ಖ್ಯಾತ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರ ಶ್ರದ್ಧಾಂಜಲಿ ಸಂದೇಶ. “ಕನ್ನಡದ ಖ್ಯಾತ ಕವಿ ಹಾಗೂ ನನ್ನ ಗೆಳೆಯ ಸಿದ್ದಲಿಂಗಯ್ಯ ಇನ್ನಿಲ್ಲ ಎಂದು ತಿಳಿದು ಮಾತೇ ನಿಂತಂತಾಗಿದೆ. ಅವರ ನಿಧನ ಕನ್ನಡ ನಾಡು-ನುಡಿಗಳಿಗಾದ ಅಪಾರ ನಷ್ಟ; ವೈಯಕ್ತಿಕವಾಗಿ ನನಗೆ ಅತೀವ ಆಘಾತ. ಕೋವಿಡ್ ಮಹಾಮಾರಿಗೆ ಅವರು ಬಲಿಯಾದುದು ಮನವನ್ನು ಕಲಕುತ್ತಿದೆ. ಎಲ್ಲ ವಿಧದ ನೋವನ್ನುಂಡ ಸಮುದಾಯದ ಗಟ್ಟಿ ದನಿಯಾಗಿ, ಹೋರಾಟದ ಕಹಳೆಯೂದಿದ ಅವರು […]