ಜನವರಿ 11, 1966 ಲಾಲ್ ಬಹದ್ದೂರ್ ಶಾಸ್ತ್ರಿಗಳು ತಾಷ್ಕೆಂಟ್ ನಲ್ಲಿ ತೀರಿಕೊಂಡರು. ಅವರ ಸಾವಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಬಂದಿರುವ ಪುಸ್ತಕದ ಪರಿಚಯ ಲೇಖನ: ಪ್ರವೀಣ್ ಪಟವರ್ಧನ್ ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ನಾಯಕರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಆಯಾಮದಲ್ಲಷ್ಟೇ ಅಲ್ಲದೆ, ಅದರ ಸುತ್ತ ಬೆಸೆದಿರುವಂತಹ ಅನೇಕ ವಿಷಯಗಳಲ್ಲಿ ಮೋಸ ವಂಚನೆಗಳನ್ನು ಕಾಣಬಹುದಾಗಿರುತ್ತದೆ. ಕಾಲಕ್ರಮೇಣ ಹೊಸ ಸತ್ಯಗಳು ಬೆಳಕು ಕಂಡಂತೆ ತಪ್ಪಿತಸ್ಥರ ಮುಖವಾಡ ಕಳಚಲಾರಂಭಿಸುತ್ತದೆ.  ಕಾಶ್ಮೀರದಲ್ಲಿ ಜನ ಸಂಘದ […]

17ಜುಲೈ 2020, ಮೈಸೂರು:  ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಬದುಕಿನ ಕುರಿತಾದ ಕೃತಿ “ತಾಷ್ಕೆಂಟ್ ಡೈರಿ” ಶುಕ್ರವಾರ, ಕನ್ನಡದ ಖ್ಯಾತ ಕಾದಂಬರಿಕಾರರು, ಸಾಹಿತಿಗಳಾದ ಡಾ. ಎಸ್ ಎಲ್ ಭೈರಪ್ಪನವರ ಮೈಸೂರಿನ ಸ್ವಗೃಹದಲ್ಲಿ  ಲೋಕಾರ್ಪಣೆಗೊಂಡಿದೆ.  ಹಿರಿಯ ಕಾದಂಬರಿಕಾರರೂ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್.ಎಲ್.ಭೈರಪ್ಪನವರು ಲೇಖಕರಾದ ಎಸ್.ಉಮೇಶ್‍ರವರಿಂದ ಪ್ರಥಮ ಕೃತಿಯನ್ನು ಸ್ವೀಕರಿಸುವ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅನಂತರ ಕೃತಿ ಮತ್ತು ಶಾಸ್ತ್ರೀಜಿಯವರನ್ನು ಕುರಿತು ಲೇಖಕರ ಜೊತೆ ತಮ್ಮ ಹಳೆಯ […]

ಶ್ರೀ ಎಸ್ ಉಮೇಶ್ ರಚಿಸಿರುವ ‘ತಾಷ್ಕೆಂಟ್ ಡೈರಿ’ ಲೋಕಾರ್ಪಣೆಗೊಳ್ಳಲು ಸಿದ್ಧ. ಮೈಸೂರಿನ ಲೇಖಕ ಎಸ್. ಉಮೇಶ್‍ರವರು ರಚಿಸಿರುವ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಕುರಿತ ಪುಸ್ತಕ `ತಾಷ್ಕೆಂಟ್ ಡೈರಿ’ ಈ ವಾರ ಮೈಸೂರಿನಲ್ಲಿ ಬಿಡುಗಡೆಗೊಳ್ಳುತ್ತಿದೆ. ಖ್ಯಾತ ಭಾಷಾತಜ್ಞರೂ ಹಿರಿಯರೂ ಆದ ಡಾ. ಪ್ರಧಾನ್ ಗುರುದತ್ತರವರ ಉಪಸ್ಥಿತಿಯಲ್ಲಿ ನಾಡಿನ ಹಿರಿಯ ಕಾದಂಬರಿಕಾರರೂ ಸರಸ್ವತಿ ಸಮ್ಮಾನ್ ಪುರಸ್ಕೃತರೂ ಆದ ಡಾ.ಎಸ್.ಎಲ್. ಭೈರಪ್ಪನವರಿಗೆ ಮೊದಲ ಪ್ರತಿಯನ್ನು ಸಮರ್ಪಣೆ ಮಾಡುವ ಮೂಲಕ ಪುಸ್ತಕ ಜುಲೈ 17, […]