ಭಾರತೀಯ ಸ್ವಾತಂತ್ರ್ಯ ಹೋರಾಟದ ಪುನರವಲೋಕನ– ದತ್ತಾತ್ರೇಯ ಹೊಸಬಾಳೆ ವಸಾಹತುಷಾಹಿಯ ಗುಲಾಮಗಿರಿಯಿಂದ ಬಿಡುಗಡೆಯಾದ ಸಂತಸದ ಸ್ವಾತಂತ್ರ್ಯದ ಹಬ್ಬವನ್ನು ಭಾರತವು ಇಂದು ಆಚರಿಸುತ್ತಿದೆ. ಈ ಸಂಭ್ರಮಾಚರಣೆಯ ನಡುವೆ, ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಸ್ವತಂತ್ರ ಭಾರತವು ಹೇಗೆ ಪ್ರಗತಿ ಪಥದಲ್ಲಿ ಮುಂದೆ ಸಾಗಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತವೆ. ಜೊತೆಜೊತೆಗೇ, ಈ ಸ್ವಾತಂತ್ರ್ಯಗಳಿಕೆಯ ಹಾದಿಯಲ್ಲಿನ ಕಳೆದ ನಾಲ್ಕು ನೂರು ವರ್ಷಗಳ ಸಂಘರ್ಷಮಯ ಹಾಗೂ ತ್ಯಾಗಮಯ ಇತಿಹಾಸವನ್ನೂ ಸಹಜವಾಗಿಯೇ ನಾವು ಸ್ಮರಿಸುತ್ತೇವೆ. ಸ್ವದೇಶಿ-ಸ್ವರಾಜ್ಯ-ಸ್ವಧರ್ಮ ಇವುಗಳ ಮೂಲಕ […]