“ನನಗಿಂದು ತಿಳಿಯಿತು ನನ್ನ ಜನ್ಮೋದ್ದೇಶ ! ಪಶ್ಚಿಮ ದೇಶಗಳಿಗೆ ಹೋಗುವೆನು. ಅಲ್ಲಿ ಭೋಗವಾದಿಗಳ ಹೃದಯದಲ್ಲಿ ಸನಾತನ ವೇದಧರ್ಮದ ಉಪನಿಷತ್ ಪ್ರಖರಜ್ಯೋತಿಯನ್ನು ಬೀರುವೆನು. ಅವರು ಭಾರತಾಂಬೆಗೆ ತಲೆಬಾಗಿ ಆಕೆಗೆ ನೆರವಾಗುವಂತೆ ಮಾಡುವೆನು. ಆಕೆಯ ದುರ್ಗತಿಯನ್ನು ಪರಿಹರಿಸಲೆಳಸುವೆನು. ಭಾವಸಮಾಧಿ ಅಲ್ಲಿರಲಿ ! ನಿರ್ವಿಕಲ್ಪ ಸಮಾಧಿ ಸದ್ಯಕ್ಕೆ ಒತ್ತಟ್ಟಿಗಿರಲಿ ! ನನ್ನಾತ್ಮಮುಕ್ತಿ ಸದ್ಯಕ್ಕೆ ಮುಕ್ತಾಯವಾಗಿರಲಿ! ನಿಜವಾದ ಧರ್ಮವನ್ನು ಜಗತ್ತಿಗೆ ಬೋಧಿಸುವೆನು. ಜಗತ್ತನ್ನು ಎಚ್ಚರಿಸುವೆನು. ಭರತಖಂಡವನ್ನು ಮೇಲೆತ್ತುವೆನು. ಹೇ ಜನನಿ, ಪುಣ್ಯಭೂಮಿ, ಆರ್ಯಮಾತೆ, ವೇದಪೂಜಿತೆ, ನನ್ನನ್ನು […]