ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಕಾರ್ಯವಾಹ ಸುರೇಶ್ ಜೋಶಿ (ಭೈಯಾಜೀ) ಅವರು ನೀಡಿದ ಪತ್ರಿಕಾ ಹೇಳಿಕೆ    ಉಜ್ಜಯಿನಿ ಅಗಸ್ಟ್ 20: ಒಂದೇ ಉದ್ದೇಶದಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಸಮಾಜ ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರತವಾದ ಸಂಘಟನೆಯ ಪ್ರಮುಖ ಕಾರ್ಯಕರ್ತರು 3-4 ವರ್ಷಗಳಿಗೊಮ್ಮೆ ವಿಚಾರ-ವಿಮರ್ಶೆಯ ಉದ್ದೇಶದಿಂದ ಒಂದೆಡೆ ಸೇರುತ್ತಾರೆ. ಇಲ್ಲಿ ಅನುಭವಗಳ ಪರಸ್ಪರ ವಿನಿಮಯ ನಡೆಯುತ್ತದೆ. ಇದೇ ಸರಣಿಯಲ್ಲಿ ಈ ಸಮನ್ವಯ ಬೈಠಕ್ ಉಜ್ಜೈನಿಯಲ್ಲಿ ಸೇರಿದೆ; ಇದರಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಗಿದೆ; […]