ನವ ಉದ್ಯಮಕ್ಕೆ ಪ್ರೇರಣೆ 5ನೇ ಸ್ತಂಭ ಕಾರ್ಯಕ್ರಮ ನಿರುದ್ಯೋಗ ಸಮಸ್ಯೆಗೆ ಪರಿಹಾರ ‘ಸ್ವಯಂ ಉದ್ಯೋಗ’. ಒಬ್ಬ ವ್ಯಕ್ತಿಯ ಸಾಮರ್ಥ್ಯ, ಕೌಶಲ್ಯ, ಪರಿಣಿತಿ ಸಂಪೂರ್ಣವಾಗಿ ಬೆಳಕಿಗೆ ಬರಲು ಸಾಧ್ಯವಾಗುವುದು ನವ ಉದ್ಯಮದಿಂದ ಅಥವಾ ಸ್ವಯಂ ಉದ್ಯಮದಿಂದ. ಒಂದು ರಾಷ್ಟ್ರದ ಬೆಳವಣಿಗೆಯಲ್ಲಿ ಅನಿಶ್ಚಿತತೆಯಿಂದಾದರೂ ಸರಿಯೇ, ನಿರಂತರವಾಗಿ ತೊಡಗಿಕೊಳ್ಳುವ ಚೈತನ್ಯಶೀಲ ಮಾಧ್ಯಮವೇ ನವ ಉದ್ಯಮ. ಆರ್ಥಿಕ ಕ್ಷೇತ್ರವು ಸದಾ ಚಟುವಟಿಕೆಯಿಂದ ಕೂಡಿರುವಂತೆ ಅಥವಾ ಸದಾ ಚಲನಶೀಲವಾಗಿ ಜಾಗೃತಾವಸ್ಥೆಯಲ್ಲಿರಲು ಸಹಕರಿಸುವ ಆಯಾಮವೇ ನವ ಉದ್ಯಮ. ನಮ್ಮ […]