ಚಾಮರಾಜನಗರ: ‘ಹತ್ತಾರು ಜಾತಿ ಪದ್ಧತಿಗಳು ನಮ್ಮ ದೇಶದ ಸಾಮಾಜಿಕ ವೈವಿಧ್ಯವೇನೋ  ಸರಿ, ಆದರೆ ಈ ಮೂಲಕ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮೇಲು-ಕೀಳು, ಸ್ಪೃಶ್ಯ- ಅಸ್ಪೃಶ್ಯ ಇತ್ಯಾದಿ ವಿಘಟನಕಾರಿ ಮನೋಭಾವವನ್ನು ತೊಡೆದು ಹಾಕಿ ಸಾಮರಸ್ಯ ಭರಿತ, ಸಬಲ ಹಿಂದೂ ಸಮಾಜವನ್ನು ಕಟ್ಟುವುದೇ ಸಂಘದ ಅದ್ಯತೆಗಳಲ್ಲೊಂದು. ಕಳೆದ 90 ವರ್ಷಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಆರೆಸ್ಸೆಸ್ ಕೊಡುಗೆ ಅನನ್ಯ ‘ ಎಂದು ಆರೆಸ್ಸೆಸ್ ರಾಜ್ಯ ಮಾಧ್ಯಮ ವಿಭಾಗ ‘ವಿಶ್ವ ಸಂವಾದ ಕೇಂದ್ರ’ದ ರಾಜೇಶ್ ಪದ್ಮಾರ್ ಹೇಳಿದ್ದಾರೆ. ಚಾಮರಾಜನಗರದ ಸಂತೇಮರಹಳ್ಳಿಯ ಜೆ.ಎಸ್.ಎಸ್ ಕಾಲೇಜಿನ ಆವರಣದಲ್ಲಿ ಅಕ್ಟೋಬರ್ […]