• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

Sri Sitarama Kedilaya shared his experiences of mega Walkthon ‘Bharat Parikrama Yatra’

Vishwa Samvada Kendra by Vishwa Samvada Kendra
July 23, 2017
in News Digest, News Photo
244
0
Sri Sitarama Kedilaya shared his experiences of mega Walkthon ‘Bharat Parikrama Yatra’

Sitaram Kedilaya during the interaction

494
SHARES
1.4k
VIEWS
Share on FacebookShare on Twitter

Bengaluru July 23, 2017: Senior RSS Pracharak, Former Akhil Bharatiya Seva Pramukh Sri Sitarama Kedilaya shared his experiences of mega Walkthon ‘Bharat Parikrama Yatra’ in an informal meet held at Bengaluru. RSS Pranth Karyavah N Tippeswamy, other senior functionaries attended the event.

ಬೆಂಗಳೂರು: ಜುಲೈ ೨೩, ೨೦೧೭: ಭಾರತ ಪರಿಕ್ರಮ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ ಸಂಘದ ಹಿರಿಯ ಪ್ರಚಾರಕ ಶ್ರೀ ಸೀತಾರಾಮ ಕೆದಿಲಾಯರ ಜೊತೆಗೆ ‘ಅನೌಪಚಾರಿಕ ಮಾತುಕತೆ’ ಕಾರ್ಯಕ್ರಮವು ಆರೆಸ್ಸೆಸ್ ಕೇಂದ್ರಕಚೇರಿ ಕೇಶವಕೃಪಾದಲ್ಲಿ ನಡೆಯಿತು. ಕಾಲ್ನಡಿಗೆಯ ಮೂಲಕ ಭಾರತ ಸಂಚರಿಸಿದ ಸೀತಾರಾಮ ಕೆದಿಲಾಯರು ತಮ್ಮ ವಿಶೇಷ ಅನುಭವಗಳನ್ನು ಹಂಚಿಕೊಂಡರು. ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ನಾ ತಿಪ್ಪೇಸ್ವಾಮಿ, ಇತರ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
Sitaram Kedilaya during the interaction

Senior RSS Pracharak Sitaram Kedilaya returned recently after the successful Bharat Parikrama Yatra. Having started on auspicious Krishna Ashtami day of 9 Aug 2012, spanned for four years and eleven months – 1795 days travelling 27,000 kilometres by walk. It ended on the day of Gurupurnima recently. He has done a perfect Bharata Darshana in his walkathon.

The idea of such a yatra was to introduce and disemminate ‘Grama Vikasa’ and to show the strength the villages had. In his effort he has had conversations with over 9000 families, visited close to 1500 schools, interaction with aroug 5 lakh students. Each day ended with a Grama Sabha which totalled over 5lakh attendees. He has interated with over 10,000 youth. Every village he visited had tree planting and also the benefits of planting trees and conserving ecology was spoken about . The prime discussion in the whole journey of his was how villages are sustainable, and for the ‘Grama Vikasa’ to be successful what should the women, families, youth, students should be contributing and how the sustainability would result in Bharath turning out to be a VishwaGuru.

The best part was that there has been no opposition at all in any village he has been to. He also had stayed at a Naxal dominated home in West Bengal. A Communist leader joined Sitaram Kedilaya’s walkathon and walked for 10,000 kms. He also narrated as to how clean in general all villages of Assam were.

ವರದಿ:
ಭಾರತ ಪರಿಕ್ರಮ ಯಾತ್ರೆ ಪೂರೈಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮಾನ್ಯ ಶ್ರೀ ಸೀತಾರಾಮ ಕೆದಿಲಾಯರೊಂದಿಗೆ ಇಂದು ಸಂಜೆ ಸಂವಾದ ಕಾರ್ಯಕ್ರಮ ನಡೆಯಿತು.
2012 ಆಗಸ್ಟ್ 9 ರಂದು ಭಾರತದ ತುತ್ತ ತುದಿ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಪರಿಕ್ರಮ ಯಾತ್ರೆ 4 ವರ್ಷ 11 ತಿಂಗಳ ಅವಧಿಯಲ್ಲಿ 1,795 ದಿನಗಳಲ್ಲಿ ಇಡೀ ದೇಶದಲ್ಲಿ 27,000 ಕಿ.ಮೀ ದಾರಿಯನ್ನು ಕ್ರಮಿಸಿ 2017 ಜುಲೈ 9 ರಂದು ಮತ್ತೆ ಕನ್ಯಾಕುಮಾರಿಯಲ್ಲಿಯೇ ಸಂಪನ್ನಗೊಂಡಿತು. 4 ವರ್ಷ 11 ತಿಂಗಳ ಸತತ ನಡುಗೆ.‌ ಅದೆಷ್ಟು ಗ್ರಾಮಗಳ ಮೂಲಕ ಅದೆಷ್ಟೋ ಜನರ ಸಂಪರ್ಕ. ಪ್ರಾಯಶಃ ನಿಜವಾದ ಭಾರತ ದರ್ಶನ ಮಾಡಿದ್ದಾರೆ ಕೆದಿಲಾಯರು.‌

ಈ ಪರಿಕ್ರಮದ ಉದ್ದೇಶ “ಗ್ರಾಮ ವಿಕಾಸ” ದ ಪರಿಚಯ, ಪ್ರಸಾರ. ಈ ಅವಧಿಯಲ್ಲಿ ಸುಮಾರು 9000 ಕುಟುಂಬಗಳ ಜೊತೆ ಮಾತು-ಕಥೆ, ೧೫೦೦ ಶಾಲೆಗಳಿಗೆ ಭೇಟಿ ಕೊಟ್ಟು ೫ ಲಕ್ಷ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ ಕೆದಿಲಾಯರು. ಪ್ರತಿನಿತ್ಯ ನಡೆದ ಗ್ರಾಮಸಭೆಗಳಲ್ಲಿ ಒಟ್ಟು ಸುಮಾರು 5,00,000 ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. ರಸ್ತೆ ಸಭೆಗಳು 10,000. ಅದರಲ್ಲಿ ಭಾಗಿಯಾದವರು 5 ಲಕ್ಷ.
ಯುವಕರೊಂದಿಗೆ ನಡೆದ ಸಭೆಗಳು 1,000. ಪಾಲ್ಗೊಂಡ ಯುವಕರ ಸಂಖ್ಯೆ 20,000 ಕ್ಕೂ ಹೆಚ್ಚು. ಪ್ರತಿ ಹಳ್ಳಿಯಲ್ಲೂ ವೃಕ್ಷಾರೋಪಣ ನಡೆದಿದೆ. ಗಿಡ ನೆಡುವುದು, ಮರಗಳ ಮಹತ್ವವನ್ನು ತಿಳಿಸುವುದು ಅದರ ವ್ಯಾಪ್ತಿಯಲ್ಲಿ ಬಂದಿದೆ.

ಈ ಎಲ್ಲಾ ಸಭೆ-ಸಂವಾದ- ಮಾತುಕಥೆ ಗಳಲ್ಲಿ ಒಂದೇ ವಿಚಾರ : ” ಗ್ರಾಮದ ವಿಕಾಸಕ್ಕೆ, ಗ್ರಾಮದ ಬೆಳವಣಿಗೆಗೆ ಆ ಗ್ರಾಮದ ಕುಟುಂಬಗಳು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಯಾವ ರೀತಿ ಯೋಗದಾನ ನೀಡಬಹುದು” ಎಂದು.‌ ಗ್ರಾಮಗಳ ಬಾಲಕರಿಗೆ, ಕಿಶೋರರಿಗೆ, ಮಾತೆಯರಿಗೆ (ಮಹಿಳೆಯರಿಗೆ) ಸರಿಯಾದ ದಾರಿಯಲ್ಲಿ, ಸರಿಯಾದ ಚಿಂತನೆ ಬಿತ್ತಿದರೆ, ನಾಳಿನ ಭಾರತದ ಚಿತ್ರಣ ಅತ್ಯುತ್ತಮವಾಗುತ್ತದೆ ಎಂಬ ಅಭಿಪ್ರಾಯ ಅವರದ್ದು.‌

ಈ ಸುದೀರ್ಘ ಪಾದಯಾತ್ರೆಯಲ್ಲಿ ಎಲ್ಲಿಯೂ, ಯಾರಿಂದಲೂ ವಿರೋಧ-ಅಡ್ಡಿ ಎದುರಾಗಲಿಲ್ಲ ಎಂಬುದು ವಿಶೇಷ. ಅಲ್ಲದೇ ಯೋಜನೆಯಂತೆಯೇ ಯಾತ್ರೆ ನಡೆದಿದೆ. ಕೆದಿಲಾಯರವರ ಆರೋಗ್ಯ ಒಂದು ದಿನವೂ ಕೆಡಲಿಲ್ಲ, ವೈದ್ಯರ ಬಳಿ ಹೋಗುವ ಅಗತ್ಯ ಬರಲಿಲ್ಲ. ಎಲ್ಲಿಯೂ ಆಹಾರ-ಭಾಷೆ ಸಮಸ್ಯೆ ಆಗಲಿಲ್ಲ.

ಬಂಗಾಳದಲ್ಲಿ ನಕ್ಸಲ್ ಕುಟುಂಬದಲ್ಲಿ ವಾಸ್ತವ್ಯ ಹೂಡಿದಾಗ ಉಂಟಾದ ಅನುಭವ ಅವಿಸ್ಮರಣೀಯ ಎಂದು ಕೆದಿಲಾಯರು ನೆನಪಿಸಿಕೊಂಡರು.‌ ಬಂಗಾಲದಲ್ಲಿಯೇ ಕಮ್ಯುನಿಸ್ಟ್ ಪಕ್ಷದ ಧುರೀಣರೊಬ್ಬರು ಇವರೊಂದಿಗೆ ಸುಮಾರು ೧೦ ಕಿ.ಮೀ ನಡೆದದ್ದೂ ಉಂಟು. ಅಸ್ಸಾಂ ರಾಜ್ಯದ ಪ್ರತಿ ಗ್ರಾಮಗಳು ಎಷ್ಟು ಸ್ವಚ್ಛವಾಗಿದ್ದವು ಎಂಬುದನ್ನೂ ಅವರು ವಿವರಿಸಿದರು.‌

ವಿವೇಕಾನಂದರ ಒಂದು ವಿಚಾರವನ್ನು ಕೆದಿಲಾಯರು ಉಲ್ಲೇಖಿಸಿದರು. ” ಇಡೀ ದೇಶದ ಸಂಪತ್ತನ್ನು ಒಂದು ಗ್ರಾಮದಲ್ಲಿ ಸುರಿದರೂ, ಆ ಹಳ್ಳಿಯ ಜನರ ಮನ ಪರಿವರ್ತನೆ ಆಗದಿದ್ದರೆ ಗ್ರಾಮ ವಿಕಾಸ ಕನಸ್ಸಿನ ಮಾತು”. ಶೌಚಾಲಯಗಳನ್ನು ಕಟ್ಟಿಕೊಟ್ಟರೂ ಅವುಗಳನ್ನು ಉಪಯೋಗಿಸುವ ಮನಸ್ಥಿತಿ ಬರಬೇಕು. ಇಲ್ಲದಿದ್ದರೆ ಈ ಟಾಯ್ಲೆಟ್ ಗಳು ಮನೆಯ ಸ್ಟೋರ್ ರೂಂ ಆಗಿರುವ ಉದಾಹರಣೆಗಳು ಅನೇಕ. ನೊಣ-ಜೇನು ನೊಣದ ಉದಾಹರಣೆಯನ್ನು ಸೊಗಸಾಗಿ ಕೆದಿಲಾಯರು ನಿರೂಪಿಸಿದರು. ನೊಣಕ್ಕೆ ಯಾವಾಗಲೂ ಕೊಳಕೇ ಆಕರ್ಷಣೆ. ಅದರಿಂದ ಕಾಯಿಲೆ ಹರಡುವುದೇ ಅದರ ಸ್ವಭಾವ.‌ ಅದೇ ಜೇನುನೊಣ ಹೂಗಳಿಂದ ಮಕರಂದ ಹೀರಿ ಜೇನುಗೂಡು ಕಟ್ಟುತ್ತದೆ.

ಸಂವಾದದಲ್ಲಿ ಪರಿಕ್ರಮದಲ್ಲಿ ಸೀತಾರಾಮ ಕೆದಿಲಾಯರು ಕಂಡ ಜಾತಿ-ವ್ಯವಸ್ಥೆ, ಮುಂದಿನ ೨೦ ವರ್ಷಗಳಲ್ಲಿ ನಮ್ಮ ದೇಶ ಎಲ್ಲಿಗೆ ಮುಟ್ಟಬಹುದು, ಹಳ್ಳಿಗಳು -ದೇವಾಲಯಗಳು ಹೇಳಿದ ಕಥೆಗಳು…ಇತ್ಯಾದಿ ಕುರಿತೂ ಚರ್ಚೆ ನಡೆಯಿತು. ನಿಜಕ್ಕೂ ಇಡೀ ಭಾರತ ಸುತ್ತಿ ಅನುಭವಗಳ ಗಣಿಯೇ ಆಗಿ ಬಿಟ್ಟಿರುವ ಶ್ರೀ ಸೀತಾರಾಮ ಕೆದಿಲಾಯರೊಂದಿಗಿನ ಸಂವಾದ ಕಾರ್ಯಕ್ರಮ ಎಂಥವರಿಗೂ ಚೈತನ್ಯ ನೀಡುವಂಥದ್ದಾಗಿತ್ತು.

 

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

  • email
  • facebook
  • twitter
  • google+
  • WhatsApp
Tags: Bharat ParikramaBharat Parikrama YatraSITARAMA KEDILAYA

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
RSS welcomes the right spirit of judiciary singing Vande Mataram in schools and colleges

RSS welcomes the right spirit of judiciary singing Vande Mataram in schools and colleges

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Today, nation remembers legacy of social reformer Sri Ekanath Ranade on his 100th Birthday

ಏಕನಾಥ ರಾನಡೆ ಎಂಬ ಅಸಾಮಾನ್ಯ ಧ್ಯೇಯಜೀವಿ

November 19, 2014
RSS Chief felicitated by Panchamasaali seer at Davanagere, Karnataka

RSS Chief felicitated by Panchamasaali seer at Davanagere, Karnataka

March 8, 2012
‘Attend a Shakha to understand RSS’: RSS Sarasanghachalak Mohan Bhagwat calls Youth at Yuva Sankalp Shivir

‘Attend a Shakha to understand RSS’: RSS Sarasanghachalak Mohan Bhagwat calls Youth at Yuva Sankalp Shivir

November 4, 2014
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

January 6, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In