇಳಿದ್ದಾನೆ.

ಇನ್ನು 19.01.1790 ರ ಬದ್ರು ಸುಸ್ಮಾನ್ ಖಾನ್ ಗೆ ಬರೆದ ಪತ್ರದಲ್ಲಿ, ಇತ್ತೀಚೆಗೆ ನಾವು ಸುಮಾರು ನಾಲ್ಕು ಲಕ್ಷ ಜನರನ್ನು ಇಸ್ಲಾಮಿಗೆ ಮತಾಂತರಿಸುವ ವಿಷಯದಲ್ಲಿ ಸಾಧಿಸಿದ ಯಶಸ್ಸು ನಿನ್ನ ಗಮನಕ್ಕೆ ಬಂದಿರಬಹುದು. ವಿನಾಶದ ಅಂಚಿಗೆ ತಲುಪಿರುವ ರಾಮನ್ ನಾಯರನ(ರಾಮನ್ ನಾಯರ್ ಎಂಬ ರಾಜ ಬೇರೆ ಯಾರೂ ಅಲ್ಲ, ಧರ್ಮರಾಜನೆಂದು ಖ್ಯಾತನಾದ ಸುಪ್ರಸಿದ್ಧ ರಾಮವರ್ಮ ಮಹಾರಾಜ) ವಿರುದ್ಧ ದಂಡೆತ್ತಿ ಹೋಗಲು ನಿರ್ಧರಿಸಿಯಾಗಿದೆ. ಅವನನ್ನು ಅವನ ಪ್ರಜೆಗಳ ಸಹಿತ ಮತಾಂತರಗೊಳಿಸಿ ಸಂತೋಷಪಡುವವರೆಗೆ ನಾನು ಶ್ರೀರಂಗಪಟ್ಟಣಕ್ಕೆ ವಾಪಸ್ ಹೋಗದಿರಲು ನಿರ್ಧರಿಸಿದ್ದೇನೆ ಎಂದು ಸುಸ್ಮಾನ್ ಖಾನ್ ಜೊತೆ ತನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದಾನೆ ‘ಕೆಲವರ ಪಾಲಿನ’ ಈ ಹುಲಿ.


ಆತನೇ ತನ್ನ ಕೈಯಾರೆ ಬರೆದ ಪತ್ರಗಳನ್ನು ಓದಿದ ಮೇಲೆ ಟಿಪ್ಪುವಿನ ಉದ್ದೇಶ ಮುಸ್ಲಿಂ ಅಲ್ಲದವರನ್ನು ಹೆದರಿಸಿ, ಬೆದರಿಸಿ ಅಥವಾ ಹಿಂಸಿಸಿ ಅವರನ್ನು ಇಸ್ಲಾಂಗೆ ಮತಾಂತರಿಸುವುದೇ ಅವನ ನಿಜವಾದ ಉದ್ದೇಶ ಎಂಬುದು ಸ್ಪಷ್ಟವಾಗುತ್ತದೆ.

ಒಂದುಕಾಲದಲ್ಲಿ ಮೈಸೂರ ಅರಸರನ್ನು ಬದಿಗೊತ್ತಿ ಸರ್ವಾಧಿಕಾರಿಯಾದ ಹೈದರನ ಮಗ ಟಿಪ್ಪುವು ಒಂದು ಹೆಜ್ಜೆ ಮುಂದೆ ಹೋಗಿ ತಾನೇ ಮೈಸೂರು ರಾಜ್ಯದ ‘ಬಾದಷಹ’ನೆಂದು ಘೋಷಿಸಿ, ವಿಧವೆ ರಾಣಿ ಲಕ್ಷ್ಮೀ ಅಮ್ಮಣ್ಣಿಯನ್ನು ಸೆರೆಯಲ್ಲಿಟ್ಟು ರಾಜನಾಗಿ ಮೆರೆದು, ನವಾಬನಾದ. 1761ರಲ್ಲಿ ಮೈಸೂರಿನ ಸರ್ವಾಧಿಕಾರಿಯಾದರೂ ಹೈದರನು, ತನ್ನನ್ನು ರಾಜ್ಯದ ಕಾರ್ಯಕರ್ತ ಎಂದು ಮಾತ್ರ ಕರೆದುಕೊಂಡನೇ ಹೊರತು ಮೈಸೂರು ರಾಜ್ಯವು ಅರಸು ದೊರೆಗಳಿಗೆ ಸೇರಿದ್ದು ಎನ್ನುವಂತೆ ನಡೆದುಕೊಂಡ. ಮುಂದೆ ಕನ್ನಡವನ್ನು ಆಡಳಿತ ಭಾಷೆಯಾಗಿ ಮುಂದುವರಿಸಿದ. ಆದರೆ ಹೈದರನ ಸಾವಿನ ಬಳಿಕ ಟಿಪ್ಪುಸುಲ್ತಾನ್ ತನ್ನನ್ನು ಸಾರ್ವಭೌಮನೆಂದು ಘೋಷಿಸಿಕೊಂಡು ತನ್ನದು ‘ಅಲ್ಲಾಹ್ ನೀಡಿದ ಸರಕಾರ’ ಎಂದು ಭಾವಿಸಿದ. ಆರಂಭದಲ್ಲಿ ಅವನ ಆಡಳಿತ ಭಾಷೆ ಕನ್ನಡವಾಗಿದ್ದರೂ 1792ರ ಬಳಿಕ ಅವನು ಅದರ ಜಾಗದಲ್ಲಿ ಪರ್ಷಿಯನ್ ಭಾಷೆಯನ್ನು ಜಾರಿಗೊಳಿಸಿದುದಕ್ಕೆ ಅವನ ಸಮಕಾಲೀನರ ಹೇಳಿಕೆಗಳು ಮತ್ತು ಅವನ ಆಜ್ಞೆಗಳು ಆಧಾರವಾಗಿವೆ ಎಂಬುದನ್ನು ಈಗಾಗಲೇ ನಾವು ಓದಿದ್ದೇವೆ. ಡೆಕನ್ ಪ್ರದೇಶದಲ್ಲಿ ಮೊಘಲರು ಪರ್ಷಿಯನ್ ಭಾಷೆ ಜಾರಿಗೊಳಿಸಿದ್ದರೂ ಅದು ಮೈಸೂರಲ್ಲಿ ಬಳಕೆಗೆ ಬಂದುದು 1792 ರಲ್ಲಿ. ಅದು ಟಿಪ್ಪುಸುಲ್ತಾನನ ಆಡಳಿತದ ಕೊನೆ ವರ್ಷಗಳಲ್ಲಿ. ಅವನ ಉದ್ದೇಶ ಅಂದಿನ ಮೈಸೂರು ರಾಜ್ಯವನ್ನು ಪರ್ಷಿಯನ್ ಭಾಷೆಯಾ ನಾಡನ್ನಾಗಿ ಮಾಡುವುದಿತ್ತು.ಹೀಗಾಗಿ ಅವನು ಊರುಗಳ ಹೆಸರನ್ನು ಪರ್ಷಿಯನ್ ಭಾಷೆಗೆ ಬದಲಾಯಿಸಿದ. ಚಿತ್ರದುರ್ಗ-ಪುರೊಕ್ಯಬ್ ಹಿಫರ್ ಆಯಿತು, ದೇವನಹಳ್ಳಿ-ಯುಸುಫಾಬಾದ್ ಆಯಿತು, ಮೈಸೂರು-ನಜರಾಬಾದ್ ಆಯಿತು, ಹಾಸನ-ಖುಯೇಮಾಬಾದ್ ಆಯಿತು, ಶಿರಾ-ರುಸ್ತುಮಾಬಾದ್ ಆಯಿತು, ಮಡಿಕೇರಿ-ಜಾಫರ್ ಬಾದ್ ಆಯಿತು, ಭಾಗಮಂಡಲ-ಅಫ್ಜಲ್ ಬಾದ್ ಆಯಿತು ಹೀಗೆ ಅನೇಕ ಸ್ಥಳಗಳ ಹೆಸರನ್ನು ಬದಲಾಯಿಸಿ ಕನ್ನಡ ಭಾಷೆಗೆ ಮೋಸಮಾಡಿದ. ಇಷ್ಟೇ ಅಲ್ಲ ಮೈಸೂರಿನ ಪ್ರಸಿದ್ದ “ಕೋಡಿ ಭೈರವೇಶ್ವರ” ಗುಡಿಯನ್ನು ನೆಲಸಮಗೊಳಿಸಿದ್ದು ಸಹ ಇದೇ ಟಿಪ್ಪು ಸುಲ್ತಾನ್! ಇಂತಹ’ನಾಡದ್ರೋಹಿ’ಯನ್ನು ವೈಭವಿಕರಿಸಿ ಆತನ ಜಯಂತಿ ಆಚರಿಸಿದ್ದು ಸಿದ್ದರಾಮಯ್ಯನವರ ಮೂರ್ಖತನವೆನ್ನದೇ ಎನನ್ನಬೇಕು? ದೇಶದಲ್ಲಿದ್ದುಕೊಂಡೆ ಧರ್ಮವಿರೋಧಿ ಚಟುವಟಿಕೆಗಳನ್ನು ಮಾಡಿದ ಟಿಪ್ಪು, ದೇಶಭಕ್ತನಾಗಲು ಸಾಧ್ಯವೇ? ರಾಷ್ಟ್ರಪ್ರೇಮಿ ಅನ್ನಿಸಿಕೊಳ್ಳಲು ಯೋಗ್ಯನೇ? ತನ್ನ ಧರ್ಮವನ್ನು ಉಳಿಸಲು ಅನ್ಯಧರ್ಮಿಯರನ್ನು ಕೊಂದ ಟಿಪ್ಪು ಹೇಗೆ ದೇಶಪ್ರೇಮಿಯಾಗುತ್ತಾನೆ ಹೇಳಿ?

ಆದಾಗ್ಯೂ ಅಂದಿನ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಆದೇಶಿಸಿದ್ದ ಟಿಪ್ಪು ಜಯಂತಿಯನ್ನ ಈಗಲೂ ಸಮರ್ಥಿಸಿಕೊಳ್ಳುವರು ಯಾರಾದರೂ ಇದ್ದರೆ ಅಂಥವರನ್ನು ಟಿಪ್ಪು ಸಂತತಿಯವರೆಂದೇ ಕರೆಯಬೇಕು! ನಿಜ ಹೇಳಬೇಕೆಂದರೆಮೈಸೂರು ರಾಜರು ನಮ್ಮ ನಾಡಿಗೆ ಸಲ್ಲಿಸಿರುವ ಸೇವೆಗಳ ಮುಂದೆ, ಟಿಪ್ಪುವಿನ ಬೂಟಾಟಿಕೆಯ ಕೊಡುಗೆ ನಗಣ್ಯ. ಅದರೂ ಕೆಲವರು ಟಿಪ್ಪು ಸುಲ್ತಾನ್ ಅನೇಕ ದೇವಸ್ಥಾನಗಳಿಗೆ, ಮಠಮಾನ್ಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದಾನೆ ಎನ್ನುತ್ತಾರೆ. ಹಾಗಾದರೆ ದಾನ ದತ್ತಿಗಳನ್ನು ಕೊಟ್ಟ ಮಾತ್ರಕ್ಕೆ ಅವನು ಒಳ್ಳೆಯವನಾಗುತ್ತಾನೆಯೇ? ತಾನು ಸಮಾಜದ ದೃಷ್ಟಿಯಲ್ಲಿ ಒಳ್ಳೆಯವನಾಗಲು, ತಾನು ಮಾಡುವ ಕುತಂತ್ರದ ಕೆಲಸಗಳನ್ನು ಯಾರು ಪ್ರಶ್ನಿಸಬಾರದು, ನನ್ನ ವಿರೋಧಿಸುವವರು ಯಾರು ಇರಬಾರದೆಂದು ದಾನ ದತ್ತಿಗಳನ್ನು ಕೊಟ್ಟಿರಲಿಕ್ಕೆ ಸಾಧ್ಯವಿಲ್ಲ ಎಂದಕ್ಕೆ ಯೋಚಿಸಬಾರದು? ಹೋಗಲಿ, ಟಿಪ್ಪು ಒಳ್ಳೆಯವನಾಗಿದ್ದರೆ ಕೊಡಗಿನ ಕೊಡವರು, ದುರ್ಗದ ವಾಲ್ಮೀಕಿ ಜನಾಂಗದವರು, ಮಂಗಳೂರಿನ ಕೊಂಕಣಿ ಕ್ರೈಸ್ತರು, ಮೈಸೂರು-ಮಂಡ್ಯ ಭಾಗದ ಜನರೆಕೇ ಟಿಪ್ಪುವನ್ನು ಪ್ರೀತಿಸುವುದಿಲ್ಲ. ಟಿಪ್ಪುವಿನ ಕ್ರೂರ ಹಾಗೂ ರಕ್ತಸಿಕ್ತ ಇತಿಹಾಸವೇ ನಮ್ಮ ಕಣ್ಣಮುಂದಿದೆ. ಇಂಥ ಒಬ್ಬ ಮತಾಂಧ, ದೇಶವಿರೋಧಿ, ಹಿಂದೂ ವಿರೋಧಿ,ಸಮಾಜಘಾತುಕ ದೊರೆಯ ಜಯಂತಿ ಆಚರಣೆಯನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರದ್ದು ಮಾಡಿದ್ದು ಅಮೋಘ ನಡೆ? ಅಂದಹಾಗೆ ಟಿಪ್ಪುವಿನ ನೈಜ ಇತಿಹಾಸವನ್ನು ಅಧ್ಯಯನ ಮಾಡಿದ ಯಾರೂ ಟಿಪ್ಪುವಿನ ಫೋಟೋಗೆ ದೊಡ್ಡ ದೊಡ್ಡ ಹೂವಿನ ಹಾರ ಹಾಕಿ ಖಳನಾಯಕನನ್ನು ಜನನಾಯಕ ಎಂದು ಕರೆದು ಆತನನ್ನು ಗೌರವಪೂರ್ವಕವಾಗಿ ಸ್ಮರಿಸುವ ಕಾಂಗ್ರೆಸ್ ನ “ಮುಸ್ಲಿಮ್ ತುಷ್ಟೀಕರಣದ” ನೀತಿಯನ್ನು ಒಪ್ಪವುದಿಲ್ಲ. ಹಾಗಾಗಿ ಸಮಾಜದಲ್ಲಿ ಅಶಾಂತಿ ಕದಡಬಾರದು ಹಾಗೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಾರದು ಎನ್ನುವ ಉದ್ದೇಶದಿಂದ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದು ಮಾಡಿದ ಕ್ರಮ ಶ್ಲಾಘನೀಯ.

Maruteesh Agrara, Columnist, Tumakuru
  • email
  • facebook
  • twitter
  • google+
  • WhatsApp
Tags: NoToTipuJayantiTipu Jayanti VirodhaTipu SultanTipuJayantiTipuJayantiBeda

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
National Executive meeting of Vanvasi Vikas Parishad held at Jabalpur, MP

ಭಾರತದ ಸ್ವಾಭಿಮಾನ ಎತ್ತಿಹಿಡಿದ ಸ್ವಾಭಿಮಾನಿ ವನವಾಸಿಗಳು

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

NEWS IN BRIEF – JULY 09, 2013

December 9, 2013
Dr Pravin Togadia’s MESSAGE to Bengalurians on Hindu Samajotsav

Dr Pravin Togadia’s MESSAGE to Bengalurians on Hindu Samajotsav

February 8, 2015
Maoists release MLA Jhina Hikaka after 33days of abduction

Maoists release MLA Jhina Hikaka after 33days of abduction

April 26, 2012
ನಾಣ್ಯಗಳನ್ನ ಬಳಸಿ ಶ್ರೀರಾಮ ಮಂದಿರ ಕಟೌಟ್  ನಿರ್ಮಾಣ

ನಾಣ್ಯಗಳನ್ನ ಬಳಸಿ ಶ್ರೀರಾಮ ಮಂದಿರ ಕಟೌಟ್ ನಿರ್ಮಾಣ

February 27, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In