ನವೆಂಬರ 15 “ಗಿರಿಜನ ಸ್ವಾಭಿಮಾನ ದಿವಸ ” – ಅವಶ್ಯಕತೆಹಿನ್ನೆಲೆ:ಭಾರತ ಜಗತ್ತಿನಲ್ಲೇ ಅತ್ಯಂತ ಪುರಾತನವಾದ ದೇಶ.ಹಾಗಾಗಿ ಇಲ್ಲಿನ ಸಂಸ್ಕೃತಿಯೂ ಪುರಾತನವಾದದ್ದು.ಇಲ್ಲಿನ ಸಂಸ್ಕೃತಿಯನ್ನು ಅರಣ್ಯ ಸಂಸ್ಕೃತಿ ಎಂದೂ ಕರೆಯುತ್ತಾರೆ. ವೇದ ಪುರಾಣಗಳು ರಚನೆಯಾದದ್ದು ಅರಣ್ಯದಲ್ಲಿ. ಜ್ಞಾನಿಗಳು, ತಪಸ್ವೀಗಳೂ ಆದ ಋಷಿ ಮುನಿಗಳು ವಾಸಮಾಡುತ್ತಿದ್ದುದು ಅಡವಿಯಲ್ಲಿ.ಅವರ ಜೊತೆಯಲ್ಲೇ ವಾಸಿಸುತ್ತಿದ್ದವರು ಗಿರಿಜನರು,ಬುಡಕಟ್ಟು ಜನರು ಅಥವಾ ವನವಾಸಿಗಳು.ಆದಿ ಕಾವ್ಯ ರಾಮಾಯಣ ರಚಿಸಿದ ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿಗಳು ವನವಾಸಿಗಳ ಮೂಲ ಪುರುಷರಲ್ಲಿ ಒಬ್ಬರು.ಗಿರಿಜನರು ಸಂಸ್ಕಾರ, ಸಂಸ್ಕೃತಿಯುಳ್ಳವರು. […]