ವನದೇವತೆಯ ಮಡಿಲ ಮಕ್ಕಳು ಅಪರಾಧಿಗಳೆಂಬ ಹಣೆಪಟ್ಟಿ ಹೊತ್ತ ಕಥೆ ! ಡಾ.ರೋಹಿಣಾಕ್ಷ ಶಿರ್ಲಾಲು, ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ. (ಲೇಖನ ೨೫ ಏಪ್ರಿಲ್ ೨೦೨೦ ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.) ಅರಣ್ಯಗಳನ್ನೇ ತಮ್ಮ ನೆಲೆಯನ್ನಾಗಿ ಮಾಡಿಕೊಂಡು ಶತಶತಮಾನಗಳಿಂದ ಗಿಡ-ಮರ, ಬೆಟ್ಟ-ಗುಡ್ಡ, ತೊರೆ-ಝರಿಗಳನ್ನು ದೇವರಂತೆ ಕಂಡು , ಪ್ರಕೃತಿಯನ್ನೇ ಪೂಜಿಸಿಕೊಂಡು, ತಾಯಿಯ ಮಡಿಲಾಗಿ ಕಂಡು ಅಲ್ಲಿ ಸಿಗುವ ಆಹಾರೋತ್ಪನ್ನಗಳನ್ನು ಬಳಸುತ್ತಾ, ಬದುಕುತ್ತಾ ಬಂದ ವನದ ಮಕ್ಕಳೇ ವನವಾಸಿಗಳು […]