ಇದು ನಮ್ಮದೇ ಸಮಾಜ. ಕೋವಿಡ್19 ಹೊಡೆದೋಡಿಸುವವರೆಗೂ ಸೇವೆ ನಿರಂತರ ನಡೆಯುತ್ತದೆ : ಡಾ. ಮೋಹನ್ ಭಾಗವತ್
ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಇಂದು ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಭಾಷಣ ಮಾಡಿದರು ಮಹಾರಾಷ್ಟ್ರದ ನಾಗಪುರದಿಂದ ಮಾತನಾಡಿದ ಅವರು ಕೊರೋನಾದಿಂದಾಗಿ ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಸೇವಾ ಕಾರ್ಯದ ಬಗ್ಗೆ ಮಾತನಾಡಿದರು. ಯೂಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ ಮಾಧ್ಯಮಗಳಲ್ಲಿ ನೇರಪ್ರಸಾರ ಆದ ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ. ಭಾಷಣವನ್ನು ಪೂರ್ಣ ಕೇಳಲು ಯೂಟ್ಯೂಬ್ ಲಿಂಕ್ ನೋಡಿರಿ. https://youtu.be/EmQYTp-SyB0 ಸಂಘ ಮಾಡುತ್ತಿರುವ ಸೇವೆ ಪ್ರಚಾರಕ್ಕೋಸ್ಕರ ಅಲ್ಲ. ನಮ್ಮ ಸಮಾಜ, ನಮ್ಮ ದೇಶಗಳ ಬಗ್ಗೆ ಸಂಘದ ಸ್ವಯಂಸೇವಕರಿಗೆ ಇರುವ ಪ್ರೇಮದಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಜೂನ್ ವರೆಗಿನ ತನ್ನ ಎಲ್ಲ ಕಾರ್ಯಕ್ರಮಗಳನ್ನು ಆರೆಸ್ಸೆಸ್ ನಿಲ್ಲಿಸಿದೆ ರದ್ದುಗೊಳಿಸಿದೆ. ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ನಾಗರಿಕರಾದ ನಾವೆಲ್ಲರೂ ಪಾಲಿಸಲೇಬೇಕು. ಹಾಗೆಯೇ, ಇದು ನಮ್ಮದೇ ಸಮಾಜ. ಸಂಕಷ್ಟದ ಸಂದರ್ಭದಲ್ಲಿ ನಾವು ಸಮಾಜದ ಜೊತೆ ನಿಲ್ಲಬೇಕು. ...