ಕೆಲ ದಿನಗಳ ಹಿಂದೆ ಪುಲ್ವಾಮಾದಲ್ಲಿ ಜೈಶ್ ಏ ಮೊಹಮ್ಮದ್ ಸಂಘಟನೆಯಿಂದ ನಡೆಸಲಾಗಿದ್ದ ಭಯೋತ್ಪಾನ ಕೃತ್ಯದಿಂದಾಗಿ ಇಡಿಯ ದೇಶದಲ್ಲಿ ಕೋಪ ಹಾಗೂ ಅಸಮಾಧಾನ ಮನೆಮಾಡಿತ್ತು. ಇಂದು ಪಾಕಿಸ್ತಾನದಲ್ಲಿ ನೆಲೆಸಿದ್ದ ಜೈಶ್ ಎ ಮೊಹಮ್ಮದ್ ಶಿಬಿರಗಳ ಮೇಲೆ ಭಾರತೀಯ ವಾಯುಪಡೆಯು ನಡೆಸಿರುವ ವೈಮಾನಿಕ ದಾಳಿಯಲ್ಲಿ ಆತಂಕವಾದಿಗಳ ಶಿಬಿರಗಳು ನುಚ್ಚುನೂರಾಗಿವೆ. ಕೋಟಿ ಕೋಟಿ ಭಾರತೀಯರ ಭಾವನೆಗಳನ್ನು ಕಾರ್ಯಗತಿಗೆ ತರುವ ಕೆಲಸ ಇದಾಗಿದೆ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ವಾಯುಪಡೆ ಹಾಗೂ ಕೇಂದ್ರ […]