ವಿಜಯದಶಮಿಯನ್ನು ಇಡೀ ಸಮಾಜ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಶಕ್ತಿ ಮತ್ತು ನವದುರ್ಗೆಯರ ಆರಾಧನೆಯ ಉತ್ಸವವಾಗಿದೆ ಎಂದು ಸೇವಾ ಭಾರತಿ ಕೊಡಗು ಜಿಲ್ಲಾಧ್ಯಕ್ಷರಾದ ಟಿ.ಸಿ.ಚಂದ್ರನ್ ಹೇಳಿದರು. ಮಡಿಕೇರಿ ಗ್ರಾಮಾಂತರ ತಾಲೂಕಿನ ಮರಗೋಡು ಮಂಡಲದ ವಿಜಯದಶಮಿ ಉತ್ಸವದಲ್ಲಿ ಬೌದ್ಧಿಕ್ ಮಾಡಿದರು. ದೇಶವನ್ನು ಪರಮ ವೈಭವದ ಕಡೆಗೆ ಕೊಂಡೊಯ್ಯುವುದು ಸಂಘದ ಮೊದಲ ಆಧ್ಯತೆಯಾಗಿದ್ದು, ತಾಯಿ ಭಾರತಿಯ ಸೇವೆಗೆ ಸಂಘದ ಸ್ವಯಂಸೇವಕರು ತನು,ಮನ,ಧನದ ಮೂಲಕ ತಮ್ಮ ಜೀವನವನ್ನು ಸಮರ್ಪಣೆ ಮಾಡುತ್ತಾರೆ. ಸಂಘದ ಸ್ವಯಂಸೇವಕರಿಗೆ ಸಮಾಜದ ಹೊಣೆಗಾರಿಕೆಯಿದ್ದು, […]

ಈ ವರ್ಷ ನಮ್ಮ ಸ್ವಾತಂತ್ರ್ಯದ 75 ನೇ ವರ್ಷ. ನಾವು 15 ಆಗಸ್ಟ್ 1947 ರಂದು ಸ್ವತಂತ್ರರಾದೆವು. ದೇಶವನ್ನು ಮುನ್ನಡೆಸಲು ನಾವು ನಮ್ಮ ದೇಶದ ಸೂತ್ರಗಳನ್ನು ನಮ್ಮ ಕೈಯಲ್ಲಿ ತೆಗೆದುಕೊಂಡಿದ್ದೇವೆ. ಅದು ಸ್ವಾಧೀನತೆಯಿಂದ ಸ್ವಾತಂತ್ರ್ಯದೆಡೆಗಿನ ನಮ್ಮ ಪ್ರಯಾಣದ ಆರಂಭದ ಒಂದು ಬಿಂದುವಾಗಿತ್ತು. ಈ ಸ್ವಾತಂತ್ರ್ಯ ನಮಗೆ ರಾತ್ರೋರಾತ್ರಿ ಸಿಕ್ಕಿಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಸ್ವತಂತ್ರ ಭಾರತದ ಚಿತ್ರಣ ಹೇಗಿರಬೇಕು, ಭಾರತೀಯ ಪರಂಪರೆಯ ಅನುಸಾರವಾಗಿ, ನಾವೆಲ್ಲಾ ಸಮಾನರು ಎಂಬು ಮನೋಭಿಲಾಷೆಯೊಂದಿಗೆ ದೇಶದ […]

ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತರ ವಿಜಯದಶಮಿ ಭಾಷಣದ ಮುಖ್ಯ ಅಂಶಗಳು ಸ್ವಾತಂತ್ರ್ಯ ಸಂಗ್ರಾಮ ಹಲವಾರು ಜಾತಿ ಸಮುದಾಯಗಳಿಗೆ ಸೇರಿದ, ವಿವಿಧ ಪ್ರದೇಶಗಳಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಇರುಳು ಕಳೆದು ಹಗಲು ಆಗುವುದರೊಳಗಾಗಿ ನಮಗೆ ಸ್ವಾತಂತ್ರ್ಯ್ರ ಸಿಗಲಿಲ್ಲ. ಶಾಂತಿಯುತ ಧರಣಿಗಳಿಂದ ಹಿಡಿದು ಸಶಸ್ತ್ರ ಹೋರಾಟಗಳವರೆಗೆ ಎಲ್ಲಾ ವಿಧಾನಗಳು ಅಂತಿಮವಾಗಿ ಸ್ವಾತಂತ್ರ್ಯದ ಗುರಿ ಸಾಧಿಸುವಲ್ಲಿ ಪರ್ಯವಸನಗೊಂಡವು. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶ ವಿಭಜನೆಯ ಗಾಯದ ಗುರುತು […]

ಆರೆಸ್ಸೆಸ್ ಸರಸಂಘಚಾಲಾಕರ ವಿಜಯದಶಮಿಯ ಭಾಷಣದ ವಿವರಣಾತ್ಮಕ ವಿಶ್ಲೇಷಣೆ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು (ಸರಸಂಘಚಾಲಕರು) ತಮ್ಮ ಸಂಘಟನೆಯ ವಾರ್ಷಿಕ ಸ್ಥಾಪನಾ ದಿನವಾದ ವಿಜಯದಶಮಿಯಂದು ಸ್ವಯಂಸೇವಕರನ್ನುದ್ದೇಶಿಸಿ ಒಂದು ಭಾಷಣವನ್ನು ಮಾಡುತ್ತಾರೆ. ಇದನ್ನು ದಿಕ್ಸೂಚೀ ಭಾಷಣ ಎಂದು ಪರಿಗಣಿಸಲಾಗುತ್ತದೆ. ಈ ಭಾಷಣವು ಸಂಘಟನೆಗಷ್ಟೇ ಅಲ್ಲದೇ ಭಾರತೀಯ ಸಮಾಜ ಮತ್ತು ಇತರರಿಗೂ ಅನ್ವಯಿಸುವ ವಿಷಯಗಳನ್ನು ಒಳಗೊಳ್ಳುವುದರಿಂದ ಎಲ್ಲರ ಆಸಕ್ತಿಯ ಪರಿಮಿತಿಯಲ್ಲೇ ಇರುತ್ತದೆ. ಈ ವರ್ಷದ (ಶುಕ್ರವಾರ, […]

ಆರೆಸ್ಸೆಸ್ ನ ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಹಿಂದಿ ಭಾಷಣದ ಕನ್ನಡಾನುವಾದ ಭಾನುವಾರ, ಅಕ್ಟೊಬರ್ ೨೫ ೨೦೨೦ ಈ ವರ್ಷದ ವಿಜಯದಶಮಿಯ ಸಂದರ್ಭ ನಮಗೆಲ್ಲರಿಗೂ ತಿಳಿದಿರುವಂತೆ ಸಂಭ್ರಮದ ಸಂಖ್ಯೆಯ ದೃಷ್ಟಿಯಿಂದ ಕಡಿಮೆಯಾಗಿದೆ. ಅದಕ್ಕೆ ಕಾರಣವೇನೆಂಬುದನ್ನೂ ನಾವು ಅರಿತಿದ್ದೇವೆ, ಕೊರೋನಾ ವೈರಾಣುವಿನ ಸಾಮೂಹಿಕ ಹರಡುವಿಕೆಯನ್ನು ತಡೆಯಲೋಸುಗ ಸಾಮಾಜಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಲಾಗಿದೆ. ಈ ವರ್ಷದ ಮಾರ್ಚಿ ತಿಂಗಳಿನಿಂದ ಕೊರೋನಾ ಸಾಂಕ್ರಾಮಿಕದ ಚರ್ಚೆ […]

ಸತ್ಶಕ್ತಿಯ ಸುಸಂಘಟಿತ ಪ್ರರೂಪ ಲೇಖನ: ಕಿರಣ ಹೆಗ್ಗದ್ದೆ, ಶಿವಮೊಗ್ಗ, (ಲೇಖನ ಶಿವಮೊಗ್ಗ ಟೈಮ್ಸ್ ನಲ್ಲಿ 24 ಅಕ್ತೋಬರ್ ರಂದು ಪ್ರಕಟಗೊಂಡಿದೆ) ಮನುಷ್ಯನ ಪಾಶವೀ ಶಕ್ತಿಗಳ ಮೇಲೆ ವಿಜಯಸಾಧಿಸುವ ಪರ್ವವೇ ವಿಜಯದಶಮಿ. ಶಮಾ ಗುಣವು ಯಾರಿಗಿರುತ್ತದೆಯೋ ಆತ ಸದಾ ವಿಜಯಪಥದಲ್ಲಿ ಮುಂದುವರಿಯುತ್ತಾನೆಂದು ಸೂಚಿಸುವಂತೆ ಇದನ್ನು ವ್ಯಾಕರಣ ವಿನೋದಕ್ಕಾಗಿ ವಿಜಯದ ಶಮಿ ಎಂದೂ ಹೇಳುವುದುಂಟು.ದುಷ್ಟರ ಮೇಲೆ ಶಿಷ್ಟರ ವಿಜಯವನ್ನು ಸಾರುವ ದಿನವಿದು. ತಾಯಿ ಚಾಮುಂಡಿಯು ಮಹಿಷಾಸುರನನ್ನು ಅವನ ಸೇನ್ಯಸಮೇತ ವಧಿಸಿದ ದಿನವಿದು. ಶ್ರೀರಾಮನು […]