ಬಂಗಾಳೀ ಭಾಷೆಯನ್ನೇ ಮಾತನಾಡುತ್ತಿದ್ದ ಪೂರ್ವಪಾಕಿಸ್ತಾನಿಯರನ್ನು ಭಾರತದ ವಿಭಜನೆಯಾದಾಗಿನಿಂದಲೂ ತರಹೇವಾರಿಯಾಗಿ ಪಶ್ಚಿಮ ಪಾಕಿಸ್ತಾನದ ಜನ ಗೋಳು ಹೊಯ್ದುಕೊಳ್ಳುತ್ತಿದ್ದರು. ಕರಿಯರೆನ್ನುತ್ತಿದ್ದರು. ಪೆದ್ದರೆನ್ನುತ್ತಿದ್ದರು. ಪೂರ್ವ ಪಾಕಿಸ್ತಾನದಲ್ಲಿ ಈ  ಅವಮಾನದ ಬಿಸಿಯು ತನ್ನ ಪರಾಕಾಷ್ಟೆಯನ್ನು ಮುಟ್ಠಿದ್ದು 1971ರಲ್ಲಿ. ಆಗ ಅಲ್ಲಿ ಎಲೆಕ್ಷನ್ ಮುಗಿದಿತ್ತು. ಶೇಕ್ ಮುಜೀಬುಲ್ ರೆಹಮಾನ್ ಅವರು ಪ್ರಧಾನಿಯಾಗಿ ಆಯ್ಕೆಗೊಂಡಿದ್ದರು.  ಅವರು ಪಶ್ಚಿಮ ಪಾಕಿಸ್ತಾನದ ದುಂಡಾವೃತ್ತಿಯನ್ನು ತಮ್ಮ 17.3.1971ರ  ಭಾಷಣದಲ್ಲಿ ಬಹಿರಂಗವಾಗಿಯೇ ಖಂಡಿಸುತ್ತಾ.ತಮಗೊಂದು ಪ್ರತ್ಯೇಕ ದೇಶರಚನೆಯಾಗಬೇಕೆಂದೂ, ಅದಕ್ಕೆ ಬಾಂಗ್ಲಾ ಎಂದು ಹೆಸರಿಡಬೇಕೆಂದೂ ಕರೆನೀಡಿದರು. ಇದರಿಂದ ರೊಚ್ಚಿಗೆದ್ದ […]