ಭಾಗ-2  ಮಾತೃಭಾಷಾ ಶಿಕ್ಷಣ ಅಗತ್ಯವೇ? ಶಿಕ್ಷಣದೊಳಗೆ ಎರಡು ಮುಖ್ಯ ಭಾಗಗಳಿವೆ;  ಒಂದು ಜ್ಞಾನಪ್ರಸಾರ. ಅದನ್ನು ಎಲ್ಲ ಸಂಸ್ಥೆಗಳೂ ಒಂದು ಮಟ್ಟಿಗೆ ಮಾಡುತ್ತವೆ. ಕೊಟ್ಟಿರುವ ಪಠ್ಯಕ್ರಮವನ್ನು ಮಕ್ಕಳ ಹೃದಯಕ್ಕೆ ಮುಟ್ಟಿಸುವ ಪ್ರಯತ್ನ; ಅದನ್ನು ಡಿಸ್ಸೆಮಿನೇಟಿಂಗ್ ನಾಲೆಡ್ಜ್ ಎಂದು ಕರೆಯುತ್ತೇವೆ. ಜ್ಞಾನಪ್ರಸಾರ ಮಾಡುವುದು ಪ್ರತಿಯೊಂದು ಶಾಲೆಯ ಮೊದಲ ಕರ್ತವ್ಯ. ಎರಡನೆಯದ್ದು ಬಹುಮುಖ್ಯ ಕಾರ್ಯ. ಅದನ್ನು ನಾವು ಮರೆತಿದ್ದೇವೆ. ಅದು ಜ್ಞಾನವನ್ನು ಸೃಷ್ಟಿ ಮಾಡುವುದು. ಜ್ಞಾನವು ಸೃಷ್ಟಿಯಾಗುವುದು ಹೇಗೆ? ನಾವು ಜ್ಞಾನದ ಸೃಷ್ಟಿಯನ್ನು ಹೇಗೆ […]