ಆರ್ ಎಸ್ ಎಸ್ ನಿಂದ ಥಲಸ್ಸಿಮಿಯಾ ಬಾಧಿತ ಮಕ್ಕಳಿಗೆ ವಿಷೇಶ ರಕ್ತ ದಾನ ಶಿಬಿರ ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿರುತ್ತದೆ. ಈ ನಿಟ್ಟಿನಲ್ಲಿ ಅಕ್ಟೋಬರ್ ೨ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ವಿದ್ಯಾಪೀಠ ನಗರದ ವತಿಯಿಂದ, ಥಲಸ್ಸಿಮಿಯಾ ಬಾಧಿತ ಮಕ್ಕಳಿಗೆ ರಕ್ತ ಪೂರೈಕೆ ಮಾಡುವ ಸಲುವಾಗಿ ವಿಶೇಷ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ವಿದ್ಯಾಪೀಠ ನಗರ ಹಾಗೂ ಸುತ್ತ ಮುತ್ತಲಿನ ನಿವಾಸಿಗಳು, ಸಂಘದ ಸ್ವಯಂಸೇವಕರು […]