ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ (ಕಲಿಯುಗಾಬ್ದ 5113, ಶ್ರೀ ಖರ ಸಂವತ್ಸರ ಶ್ರಾವಣ ಪೂರ್ಣಿಮಾ 13 ಆಗಸ್ಟ್ 2011) ರಕ್ಷಾಬಂಧನ ಸಂದೇಶ ಆತ್ಮೀಯ ಸಹೋದರ ಬಂಧುಗಳೇ, ತ್ಯಾಗಭೂಮಿ, ಯೋಗಭೂಮಿ ಎಂದು ಹೆಸರಾಗಿದ್ದ ನಮ್ಮ ಭಾರತ ದೇಶದಲ್ಲಿ ಭ್ರಷ್ಟಾಚಾರ ಎಂದಿಗಿಂತಲೂ ಭರ್ಜರಿಯಾಗಿ ತಾಂಡವನೃತ್ಯ ಮಾಡುತ್ತಿದೆ. ನಾಡಿನ ನೆಲ, ಜಲದಿಂದ ಹಿಡಿದು ಕಲೆ, ಕ್ರೀಡಾ ಕ್ಷೇತ್ರಗಳವರೆಗೂ ಭ್ರಷ್ಟಾಚಾರ ಹಬ್ಬಿದೆ. ಎಲ್ಲೆಡೆ ಪಸರಿಸಿರುವ ಈ ವಿಷಜ್ವಾಲೆ ಜನಸಾಮಾನ್ಯರ ಬದುಕನ್ನು ನರಕವನ್ನಾಗಿಸುತ್ತಿದೆ. ಹಗರಣಗಳ ಮೂಲಕ ಅಕ್ರಮ ಸಂಪತ್ತಿನ ಗಳಿಕೆ, ಕಪ್ಪು ಹಣ […]