ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರದ ಯುಪಿಎ ಸರಕಾರವು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಅಥವಾ ಎನ್.ಸಿ.ಟಿ.ಸಿ (National Counter Terrorism Center)ಜಾರಿಗೊಳಿಸುವ ಚಿಂತನೆ ನಡೆಸಿದೆ. ಅಮೆರಿಕದಲ್ಲಿ  9/11 ಘಟನೆ ನಡೆದ 36 ತಿಂಗಳೊಳಗೆ ಇದೇ ರೀತಿಯ ಕಾಯಿದೆಯನ್ನು ಜಾರಿಗೆ ತರಲಾಯಿತು. ಅಮೆರಿಕದಲ್ಲಿ ಇದು ಯಶಸ್ವಿಯಾಗಿರುವುದರಿಂದ ನಮಗೂ ಲಾಭವಾಗಬಹುದು, ಎಂಬುದಾಗಿ ಗೃಹಮಂತ್ರಿ ಪಿ.ಚಿದಂಬರಂ ತಿಳಿಸಿದ್ದಾರೆ. ಇದರ ಉದ್ದೇಶ ಭಯೋತ್ಪಾದನೆಗಳು ನಡೆಯದಂತೆ ನೋಡಿಕೊಳ್ಳುವುದು, ಭಯೋತ್ಪಾದನೆ ನಡೆದಲ್ಲಿ  ತ್ವರಿತವಾಗಿಪ್ರತಿಕ್ರಿಯಿಸುವುದು ಮತ್ತು ಭಯೋತ್ಪಾದನೆ ನಡೆಸಿದವರಿಗೆ ಅತ್ಯಧಿಕ ಹಾನಿಯಾಗುವಂತೆ […]