ವೈಯಕ್ತಿಕ ಅಭಿಪ್ರಾಯ ಎಂದೂ ಸಂಘಟನೆಯ ನಿಲುವಾಗಿರಲು ಸಾಧ್ಯವೇ ಇಲ್ಲ. ಸಂಘದ ನಿಲುವು ಎಂದಿಗೂ ಸಾಮೂಹಿಕವಾಗಿ ತೆಗೆದುಕೊಂಡ ನಿರ್ಧಾರವೇ ಆಗಿರುತ್ತದೆ ಎಂದು ಆರೆಸ್ಸೆಸ್‌ನ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ತಿಳಿಸಿದ್ದಾರೆ. ಆರ್ಗನೈಸರ್, ಪಾಂಚಜನ್ಯ ಪತ್ರಿಕೆಯ ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕೆಲ ಸ್ವಯಂಸೇವಕರು ಸಂಘದಲ್ಲಿ ತೆಗೆದುಕೊಂಡ ನಿಲುವನ್ನು ಸಂಪೂರ್ಣವಾಗಿ ಗಮನಿಸದೇ ತಮ್ಮ ವೈಯಕ್ತಿಕ ನಿಲುವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಾರೆ. ಆದರೆ ವೈಯಕ್ತಿಕ ಅಭಿಪ್ರಾಯ ಸಾಮೂಹಿಕ ನಿಲುವಿನ ಒಂದು ಭಾಗವಾಗಿರುತ್ತದಷ್ಟೇ ಎಂದು ಹೇಳಿದರು. […]