1 ಏಪ್ರಿಲ್ 2019, ಬೆಂಗಳೂರು: ‘ಸಂಸ್ಕೃತ ಭಾರತಿ’ ಕಾರ್ಯಾಲಯವಾದ ‘ಅಕ್ಷರಂ’ ನ ಹಿರಿಯ ಕಾರ್ಯಕರ್ತರಾದ ಶ್ರೀ ಸುಬ್ರಹ್ಮಣ್ಯರು ನಿನ್ನೆ ರಾತ್ರಿ 11ಕ್ಕೆ ನಿಧನರಾದರು. ಅಗಲಿದ ಶ್ರೀ ಸುಬ್ರಹ್ಮಣ್ಯಂ (ಬೇಯರ್ ಸುಬ್ಬಣ್ಣ)ನವರ ಬಗ್ಗೆ ಎರಡು ಮಾತು: ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು. ‘ಬೇಯರ್’ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಅಧಿಕಾರಿಯಾಗಿದ್ದವರು. ‘ಇವರು ಆರೆಸ್ಸೆಸ್’ ಎಂದು ಯಾರೋ ಕಂಪ್ಲೇಂಟ್ ಮಾಡಿದಾಗ ಕಂಪೆನಿಯಲ್ಲಿ, “ಹಿಂದೆಯೂ, ಇಂದಿಗೂ, ಎಂದೆಂದಿಗೂ ನಾನು ಆರೆಸ್ಸೆಸ್!” ಎಂದು ತಮ್ಮನ್ನು ಸಮರ್ಥಿಸಿಕೊಂಡ ಸ್ವಾಭಿಮಾನಿ […]