‘ಒಲವೆಂಬ ಹೊತ್ತಿಗೆಯ ಓದ ಬಯಸುವ ನೀನುಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ;ಹಗಲಿರುಳು ದುಡಿದರೂ ಹಲ ಜನುಮಕಳೆದರೂ ನೀ ತೆತ್ತಲಾರೆ ಬರೀ ಅಂಚೆ ವೆಚ್ಚ’ ಎಂಬ ಅಂಬಿಕಾತನಯದತ್ತರ ವಾಣಿ ನಮಗೆಲ್ಲ ಅರಿವೇ ಇದೆ. ಮೇಲ್ನೋಟದಲ್ಲಿ ಓದಿದಾಕ್ಷಣ ಇದೇನೋ ಓಲವಿನ ಬಗ್ಗೆ ಹೇಳುತ್ತಿದ್ದಾರೇನೋ ಎಂಬ ಭಾವ ಮೂಡಿದರೂ ಆಳಕ್ಕೆ ಇಳಿದಾಗ ಅರಿವಿಗೆ ಬರುವುದು ಇಲ್ಲಿ ನಡೆಯುತ್ತಿರುವುದು ಸು‘ಕೃತಿ’ಯ ಪರಿಚಯ ಎಂದು. ‘ಸುಕೃತಿ’ – ಈಗಾಗಲೇ ಸಾವಿರಾರು ಮಂದಿಯ ಮೆಚ್ಚುಗೆ ಪಡೆದು ಮುನ್ನಡೆಯುತ್ತಿರುವ ಫೇಸ್‍ಬುಕ್ ಪೇಜ್ […]