ಮನೆಯಿಂದ ಹೊರ ಜಗತ್ತಿಗೆ ತಲುಪಲು ಬಿದಿರಿನ ಸೇತುವೆ ನಿರ್ಮಿಸಿದ ಸೇವಾಭಾರತಿ ಮೂಲಮಠಂ: ಕೇರಳದ ಇಡುಕ್ಕಿ ಜಿಲ್ಲೆಯ ಆರಪ್ಪುಳಂ‌ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಟುಂಬವೊಂದಕ್ಕೆ ಮಳೆಗಾಲದಲ್ಲಿ ಹೊರಜಗತ್ತಿಗೆ ಸಂಪರ್ಕ ಇಲ್ಲದಿರುವುದನ್ನು ತಿಳಿದ ಸೇವಾಭಾರತಿಯ ಕಾರ್ಯಕರ್ತರು ತಾತ್ಕಾಲಿಕವಾದ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ವಳಯಂತೊಟ್ಟಿ ಎಂಬಲ್ಲಿರುವ ಸನ್ನಿ ಅವರು ಊರ ಹೊರಭಾಗದ ಸರಕಾರೀ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಿ ಅವರ ತಾಯಿ ,ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದು ಸೇವಾಭಾರತಿ ನಿರ್ಮಿಸಿದ ತಾತ್ಕಾಲಿಕವಾದ ಸೇತುವೆಯಿಂದ […]

ಚಿಕ್ಕಮಗಳೂರಿನಲ್ಲಿ, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಓಡಾಟ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಅತ್ಯಂತ ಕಡಿಮೆ ದರದಲ್ಲಿ ರೈತರಿಂದ ತರಕಾರಿ ಹಾಗೂ ಹಣ್ಣುಗಳನ್ನು ಕೊಂಡುಕೊಂಡು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಆರೆಸ್ಸೆಸ್, ಸೇವಾ ಭಾರತಿ ಕಾರ್ಯಕರ್ತರು ನಿರ್ವಾಹಿಸುತ್ತಿದ್ದಾರೆ 80 ಜನ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, 12 ಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕೊಳ್ಳುವಾಗ  ಸಾಮಾಜಿಕ ಅಂತರ ಕಾಪಾಡಬೇಕೆಂದು ಸಾರ್ವಜನಿಕರಲ್ಲಿ  ಕಾರ್ಯಕರ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ರೈತರೊಬ್ಬರು […]