ಪಾಕಿಸ್ತಾನವು ಭಾರತದೊಡನೆ ನಡೆಸಿದ ಯುದ್ಧಗಳೆಲ್ಲದರಲ್ಲೂ ಸೋತಿದ್ದರೂ, ಭಾರತವು ತನ್ನ ಭೂಮಿಯನ್ನು ಕಳೆದುಕೊಂಡಿರುವುದು ಒಂದು ವಿಪರ್ಯಾಸ. ಇತರ ದೇಶಗಳನ್ನು ಅತಿಕ್ರಮಿಸದ, ಇತರರ ತಂಟೆಗೆ ಹೋಗದ ಭಾರತದ ಸ್ವಭಾವವನ್ನು ಪಾಕ್ ಮತ್ತು ಚೀನಾ ದೇಶಗಳು ದುರುಪಯೋಗಪಡಿಸಿಕೊಂಡಿವೆ. ಮತ್ತೂ ಮುಂದುವರೆದ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಾ ಭಾರತವನ್ನು ಕಟ್ಟಿಹಾಕುವ ಯತ್ನ ನಡೆಸಿದೆ. ಭಾರತವನ್ನು ನೇರ ಯುದ್ಧದಲ್ಲಿ ಎದುರಿಸಲಾಗದ ವಾಸ್ತವತೆ ಮತ್ತು ಭಾರತವು ಗಡಿದಾಟಲಾರದೆಂಬ ವಿಶ್ವಾಸದಿಂದ ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ಅಘೋಷಿತ ನೀತಿಯನ್ನಾಗಿಸಿಕೊಂಡಿರುವುದು ಬಹಿರಂಗ ಸತ್ಯ. ಉರಿ […]