ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ರೈತರ ಪ್ರತಿಭಟನೆ ವಿಚಾರವಾಗಿ ಟ್ವಿಟರ್ ನಲ್ಲಿ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥೂನ್ಬೆರಿ(Thunberg) ಹಂಚಿಕೊಂಡಿದ್ದ ಟೂಲ್​ಕಿಟ್ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ 21 ವರ್ಷದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಶನಿವಾರವಷ್ಟೇ, ನಗರದ ಸೋಲದೇವನಹಳ್ಳಿಯ ಆಕೆಯ ಮನೆಯಿಂದ ಪೊಲೀಸರು ಆಕೆಯನ್ನು ಕರೆದೊಯ್ದು ವಿಚಾರಣೆ ನಡೆಸಿದ್ದರು. ಈಕೆ ಟೂಲ್​ಕಿಟ್ ಸೃಷ್ಟಿಯ ಪ್ರಧಾನ ಸಂಚುಕೋರಳು ಎಂಬ ಆರೋಪ ಮಾಡಲಾಗಿದೆ. ದಿಶಾ ರವಿಯನ್ನು ಪೊಲೀಸರು ಬಂಧಿಸಿ ದೆಹಲಿಯ ಪಟಿಯಾಲ ಹೌಸ್​ […]