ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ ಇತ್ತೀಚೆಗಷ್ಟೇ, ಆಗಸ್ಟ್ ೨೨ ರಂದು ಆನಂದ ಕುಮಾರಸ್ವಾಮಿಯವರ ಜನ್ಮದಿನವಿತ್ತು. ಭಾರತೀಯ ಕಲಾತತ್ತ್ವವನ್ನು ಪಾಶ್ಚಾತ್ಯ ವಿದ್ವದ್ವಲಯಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಿದವರಲ್ಲಿ ಕುಮಾರಸ್ವಾಮಿ ಪ್ರಮುಖರು. ಹದಿನೇಳನೇ ವಯಸ್ಸಿನಿಂದಲೆ ಬರವಣಿಗೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಲೇಖನ ಕೃಷಿ ಮಾಡಿದವರು. ಪುಸ್ತಕ, ಪ್ರಬಂಧ, ವಿಮರ್ಶೆ, ಅನುವಾದಗಳನ್ನೊಳಗೊಂಡಂತೆ ಸುಮಾರು ಸಾವಿರದೈನೂರಕ್ಕೂ ಹೆಚ್ಚು ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ಸಾವಿರದೈನೂರು ಲೇಖನಗಳನ್ನು ಒಬ್ಬ ವ್ಯಕ್ತಿ ಬರೆಯುವುದೆಂದರೆ ತಮಾಷೆಯ ಮಾತಲ್ಲ. ಅಲ್ಲದೆ ಸ್ವಾಮಿಯವರು […]

ಆನಂದ ಕುಮಾರಸ್ವಾಮಿಗೆ ಮರಣದಂಡನೆ ಆಗಸ್ಟ್ ೨೨ – ಇಂದು ಆನಂದ ಕುಮಾರಸ್ವಾಮಿಯವರು ಹುಟ್ಟಿದ ದಿನ. ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವದ್ದ್ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ. ಸಾವಿರಕ್ಕೂ ಮಿಕ್ಕಿ ವಿದ್ವಲ್ಲೇಖನಗಳನ್ನು ಬರೆದಿರುವ ಸ್ವಾಮಿಯವರ ವೈಯುಕ್ತಿಕ ಜೀವನದ ಬಗ್ಗೆ ತೀರ ಕಡಿಮೆ ಮಾಹಿತಿ ದೊರೆಯುತ್ತದೆ. ಅವರ ಬಗ್ಗೆ ಶ್ರಿಲಂಕಾದ ರೋಹನ್ ಪಿಯದಾಸ್ ಮತ್ತು ಬಂಗಾಳದ ಚಿದಾನಂದ ದಾಸ್‌ಗುಪ್ತಾ ಸಕ್ಷ್ಯಚಿತ್ರಗಳನ್ನು ಮಾಡಿದ್ದಾರಾದರೂ ಅವುಗಳಲ್ಲೂ ಅವರ ಪಾಂಡಿತ್ಯ, ಬರಹಗಳ ಬಗ್ಗೆಯೇ ಚರ್ಚೆ ಇದೆ. ಗುಪ್ತಾರವರು […]