ನಿಜ ಶ್ರಮಿಕ ರೈಲಿನ ಜಾಡಿನಲ್ಲಿ….. ಇಂದಿನ ಪ್ರಜಾವಾಣಿಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶ್ರೀ ವಾದಿರಾಜರ ಲೇಖನ ಅನೇಕಲ್ ಪೋಲಿಸ್ ಠಾಣೆಯ ವ್ಯವಸ್ಥೆಯಲ್ಲಿ ಬಿ ಎಮ್ ಟಿ ಸಿ ಬಸ್ಸು ಹತ್ತಿ , ಚಿಕ್ಕಬಾಣಾವರ ರೈಲು ನಿಲ್ದಾಣಕ್ಕೆ ಹೊರಡಲು ಕಾಯುತ್ತಿದ್ದ ಜಾರ್ಖಂಡ್ ನ ರಂಜಿತ್ ಸಾಹು ಎಂಬ 22ವರ್ಷದ ಯುವಕನ ಹೆಗಲುಚೀಲದ ಜೊತೆಗೆ ಕೈಯಲ್ಲಿ ಇದ್ದದ್ದು ಕ್ರಿಕೆಟ್ ಬ್ಯಾಟು . ಸಿಮೆಂಟು – ಕಾಂಕ್ರೀಟ್ ಧೂಳಿನ ನಡುವೆಯೂ ರಂಜಿತನಲ್ಲೊಬ್ಬ ಧೋನಿ ಜೀವಿಸುತ್ತಿದ್ದನೇನೋ ? […]