ಲೇಖಕರು: ಡಾ.ರೋಹಿಣಾಕ್ಷ  ಶಿರ್ಲಾಲು  ಭೋಜನ ಮಾಡುವ ರೀತಿಯಿಂದ ಅಥವಾ ಸ್ಥಳದಿಂದ ಯಾರಾದರು ತಾವು ಜಗತ್ತಿನಲ್ಲಿ ಶ್ರೇಷ್ಟರು ಎಂದು ಭಾವಿಸುವುದಾದರೆ ಅಂಥವರ ಅಜ್ಞಾನಕ್ಕೆ ಒಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಷ್ಟೇ. ಆದರೆ ಅದೇ ಅಜ್ಞಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಖಂಡಿತವಾಗಿಯೂ ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಅಜ್ಞಾನ ಸಮಾಜದ ಆರೋಗ್ಯಕ್ಕೂ ತೊಂದರೆಯನ್ನುಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಹಿತವಾಗುವ ರೀತಿಯಲ್ಲಿ,  ತನ್ನ ಮನೆಯೊಳಗೆ ಬದುಕುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ತೋರುವ […]