ಚುನಾವಣೆಯಲ್ಲಿ ನೊಟಾ ಇದ್ದಾಗ್ಯೂ, ಅದನ್ನು ಬಳಸದೇ ಲಭ್ಯವಿರುವ ಉತ್ತಮರಾದವರನ್ನು  ಬೆಂಬಲಿಸಿ ಆಯ್ಕೆಮಾಡಬೇಕು : ಸರಸಂಘಚಾಲಕ ಡಾ. ಮೋಹನ್ ಭಾಗವತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಐದು ಅಭ್ಯರ್ಥಿಗಳಲ್ಲಿ ನಮಗೆ ಇಷ್ಟವಾಗುವ ಯಾರೊಬ್ಬನೂ ಇಲ್ಲದಿರಬಹುದು. ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಲಭ್ಯವಿರುವ ಸರ್ವಶ್ರೇಷ್ಠರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೇ ಎಲ್ಲರಿಗೂ ಇಷ್ಟವಾಗುವ, ನೂರಕ್ಕೆ ನೂರು ಪ್ರತಿಶತ ಎಲ್ಲರೂ ಒಪ್ಪಿಕೊಳ್ಳುವಂತಹ ಅಭ್ಯರ್ಥಿ ಸಿಗುವುದು ಗಗನಕುಸುಮವೇ! ಇದು ಇಂದಿನ ಸಮಯದಲ್ಲಷ್ಟೇ ಅಲ್ಲದೇ, ಮಹಾಭಾರತ ಸಮಯದಿಂದಲೂ ಇದ್ದೇ ಇದೆ ಎಂದು ನಾವು ತಿಳಿದುಕೊಳ್ಳಬೇಕು. ಮಹಾಭಾರತದಲ್ಲಿ […]