ಪೇಶ್ವ ಬಾಜಿರಾವ್ – ಈ ಹೆಸರು ಕೇಳದವರ್ಯಾರು? ಛತ್ರಪತಿ ಶಿವಾಜಿ ಮಹಾರಾಜರ ನಂತರ ಮರಾಠ ಸಾಮ್ರಾಜ್ಯವನ್ನು ದೆಹಲಿಯವರೆಗೆ ಕೊಂಡೊಯ್ದು, ಮೊಘಲರು ಹಾಗೂ ಇತರ ಮುಸ್ಲಿಂ ದೊರೆಗಳನ್ನು ಹುಟ್ಟಡಗಿಸಿದ ಧೀರ ಮರಾಠ ಅವನು. 1700-1740 ರವರೆಗೆ ಜೀವಿಸಿದ್ದ ಬಾಜಿರಾವ್ ಸುಮಾರು 44 ಯುದ್ಧಗಳನ್ನು ಸಾರಿ, ಪ್ರತಿಯೊಂದರಲ್ಲೂ ವಿಜಯಿಯಾಗಿ ಅಜೇಯನಾದವನು. ಇಂತಹ ವೀರನ ನೆರಳಾಗಿ ಇದ್ದು ಅವನ ಪ್ರತಿಯೊಂದು ಜೈತ್ರ ಯಾತ್ರೆಯಲ್ಲಿ ಶ್ರೀರಾಮನಿಗೆ ಲಕ್ಷ್ಮಣನಿದ್ದಂತೆ ಇದ್ದವನೇ ಬಾಲಾಜಿ ವಿಶ್ವನಾಥರ ಎರಡನೇ ಮಗ ಹಾಗೂ ಬಾಜಿರಾವ್ ತಮ್ಮ […]

ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಠಿಣಾತಿ ಕಠಿಣ ಸನ್ನಿವೇಶಗಳು ಎದುರಾಗುತ್ತವೆ. ಅವು ಹೇಗಿರುತ್ತವೆಂದರೆ, ಅವುಗಳ ಎದುರು ನಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತವೆ. ಕಣ್ಣಿದ್ದೂ ಕುರುಡಾದೆವಾ? ಕಿವಿಯಿದ್ದೂ ಕಿವುಡರಾದೆವಾ? ಬಾಯಿಯಿದ್ದೂ ಮೂಕರಾದೆವಾ? ಮನಸ್ಸಿದ್ದೂ ಆಲೋಚನಾಹೀನರಾದೆವಾ? ಎಂಬಂತಾಗುತ್ತದೆ. ಈ ವ್ಯಾಖ್ಯಾನಕ್ಕೆ ಅನ್ವಯವಾಗುವಂತೆ ಮೊನ್ನೆ-ಮೊನ್ನೆ ತಾನೆ (ಡಿಸೆಂಬರ್ 8) ಸಂಭವಿಸಿರುವ ಭಾರತದ ವೀರಸೈನಿಕರ ದುರಂತಕರ ಅಂತ್ಯವು ಭಾರತೀಯರನ್ನು ಸ್ತಬ್ಧವಾಗಿಸಿದೆ. ಮಿ-17 ಯುದ್ಧವಿಮಾನದಲ್ಲಿ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ […]