ಸಂಸ್ಕೃತ ವಿದ್ವಾಂಸರು, ಖ್ಯಾತ ವಾಗ್ಮಿಗಳಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿಯ ಸ್ವಗೃಹದಲ್ಲಿ ಬನ್ನಂಜೆಯವರು ಇಂದು ಬೆಳಿಗ್ಗೆ ಅಸುನೀಗಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಬನ್ನಂಜೆ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ. ಬನ್ನಂಜೆಯವರ ಕಿರಿಯ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತತ್ಸಂಬಂಧದ ವಿಧಿಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿತ್ತು. “ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನು ಅಗಲಿರುವುದು […]