ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ‘ಮಂಥನ’ ಜಯನಗರ ವೇದಿಕೆಯ ವತಿಯಿಂದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಪ್ರಯುಕ್ತ, ಸ್ವರಾಜ್ಯ-75ರ ಕಾರ್ಯಕ್ರಮ‌ ಜರುಗಿತು. ಖ್ಯಾತ ಆಯುರ್ವೇದ ವೈದ್ಯೆ ಡಾ|| ಶುಭಮಂಗಳ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಅವರು ವಿಚಾರ ಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಅಖಂಡ ಭಾರತದ ಚಿತ್ರಣ ಭಾರತದ ಮೇಲೆ ಮೊಘಲರು, ಡಚ್ಚರು, ಬ್ರಿಟೀಷರು ಆಕ್ರಮಣ ಮಾಡಿದ ಬಗೆ […]