ಚಿಕ್ಕಮಗಳೂರಿನ ದತ್ತ ಪೀಠದಲ್ಲಿ ನ್ಯಾಯಾಲಯದ ತೀರ್ಪಿನಂತೆ ಹಿಂದೂ ಅರ್ಚಕರನ್ನು ಶೀಘ್ರ ನೇಮಕ ಮಾಡುವಂತೆ ಮತ್ತು ದತ್ತ ಜಯಂತಿಗೆ ಆಗಮಿಸುವಂತೆ ಮುಖ್ಯಮಂತ್ರಿಗಳಿಗೆ ಬಜರಂಗದಳ ಮನವಿ. ಚಿಕ್ಕಮಗಳೂರಿನ ದತ್ತ ಪೀಠವು ಹಿಂದಿನ ಹಲವು ದಶಕಗಳಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ದುರದೃಷ್ಟವಶಾತ್ ಅಲ್ಲಿ ಮುಸ್ಲಿಂ ಮೌಲ್ವಿಗಳು ಪೂಜೆ ಸಲ್ಲಿಸುತ್ತಿದ್ದು ಪ್ರಸ್ತುತ ಹೈಕೋರ್ಟ್ ನ ತೀರ್ಪಿನ ಪ್ರಕಾರ ಮೌಲ್ವಿಗಳ ನೇಮಕಾತಿಯನ್ನು ರದ್ದುಪಡಿಸಲಾಗಿದೆ.ಕಳೆದ ಹಲವಾರು ವರ್ಷಗಳಿಂದ ಹಿಂದೂ ಸಮಾಜವು ಈ ಒಂದು ಅಪೇಕ್ಷೆಯನ್ನು ಮುಂದಿಟ್ಟುಕೊಂಡು […]

ದತ್ತ ಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡುವಂತೆ ಮಾನ್ಯ ಹೈಕೋರ್ಟ್ ಆದೇಶವನ್ನು ಬಜರಂಗದಳ ಸ್ವಾಗತಿಸುತ್ತದೆ ಮತ್ತು ಶೀಘ್ರವಾಗಿ ಅರ್ಚಕರನ್ನು ನೇಮಕ ಮಾಡಬೇಕಾಗಿ ಸರ್ಕಾರಕ್ಕೆ ಆಗ್ರಹ ಮಾಡುತ್ತದೆ ಎಂದು ಬಜರಂಗದಳ ಕರ್ನಾಟಕ ದಕ್ಷಿಣದ ಪ್ರಾಂತ ಸಂಯೋಜಕರಾದ ಕೆ.ಆರ್. ಸುನಿಲ್ ತಿಳಿಸಿದ್ದಾರೆ ಮಾನ್ಯ ಹೈಕೋರ್ಟ್ ಹಿಂದೂಗಳ ಬಹು ದಿನಗಳ ಬೇಡಿಕೆ ದತ್ತ ಪೀಠಕ್ಕೆ ಹಿಂದೂ ಅರ್ಚಕರ ನೇಮಕಕ್ಕೆ ಆದೇಶ ಹೊರಡಿಸಿರುವುದನ್ನು ಬಜರಂಗದಳ ಸ್ವಾಗತಿಸುತ್ತದೆ.ನಮ್ಮ ಹಿಂದೂ ದೇವರನ್ನು ಪೂಜೆ ಮಾಡಲು ಹಿಂದುಗಳಿಗೆ ಅವಕಾಶ ಇಲ್ಲದಂತಾಗಿದ್ದು […]