24 ಜುಲೈ 2019, ಬೆಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ್ ಆಗಿದ್ದ ಶ್ರೀ ರಾಮಚಂದ್ರ ಕಾಸರಗೋಡು ಇನ್ನಿಲ್ಲ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಮೈಸೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಹೃದಯಾಘಾತದಿಂದ ಇವರು ನಿಧನರಾದರು. ಅವರ ಹುಟ್ಟೂರು ಮುಳ್ಳೇರಿಯಾದಲ್ಲಿ ನಾಳೆ ಅಂತ್ಯಕ್ರಿಯೆ ನಡೆಯಲಿದೆ. ಹಲವಾರು ದೇಶಭಕ್ತಿ ಗೀತೆಗಳು ಇವರ ಲೇಖನಿಯಿಂದ ಹೊರಹೊಮ್ಮಿವೆ. 2013ರಲ್ಲಿ ನಡೆದ ಮಂಗಳೂರು ವಿಭಾಗ ಸಾಂಘಿಕ್ ನ ವೈಯಕ್ತಿಕ ಗೀತೆ ‘ಯುವಮನದೊಳಿಂದು’ ಹಾಡಿನ […]