ವಿಹಿಂಪ, ಆರೆಸ್ಸೆಸ್ ಬಗ್ಗೆ, ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಅವಹೇಳನಾಕಾರಿ ಟ್ವಿಟ್ ಸರಣಿ ಕಾರಿ ಮುಗಿಸಿದ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಆತಾತುರವಾಗಿ ಬುಧವಾರದಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ತಮ್ಮ ಟ್ವಿಟ್ ಅಭಿಯಾನದ ನಂತರ, ಮಾಧ್ಯಮಗಳಲ್ಲಿ ನಡೆದ ಚರ್ಚೆ, ವಿಹಿಂಪ, ಬಜರಂಗ ದಳದ ಪತ್ರಿಕಾ ಹೇಳಿಕೆ, ಜೊತೆಗೆ ನಡೆದ ಸಾರ್ವಜನಿಕ ಚರ್ಚೆಯ ಬಳಿಕ ಕುಮಾರಸ್ವಾಮಿಯವರು ಪತ್ರಿಕಾ ಹೇಳಿಕೆಗೆ ಆಹ್ವಾನಿಸಿದರು. ನಾಝಿಗಳಂತೆ ಮನೆ ಮಾರ್ಕ್ ಮಾಡಲಾಗುತ್ತಿದೆ, […]