11 ಆಗಸ್ಟ್ 2019, ಬೆಂಗಳೂರು: ಮಹಾನಗರದ, ಅಕ್ಷಯನಗರದ ವಾದಿರಾಜ ಕಲಾ ಭವನದಲ್ಲಿ ಭಾನುವಾರದಂದು “ಮಂಥನ” ಚಿಂತಕರ ಚಾವಡಿಯ ಮೊದಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ‘ನವ ಭಾರತ’ದ (New India) ವಿಷಯದ ಭಾಷಣಕಾರರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿನಯ್ ಬೈಜಲ್ ರವರು ವಹಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇಗೂರು ನಗರ ಸಂಘಚಾಲಕರಾಗಿರುವ ಸೀತಾರಾಮ್ ಭಟ್ ರವರೂ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. […]