“ಚೈತನ್ಯಮಯೀ” ಪುಸ್ತಕದ ಮುನ್ನುಡಿಯಿಂದ ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳು ಮತ್ತು ಕಾರ್ಯ ಕರ್ನಾಟಕದಲ್ಲಿ ಬೇರೂರುತ್ತಿದ್ದವು. ಸಂಘದ ಕಾರ್ಯ ಬೆಳೆಯುತ್ತಿತ್ತು. ಇದರ ಜೊತೆಗೆ ಸಂಘದ ವಿಚಾರ, ಕಾರ್ಯಗಳಿಗೆ ವಿರೋಧವೂ ವ್ಯಕ್ತವಾಗುತ್ತಿತ್ತು. ಮಹಾತ್ಮ ಗಾಂಧಿಯವರ ಹತ್ಯೆ ಮಿಥ್ಯಾರೋಪವೂ ಸಂಘಕ್ಕೆ ಅಂಟಿಕೊಂಡಾಗ ವಿರೋಧ ವ್ಯಾಪಕವಾಗಿತ್ತು. ಸರಕಾರಗಳ ನಿರ್ಬಂಧಕ್ಕೂ ಒಳಗಾಗಿತ್ತು. ಇಂತಹ ಸಾಮಾಜಿಕ-ರಾಜಕೀಯ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂಘದ ಕಾರ್ಯವನ್ನು ಬೆಳಸುವುದರಲ್ಲಿ ಅನುಪಮ ಕೊಡುಗೆ ನೀಡಿದ್ದು ಮಾ. ರುಕ್ಮಿಣಕ್ಕನವರ ಮನೆ – […]