ಅವರ ವಯಸ್ಸು ಬರೋಬ್ಬರಿ 106! ಆದರೂ ಈ ಅಜ್ಜಿ ಕೃಷಿ ಕಾರ್ಯದಲ್ಲಿ ಬಲುಗಟ್ಟಿ. ಸಾವಯವ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿರುವ ತಮಿಳುನಾಡು ರಾಜ್ಯದ ಕೋಯಮತ್ತೂರು ಸಮೀಪದ ತೇಕಂಪತ್ತಿ ಗ್ರಾಮದ ಶತಾಯುಷಿ ಪಾಪಮ್ಮಾಳ್ ಅವರನ್ನು 2021ರ ಸಾಲಿನಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ. ೧೯೧೪ರಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಪಾಪಮ್ಮಾಳ್ ಬಾಲ್ಯದಲ್ಲಿಯೇ ತಂದೆತಾಯಿಯರನ್ನು ಕಳೆದುಕೊಂಡವರು. ಇಬ್ಬರು ಸೋದರಿಯರ ಜೊತೆಗೆ ಅಜ್ಜಿಯ ಆರೈಕೆಯಲ್ಲಿ ಬಡತನದಲ್ಲೇ ಬೆಳೆದರು. […]