4-8-1974. ಕರುಳ ಸಂಬಂಧ ಕಡಿದ ದಿನ ಎನ್ನುವಂತೆ ಆ ತಾರೀಕು ಅಚ್ಚಳಿಯದೆ ನನ್ನ ಮನದಲ್ಲಿ ಉಳಿದಿದೆ! ಸಾಂತಾಕ್ರೂಜ಼ ನಿಲ್ದಾಣದಿಂದ ಲಂಡನ್ ಅಭಿಮುಖವಾಗಿ ಹೊರಟ ವಿಮಾನದಲ್ಲಿ ಕುಳಿತ ನನ್ನ ಮನದಲ್ಲಿ ತುಮುಲ. ನನ್ನ ಕುಟುಂಬದವರಾರೂ ಮಾಡದ ಪರದೇಶ ಪ್ರವಾಸ ಮಾಡುತ್ತಿರುವ ಉತ್ಸಾಹ ಒಂದು ಕಡೆಯಾದರೆ ನಾನು ದೇಶದ್ರೋಹಿಯೇ ಎನ್ನುವ ಅಳುಕು ಮನದಾಳದಿಂದೆದ್ದು ಮತ್ತೆ ಮತ್ತೆ ಕಾಡುತ್ತಿತ್ತು. ಏಕೆಂದರೆ ನನ್ನನ್ನು ಹರಸಿ ಬೀಳ್ಕೊಟ್ಟ ಅಜ್ಜನ ಪಾದಸ್ಪರ್ಷಿಸಿ ನಮಸ್ಕರಿಸಿ ಹೊರಟಿದ್ದೆ, ಅವರು (ಸಾಲಿ ರಾಮಚಂದ್ರ […]