ಒಂದು ವಿವಾದದ ಆರಂಭಕ್ಕೂ ಇಂದಿನ ಶ್ರೀರಾಮನವಮಿಯ ದಿನ ಸಾಕ್ಷಿಯಾಯಿತು. ಅದು ರಾಮಭಂಟ ಹನುಮಂತನ ಜನ್ಮಸ್ಥಳದ ಕುರಿತು ಗೊಂದಲ. ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ ಇದಕ್ಕೆ ನಾಂದಿ ಹಾಡಿದೆ. ಶ್ರೀರಾಮ ನವಮಿಯ ದಿವಸ ನಡೆಸಿದ ಕಾರ್ಯಕ್ರಮವೊಂದರಲ್ಲಿ ತಿರುಪತಿಯ ಏಳು ಬೆಟ್ಟಗಳಲ್ಲಿ ಒಂದಾಗಿರುವ ಅಂಜನಾದ್ರಿ ಬೆಟ್ಟವೇ ಹನುಮಂತನ ಜನ್ಮಸ್ಥಳ ಎಂದು ಘೋಷಿಸಿದ್ದಾರೆ. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ವಿ ಮುರಳಿಧರ ಶರ್ಮಾ ನೇತೃತ್ವದಲ್ಲಿ ಅಧ್ಯಯನ ಸಮಿತಿ ರಚಿಸಿ ಈ ವಿಷಯದ ಕುರಿತು […]

ನಾಗಪುರದಲ್ಲಿನ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿವಿಯಲ್ಲಿ ಅಂಬೇಡ್ಕರ್‌ ಜಯಂತಿಯ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಪ್ರಿಂಕೋರ್ಟ್‌ ನ ಮುಖ್ಯನ್ಯಾಯಮೂರ್ತಿಗಳಾದ ಎನ್.ಎ ಬೊಬ್ಡೆಯವರು ಮಹತ್ವದ ವಿಷಯವೊಂದರ ಕುರಿತು ಬೆಳಕು ಚೆಲ್ಲಿದ್ದಾರೆ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿಸ ಬೇಕೆಂಬ ಪ್ರಸ್ತಾವನೆಯನ್ನು ಅಂಬೇಡ್ಕರ್‌ ಸಿದ್ಧಪಡಿಸಿದ್ದರು ಎಂಬುದೇ ಆ ಸಂಗತಿ. ಆಗ ದ್ರವಿಡ ಚಳುವಳಿಯಿಂದಾಗಿ ವಿಶೇಷವಾಗಿ ತಮಿಳುನಾಡಿನಲ್ಲಿ ಹಿಂದಿ ವಿರೋಧ ತೀವ್ರವಾಗಿದ್ದ ಸಮಯ. ಇದಕ್ಕೆ ಪರಿಹಾರ ಮಾತ್ರವಲ್ಲ, ತನ್ನ ದಾಸ್ಯದ ನೊಗವನ್ನು ಕಳಚಿಕೊಳ್ಳುತ್ತಿರುವ ಹಂತದಲ್ಲಿ ಒಂದು ಸ್ವಾಭಿಮಾನಿ ಭಾರತ […]

ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಒಂದಂತೂ ಖುಷಿಯ ಸಂಗತಿ ನಮಗೆ ಕಂಡು ಬರುತ್ತಿದೆ. ಅದೆಂದರೆ ದೇಶದ ಜನರು ಈಗ ಜಾಗೃತರಾಗುತ್ತಿದ್ದಾರೆ. ಸಮಾಜವು ಈಗ ಯಾವುದನ್ನೇ ಆಗಲಿ ಕುರುಡಾಗಿ ಬೆಂಬಲಿಸುತ್ತಿಲ್ಲ. ಈ ಹಿಂದೆ ದೇಶದ ಹಿತಾಸಕ್ತಿಯನ್ನು ಕುರಿತು ತಾವು ಹೇಳುವುದೇ ಅಂತಿಮ ಸತ್ಯ ಮತ್ತು ತಾವು ಮಾತ್ರವೇ ಜನಗಳ ಕುರಿತು ನಿಜವಾದ ಕಾಳಜಿಯುಳ್ಳವರು ಎಂಬುದಾಗಿ ದೇಶದ ಜನತೆ ಒಪ್ಪಿಕೊಳ್ಳಬೇಕು ಎಂಬ ಭಾವನೆಯನ್ನು ಕೆಲವರು ನಿರ್ಮಿಸಿದ್ದರು. ಇಂತಹವರಲ್ಲಿ ಸಹ ಪ್ರಭಾವಲಯಗಳಿದ್ದವು. ತಾಲ್ಲೂಕು ಮಟ್ಟದಿಂದ […]

ಭಾರತ ಇತಿಹಾಸದ ಸಾಹಸಮಯ ಪುಟಗಳಲ್ಲಿ ಒಂದಾಗಿ, ರಾಷ್ಟ್ರಭಕ್ತ ಯುವಜನರ ಮೈ ರೋಮಾಂಚನಗೊಳಿಸುವ ಆ ಘಟನೆ ನಡೆದದ್ದು, 1670ರ ಫೆಬ್ರವರಿ ನಾಲ್ಕರಂದು. ಆ ನಿಮಿತ್ತ  ಈ ನೆನಪು. ಆತ ಸಾವಿರ ಸೈನಿಕರ ನಾಯಕನಾದ ಒಬ್ಬ ಸುಬೇದಾರ, ಶಿವಾಜಿ ಹತ್ತಾರು ಆಪ್ತರಲ್ಲಿ ಅವನೂ ಒಬ್ಬ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶಿವಾಜಿಯ ಪಡೆದಿದ್ದ ದೇವದುರ್ಲಭ ಕಾರ್ಯಕರ್ತರ ಪಡೆಯಲ್ಲಿ ಅಗ್ರಣಿ. ತಾನಾಜಿ ಮಾಲಸುರೆಯಂತಹ ನಂಬುಗೆ ಭಂಟರ ಬೆಂಬಲದಿಂದಲೇ ಮೊಗಲಾಯಿ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಛತ್ರಪತಿಯೆನಿಸಿಕೊಳ್ಳಲು ಶಿವಾಜಿಗೆ […]

ದೇಶದಲ್ಲಿ ಈಗ ಒಂದು ಮಹತ್ವದ ಘೋಷಣೆಯಾಗಿದೆ. ತಡವಾಗಿಯಾದರೂ ಮೆಚ್ಚಬೇಕಾದ ಕಾರ್ಯ. ಎಲ್ಲ ದೇಶಭಕ್ತರ ಎದೆಯನ್ನುಬ್ಬಿಸುವ ವಿಚಾರ.  ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇನ್ನು ಮುಂದೆ “ಪರಾಕ್ರಮ ದಿನ”ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೇತಾಜಿಯ ಜನ್ಮದಿನ-ಜನವರಿ 23 ರಂದು ಶೌರ್ಯದ ದಿನವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು  ಪ್ರಕಟಣೆಯಲ್ಲಿ ತಿಳಿಸಿದೆ. “ರಾಷ್ಟ್ರಕ್ಕೆ […]