ಖಿಲಾಫತ್ ಚಳುವಳಿಗೂ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ!? ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ, ದೇಶದ ಸ್ವಾತಂತ್ರ್ಯ ಗಳಿಕೆಗಾಗಿ ಮಹಾತ್ಮಾ ಗಾಂಧೀಜಿಯವರು ಹೂಡಿದ ಹೋರಾಟಗಳಲ್ಲಿ 1919ರ ಖಿಲಾಫತ್ ಚಳುವಳಿ ಮತ್ತು 1920-21ರ ಅಸಹಕಾರ ಆಂದೋಳನವನ್ನು, ಬ್ರಿಟಿಷರ ವಿರುದ್ಧ ಹೂಡಿದ ಪ್ರಥಮ ಹೋರಾಟ ಎಂದು ತಿಳಿಸಲಾಗಿದೆ. ಪಟ್ಟಾಭಿ ಸೀತಾರಾಮಯ್ಯನವರು ಬರೆದಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿಕೃತ ಇತಿಹಾಸದಲ್ಲೂ ಅಸಹಕಾರ ಆಂದೋಳನವನ್ನು ಸ್ವಾತಂತ್ರ್ಯಕ್ಕಾಗಿ ಹೂಡಿದ ಚಳುವಳಿ ಎಂದೇ ದಾಖಲಿಸಲಾಗಿದೆ. ಆದರೆ, ಖಿಲಾಫತ್ ಚಳುವಳಿ ಮತ್ತು […]

ಸರಿಯಾಗಿ 100 ವರ್ಷಗಳ ಕೆಳಗೆ, ನೆನಪಿರಲಿ ಆಗಿನ್ನೂ ತಾಲಿಬಾನ್, ಐಸಿಸ್ ತಲೆ ಎತ್ತಿರದ ಸಂದರ್ಭದಲ್ಲಿ, ಇಸ್ಲಾಮಿ ರಾಷ್ಟ್ರದ ಕಲ್ಪನೆ ಹೊತ್ತು ನಮ್ಮದೇ ದೇಶದ ಕೇರಳದಲ್ಲಿ ಮೊಪ್ಲಾ ಮುಸ್ಲಿಮರು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಅವರ ಇಸ್ಲಾಮಿಕ್ ಸ್ಟೇಟ್ ಸೇನೆಯಲ್ಲಿ 50 ಸಾವಿರಕ್ಕೂ ಮಿಕ್ಕಿದ ಅತ್ಯುಗ್ರ ಮೊಪ್ಲಾ ಮುಸ್ಲಿಮರು ಸೇರಿಕೊಂಡರು. ತಿಂಗಳುಗಳ ಕಾಲ ಮಲಬಾರ್ ಜಿಲ್ಲೆಯ ಆರು ತಾಲೂಕುಗಳಲ್ಲಿ ಹಿಂದೂಗಳನ್ನು ತಮ್ಮ ಭಯೋತ್ಪಾದನೆಯಿಂದ ಬೆಚ್ಚಿಬೀಳುವಂತೆ ಮಾಡಿದ್ದರು. ಹಿಂದೂಗಳ ಕೊಲೆ, ಆಸ್ತಿ ಹಾನಿ, ದರೋಡೆ, […]