• Samvada
  • Videos
  • Categories
  • Events
  • About Us
  • Contact Us
Sunday, April 2, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಭಾರತ ಎಂಬ ಮಾತೃಭೂಮಿಯೇ ಒಂದು ಕುಟುಂಬ: ಸು.ರಾಮಣ್ಣ

Vishwa Samvada Kendra by Vishwa Samvada Kendra
March 22, 2022
in Blog
264
0
519
SHARES
1.5k
VIEWS
Share on FacebookShare on Twitter

ಭಾರತವನ್ನು ಒಂದುಗೂಡಿಸಬಲ್ಲ ಶಕ್ತಿ ಎಂದರೆ ಅದು ಕುಟುಂಬ ಮಾತ್ರ

ದೇಶವೇ ಒಂದು ಕುಟುಂಬ ಎಂದು ಭಾವಿಸುವವರು ನಾವು, ಅದಕ್ಕಾಗಿಯೇ ನಾವು ದೇಶವನ್ನು ಭಾರತ ಮಾತೆ ಎನ್ನುತ್ತೇವೆ. ಈ ದೇಶದಲ್ಲಿರುವ ಎಲ್ಲ ಜಾತಿ, ಪಂಥ, ಸಂಪ್ರ ದಾಯ, ಪ್ರದೇಶದವರನ್ನು ಭಾವನಾತ್ಮಕವಾಗಿ ಒಂದುಗೂಡುವುದಾದರೆ ಈ ಭಾರತ ಎಂಬುದು ಭೂಮಿ ಮಾತ್ರವಲ್ಲ ನಮ್ಮ ತಾಯಿ, ನಾವು ಈ ತಾಯಿಯ ಮಕ್ಕಳು ಎಂದು ಭಾವಿಸಿದಾಗ ದೇಶದ ಭಾವನೆ ಮತ್ತು ಕರ್ತವ್ಯ ಅರಳುತ್ತದೆ‌.

ಭಾರತೀಯ ಕುಟುಂಬ ವ್ಯವಸ್ಥೆ ಬಗ್ಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕ ಸು.ರಾಮಣ್ಣ ಅವರ ಮಾತುಗಳಿವು . ವಿಶ್ವವಾಣಿ ಕ್ಲಬ್‌ಹೌಸ್ ನಲ್ಲಿ ಕೌಟುಂಬಿಕ ಮೌಲ್ಯಗಳು ಕುಂಬ ಅವರು ಅರಿವಿನ ಉಪನ್ಯಾಸ ನೀಡಿದರು.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಅವಿಭಕ್ತ ಕುಟುಂಬ ಪರಿಕಲ್ಪನೆಗೆ ನಮ್ಮ ದೇಶ ಮಾದರಿ, ವ್ಯಕ್ತಿಗಳಲ್ಲಿ ಮೌಲ್ಯ ಪ್ರತಿಷ್ಟಾವನೆ ಮನೆ ಯಿಂದಲೇ ಆರಂಭವಾಗುತ್ತದೆ. ಮನೆಗಳೇ ಕುಟುಂಬದ ನೆಲೆ, ಆರೋಗ್ಯ ಸಮಾಜ ನಿರ್ಮಾಣ ಕುಟುಂಬಗಳಿಂದ ಮಾತ್ರ ಸಾಧ್ಯ. ಮೌಲ್ಯಯುತ ಕುಟುಂಬಗಳು ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಕಾರಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಕುಟುಂಬ ಮೌಲ್ಯಗಳನ್ನು ಪಾಲಿಸುವ ವಸುದೈವ ಕುಟುಂಬಕಂ ಎಂಬ ಮಾತಿನಲ್ಲಿ ನಂಬಿಕೆ ಇಡಬೇಕು.

ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಅತ್ಯಂತ ಪ್ರಾಚೀನವಾದ ಸಂಸ್ಥೆಯೇ ಕುಟುಂಬ, ಇವತ್ತಿನವರೆಗೂ ಅದು ನಡೆದು ಕೊಂಡು ಬಂದಿದೆ. ಅದು ಎಷ್ಟೇ ಪ್ರಾಚೀನರಾಗಿದ್ದರೂ ಕಾಲಬಾಹಿರವಾಗಿಲ್ಲ. ಇವತ್ತಿಗೂ ಕೂಡ ಕುಟುಂಬದ ಕಾಲ ಸುಸಂಗತವಾಗಿದೆ. ಕಾಲ ಉರುಳಿದಂತೆ ಈ ಸಂಸ್ಥೆ ಭಾರತದ ಹೊರಗಿನ ರಾಷ್ಟ್ರಗಳಲ್ಲಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದೆ. ಶಿಥಿಲವಾಗುತ್ತಿದೆ. ಆದರೆ, ಭಾರತದಲ್ಲಿ ಮಾತ್ರ ಇಂದಿಗೂ ಈ ವ್ಯವಸ್ಥೆ ಶ್ಲಾಘನೀಯ ರೀತಿಯಲ್ಲಿದೆ.

ಅಲ್ಲಲ್ಲಿ ಒಡಕಿನ ಗೆರೆಗಳು ಇದ್ದ ಹಾಗೆ ಕಾಣಿಸುತ್ತಿದೆಯಾದರೂ ಒಟ್ಟಾರೆ, ಕುಟುಂಬ ವ್ಯವಸ್ಥೆ ಈಗಲೂ ಅತ್ಯಂತ ಸಮರ್ಥವಾಗಿದೆ. ಕುಟುಂಬ ಎಂಬ ಸಂಸ್ಥೆಯ ಗಟ್ಟಿತನ, ಹೊಸತನ ಉಳಿದುಕೊಂಡಿದೆ. ಆಕರ್ಷಣೆ, ಅವಶ್ಯಕತೆಯನ್ನು ಹೆಚ್ಚಿಸಿದೆ. ಅಷ್ಟರ ಮಟ್ಟಿಗೆ ಕುಟುಂಬ ವ್ಯವಸ್ಥೆ ಜನಪ್ರಿಯವಾಗಿದೆ ಎಂದರೆ ಎಲ್ಲರೂ ಅದನ್ನು ಇಷ್ಟಪಡುವಂತಾಗಿದೆ.

ಇದು ಕುಟುಂಬ ಸಂಸ್ಥೆಯ ಮೊದಲ ಲಕ್ಷಣ, ಚಿರಪುರಾತನವಾದರೂ ಕಾಲ ಸುಸಂಗತವಾದದು. ಈ ಸಂಸ್ಥೆಯಲ್ಲಿ ಸದಸ್ಯರು ಇದ್ದಾರೆ. ಉಳಿದ ಆದರೆ ಸಂಘಟನೆಗಳಲ್ಲಿ ಇದ್ದಂತೆ ಸದಸ್ಯತ್ವ ಎಂದೇನೂ ಇಲ್ಲ. ಇಲ್ಲಿ ವಿರೋಧ ಪಕ್ಷವೂ ಇಲ್ಲ. ಆಡಳಿತ ಪಕ್ಷವೂ ಇಲ್ಲ. ಎಲ್ಲರೂ ಆಡಳಿತ ಪಕ್ಷಕ್ಕೆ ಸೇರಿದವರು. ಹತ್ತಾರು ಜನ ಒಟ್ಟಿಗೆ ಇರುತ್ತಾರೆ ಎಂದರೆ ಭಿನ್ನಾಭಿಪ್ರಾಯಗಳು ಸಹಜ. ಆದರೆ, ಇದು ಮತಭಿನ್ನತೆ ಅಷ್ಟೆ, ಮನಭಿನ್ನತೆ ಅಲ್ಲ. ಆತ್ಮೀಯ ಭಾವವನ್ನು ಎಲ್ಲರಲ್ಲೂ ಒಂದು ಗೂಡಿಸುವ ಸಂಸ್ಥೆ ಕುಟುಂಬವಾಗಿದೆ.

ಕುಟುಂಬವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ

ಈ ಸಂಸ್ಥೆಯಲ್ಲಿ ಬಡಾವಣೆಗಳು, ಶಾಖೆಗಳು ಆಗುತ್ತವೆ. ಆದರೆ ವಿಭಜನೆ ಆಗುವುದಿಲ್ಲ ಇದೇ ಅದರ ವಿಶೇಷತೆ. ಈ ಸಂಸ್ಥೆಯಲ್ಲಿ ಹಕ್ಕುಗಳಿಗಾಗಿ ಜಗಳವಿಲ್ಲ. ಪ್ರತಿಯೊಬ್ಬರಲ್ಲೂ ಕರ್ತವ್ಯದ ಪ್ರಜ್ಞೆ ಅರಿವು ಇದೆ. ನನ್ನವರು ಎಂಬ ಕಾಳಜಿ ಇದೆ. ಸ್ತ್ರೀ-ಪುರುಷರು ಇದ್ದಾರೆ. ಪುರುಷರು ಮತ್ತು ಮಹಿಳೆಯರಿಗೆ ಅವರದ್ದೇ ಆದಂತಹ ಭೂಮಿಕೆ ಇದೆ. ಅವರು ತಮ್ಮ ತಮ್ಮ ಭೂಮಿಕೆಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋದರೆ ಈ ಕುಟುಂಬ ಅನ್ನುವ ಸಂಸ್ಥೆ ಬಹಳ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಭಾರತವನ್ನು 150 ವರ್ಷಕ್ಕೂ ಹೆಚ್ಚು ಕಾಲ ಆಳಿದ ಬ್ರಿಟನ್‌ನ ಪ್ರಧಾನಿಯೊಬ್ಬರು ನಮ್ಮ ಕುಟುಂಬ ವ್ಯವಸ್ಥೆಯ ಬಗ್ಗೆ, ದಯವಿಟ್ಟು ನೀವು ನಮ್ಮನ್ನು ಅನುಕರಣೆ ಮಾಡಬೇಡಿ, ಆಧುನಿಕತೆಯನ್ನು ನೀವು ಅನುಸರಿಸಬೇಡಿ ಎಂದು ಹೇಳಿದ್ದರು. ಇದು ನಮ್ಮ ಕುಟುಂಬ ವ್ಯವಸ್ಥೆಗೆ ಇರುವ ಮಹತ್ವ.

ಭಾರತೀಯ ಕುಟುಂಬದ ಹಿರಿಮೆ ಮತ್ತು ಹೆಗ್ಗಳಿಕೆ: ಕುಟುಂಬ ಅಂದು ಮತ್ತೆ ಕುಟುಂಬ ಇಂದು ಹಾಗೂ ಕುಟುಂಬ ಮುಂದು… ಇದರ ಭವಿಷ್ಯ ಹೀಗಿದೆ? ಕುಟುಂಬ ಎನ್ನುವುದು ಒಂದು ಪರಿಕಲ್ಪನೆ. ಜಗತ್ತು ಎನ್ನುವ ಶಬ್ದವನ್ನು ವಿಮರ್ಶಿಸಿದಾಗ- ಇದೊಂದು ಆವರಣ. ಹಾಗೇಯ ತಂದೆ-ತಾಯಿ-ಮಕ್ಕಳು, ಇದು ಭಾರತೀಯ ಕುಟುಂಬ ಪರಿಕಲ್ಪನೆಯ ಮೂಲ ಸಂಗತಿ. ಕುಟುಂಬವನ್ನು ಕೂಡಿಸುವ ಭಾವವೇನಿದೆಯೋ ಭಾವ ವಿಸ್ತಾರವಾದಂತೆ ಸಣ್ಣ ಕುಟುಂಬ ಇದ್ದದ್ದು ಇಡೀ ಊರು ಒಂದು ಕುಟುಂಬ ಎಂದು ನಡೆದುಕೊಳ್ಳುತ್ತದೆ.

ಇಂದು ಭಾರತವನ್ನು ಒಂದುಗೂಡಿಸಬಲ್ಲ ಏಕಮೇವ ಶಕ್ತಿ ಎಂದರೆ ಸೈನ್ಯವೂ ಅಲ್ಲ, ಸರಕಾರವೂ ಅಲ್ಲ. ಅದು ಕುಟುಂಬ ಮಾತ್ರ, ಏಕೆಂದರೆ, ಸೃಷ್ಟಿಯಲ್ಲೇ ಕುಟುಂಬದ ಭಾವವನ್ನು ಕಂಡವರು ನಾವು. ಇದು ನಮ್ಮ ದೇಶದ ವಿಶೇಷ. ಇಲ್ಲಿರುವ ನದಿ, ತುಳಸಿಯಲ್ಲಿ ಮಾತೃತ್ವವನ್ನು ಕಂಡವರು ನಾವು, ಪಶು-ಪಕ್ಷಿಗಳಲ್ಲಿ ಕೌಟುಂಬಿಕ ಭಾವದ ಸಾಮರಸ್ಯ ಕಾಣುತ್ತೇವೆ. ಪ್ರಕೃತಿಯ ಪೋಷಣೆ, ಪ್ರಕೃತಿಯ ಆರಾಧನೆ, ಪ್ರಕೃತಿಯ ಸಂಪೋಷಣೆ ಎಂಬುದು ನಮ್ಮ ಸಂಸ್ಕೃತಿ. ಇಂತಹ ಒಂದು ಭಾವ ನಮ್ಮಲ್ಲಿ ಕುಟುಂಬದ ಮೌಲ್ಯಗಳಿಂದ ಬೆಳೆದುಕೊಂಡು ಬಂದಿದೆ.

ಸಂಸ್ಕಾರದ ಕೇಂದ್ರ ನಮ್ಮ ಮನೆ:
ಸಂಸ್ಕಾರದ ಕೇಂದ್ರ ನಮ್ಮ ಮನೆ, ಹೋಟೆಲ್‌ನಲ್ಲಿಯೂ ಊಟ ತಿಂಡಿ ಸಿಗುತ್ತದೆ. ಮನೆಗಿಂತ ಹೋಟೆಲ್‌ನಲ್ಲಿ ವ್ಯವಸ್ಥೆ ಚೆನ್ನಾಗಿ ಇರುತ್ತದೆ. ಆದರೆ, ಹೋಟೆಲ್‌ಗಳಲ್ಲಿ ವಿಟಮಿನ್ ಎಂ,ಅಂದರೆ ಮಮತೆ ಮತ್ತು ವಿಟಮಿನ್ ಡಬ್ಲ್ಯೂ ವಾತ್ಸಲ್ಯ ಸಿಗುವುದಿಲ್ಲ. ಅದು ಸಿಗುವುದು ಮನೆಯಲ್ಲಿ ಮಾತ್ರ. ಹಾಗಾಗಿ ನಾವು ಮನೆಯನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆ. ಏಕೆಂದರೆ, ಅದು ನಮ್ಮ ಕುಟುಂಬ, ಇಷ್ಟರ ಮಧ್ಯೆಯೂ ಕುಟುಂಬದ ಪ್ರಾಧಾನ್ಯತೆ ಇಂದು ಸ್ವಲ್ಪ ಮಟ್ಟಿಗೆ ಕುಂಠಿತಗೊಳ್ಳುತ್ತಿದೆ. ಆಧುನಿಕತೆ ಹೆಚ್ಚಾದಂತೆ ಸಮೃದ್ಧಿ ಹೆಚ್ಚಾಗುತ್ತದೆ. ಹಿಂದೆ ಇದ್ದ ದೈನ್ಯತೆ ಈಗ ಕಡಿಮೆಯಾಗುತ್ತಿದೆ. ಮನೆ ಎನ್ನುವುದು ಸಂಸ್ಕೃತಿ ಹಾಗೂ ಸಮೃದ್ಧಿಯಿಂದ ಕೂಡಿರಬೇಕು. ಸಮೃದ್ಧಿ ಹೆಚ್ಚಾದಂತೆ ಶ್ರೀಮಂತರ ಮನೆಗಳಲ್ಲಿ ಸಂಸ್ಕೃತಿಯೂ ಹೆಚ್ಚಾಗಬೇಕಿದೆ. ಸಂಸ್ಕೃತಿ ಇರುವ ಬಡವರ ಮನೆಯಲ್ಲಿ ಸಮೃದ್ಧಿ ಹೆಚ್ಚಾಗಬೇಕಿದೆ. ಆಧುನಿಕತೆಯ ಹೆಸರಿನಲ್ಲಿ ಆಸ್ತಿಕತೆಯ ಆಲಿಂಗನ ಮನೆ ಮಾಡುತ್ತಿದೆ. ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹುಟ್ಟುಹಬ್ಬವನ್ನು ಆಡಂಬರದಿಂದ ಆಚರಿಸುತ್ತೇವೆ. ಆದರೆ, ನಮ್ಮ ಪರಂಪರೆ ಅದು ಅಲ್ಲ. ಜನ್ಮ ದಿನದಂದು ದಾನ ಮಾಡುವುದು ನಮ್ಮ ಪರಂಪರೆ. ಈ ಪರಂಪರೆಯನ್ನು ನಾವು ಬೆಳೆಸಿಕೊಂಡು ಹೋಗಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಹಾಗೇಯೇ ಕುಟುಂಬೊ ರಕ್ಷತಿ ರಕ್ಷತಃ ಎಂದರೆ, ಕುಟುಂಬವನ್ನು ನಾವು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದು ನಮ್ಮ ಪರಂಪರೆಯ ಬಗ್ಗೆ ಅರಿವು ಮೂಡಿಸಿದರು.

ವರದಿ ಕೃಪೆ :ವಿಶ್ವ ವಾಣಿ

  • email
  • facebook
  • twitter
  • google+
  • WhatsApp
Tags: Bharatiya Family System: A Unique Contribution to humanityfamilySu ramanna

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ನಮ್ಮ ಸಮಾಜದ ಘಟಕ ವ್ಯಕ್ತಿಯಲ್ಲ,ಕುಟುಂಬ - ಡಾ.ಮೋಹನ್ ಭಾಗವತ್

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

March 16, 2015
Remembering RSS Founder Dr KB Hedgewar on his 123th Birthday on Yugadi

December 9, 2013
Shri Guruji Golwalkar – Biography By H. V. Sheshadri

April 18, 2011

EDITOR'S PICK

Al-Qaeda’s new chief, and its war within: An analysis

June 16, 2011
Day-523: Bharat Parikrama enters Himachal Pradesh; after successful Kashmir Visit of 32days

January 13, 2014
‘Reforms in Education System is need of the hour’: Goa CM Parikkar at Intellectual Meet Bangalore

Catholics in Goa are culturally Hindus and India is a Hindu nation: Goa CM Manohar Parrikar

August 25, 2019
ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್

August 11, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In