ವಿಹಿಂಪ, ಆರೆಸ್ಸೆಸ್ ಬಗ್ಗೆ, ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಅವಹೇಳನಾಕಾರಿ ಟ್ವಿಟ್ ಸರಣಿ ಕಾರಿ ಮುಗಿಸಿದ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಆತಾತುರವಾಗಿ ಬುಧವಾರದಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ತಮ್ಮ ಟ್ವಿಟ್ ಅಭಿಯಾನದ ನಂತರ, ಮಾಧ್ಯಮಗಳಲ್ಲಿ ನಡೆದ ಚರ್ಚೆ, ವಿಹಿಂಪ, ಬಜರಂಗ ದಳದ ಪತ್ರಿಕಾ ಹೇಳಿಕೆ, ಜೊತೆಗೆ ನಡೆದ ಸಾರ್ವಜನಿಕ ಚರ್ಚೆಯ ಬಳಿಕ ಕುಮಾರಸ್ವಾಮಿಯವರು ಪತ್ರಿಕಾ ಹೇಳಿಕೆಗೆ ಆಹ್ವಾನಿಸಿದರು. ನಾಝಿಗಳಂತೆ ಮನೆ ಮಾರ್ಕ್ ಮಾಡಲಾಗುತ್ತಿದೆ, […]

ಹಾಲಿಗೆ ಹುಳಿ ಹಿಂಡುವುದು ನಿಲ್ಲಿಸಲಿ!ಲೇಖಕರು : ಪ್ರವೀಣ್ ಪಟವರ್ಧನ್(೧೮ ಫೆಬ್ರವರಿ ೨೦೨೧ ‘ಹೊಸ ದಿಗಂತ’ ಪತ್ರಿಕೆಯಲ್ಲಿ ಪ್ರಕಟಿತ) ಮಹಾನ್ ಸಂಘಟನಕಾರನೊಬ್ಬ ತಾವು ನಿರ್ಮಿಸಹೊರಟಿದ್ದ ವಿದ್ಯಾ ಸಂಸ್ಥೆಗೆ ದೇಣಿಗೆ ಕೇಳಲು ಇಡಿಯ ದೇಶ ತಿರುಗುತ್ತಿದ್ದರು. ಅಭೂತಪೂರ್ವ ಪ್ರತಿಕ್ರಿಯೆ ಅವರಿಗೆ ದೊರೆಯಲು ಆರಂಭಿಸಿತು. ರಾಜನ ದೇಣಿಗೆ ದೊರೆತರೆ ತನ್ನ ಕಾರ್ಯಕ್ಕೆ ಸಿಂಹಬಲ ದೊರೆತಂತೆ ಎಂದು ಅಂದಾಜಿಸಿ ರಾಜನ ಬಳಿ ಹೋದರು. ಆ ರಾಜ ಜಿಪುಣನಷ್ಟೇ ಅಲ್ಲದೆ ಮತಾಂಧನೂ ಆಗಿದ್ದ. ಆತ ಆ ಸಂಘಟನಾಕಾರನಿಗೆ […]